ಭಾನುವಾರ, ಫೆಬ್ರವರಿ 19, 2023

ಪ್ರಕೃತಿಯನ್ನು ಪ್ರೀತಿಸುವುದರಲ್ಲಿ ಇರುವ ಆನಂದ ಮತ್ತಾವುದರಲ್ಲಿಯೂ ಇಲ್ಲ.


ಪ್ರಕೃತಿಯ ಒಂದು ಭಾಗವೇ ನಾವಾದರೂ ಸಹ ಅದರ ಅನುಭವದಿಂದ‌ ದೂರ ಇರುತ್ತೇವೆ. ಇದಕ್ಕೆ ಮುಖ್ಯ ಕಾರಣವೇ ನಮ್ಮ ಪ್ರಜ್ಞೆಯ ಕೊರತೆ. ನೈಸರ್ಗಿಕವಾಗಿ ನಮ್ಮ ಪ್ರಜ್ಞಾ ಸ್ತರವು ಹೆಚ್ಚಾಗುವ ಸೂಕ್ತ ದಿನವೇ ಮಹಾಶಿವರಾತ್ರಿಯ ದಿನ. ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ದಿನಾಂಕ:18-02-2023 ರಂದು ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಸೇರುವ ಎಲ್ಲ ಜನರೂ ಒಗ್ಗೂಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೇಮದ ನೆನಪಿಗಾಗಿ ಆಲದ ಮರವನ್ನು ನೆಡಲಾಯಿತು ಮತ್ತು ಅದು ಒಂದು ಸಾವಿರಕ್ಕಿಂತ ಅಧಿಕ ವರ್ಷ ಬಾಳಲಿ ಎಂದು ಎಲ್ಲರೂ ಒಗ್ಗೂಡಿ ಸಂಕಲ್ಪ ಮಾಡಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ
ನಡೆಯುವ ಮಹಾಶಿವರಾತ್ರಿ ಸಂಭ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ದೊಡ್ಡ ಪರದೆಯ ಮೇಲೆ ಸ್ಥಳೀಯ ಈಶಾ ಫೌಂಡೇಷನ್ ನ ಸ್ವಯಂ ಸೇವಕರು ಸೇರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಸದ್ಗುರು ಅವರ ಸ್ವರೂಪವಾದ ಸನ್ನಿಧಿ ಯನ್ನು ಕೋಯಿಮತ್ತೂರಿನ ಈಶ ಯೋಗ ಆಶ್ರಮದಿಂದ ತರಿಸಿ ಜನರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. 

ಕಾರ್ಯಕ್ರಮದ ವಿಡಿಯೋ:

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

2 ಕಾಮೆಂಟ್‌ಗಳು:

  1. ಲೇಖನ ಗಳು ಅತ್ಯುತ್ತಮವಾಗಿ ಮೂಡಿ ಬರುತ್ತಿವೆ, ನಡೆದಾಡುವ ದೇವರ ಆಶಯಗಳನ್ನು ಜೀವಂತವಾಗಿರಿಸುವ ಸತ್ಕಾರ್ಯ ಮತ್ತು ಸದ್ಗುರುಗಳ ಉದ್ದೇಶ ಪಸರಿಸಲು ಸೇವೆ ಸಲ್ಲಿಸುತ್ತಿರುವ ತಮಗೆ ಅಭಿನಂದನೆಗಳು,,

    ಪ್ರತ್ಯುತ್ತರಅಳಿಸಿ
  2. ಒಂದು ಸುಂದರ, ಅನುಭವ ನೀಡುವ ಒಳ್ಳೆಯ ಕಾರ್ಯಕ್ರಮವಾಗಿದೆ ಧನ್ಯವಾದಗಳು ಗುರುಗಳೇ

    ಪ್ರತ್ಯುತ್ತರಅಳಿಸಿ