ಶುಕ್ರವಾರ, ಏಪ್ರಿಲ್ 28, 2023

ಕಲಬುರಗಿ-ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ ರಾಜ್ಯಾದ್ಯಂತ ಮನವಿ ಪತ್ರ ಸಲ್ಲಿಕೆ ಪ್ರಾರಂಭ

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.‌  ಈ ಕಾನೂನಿನ ಅಡಿಯಲ್ಲಿ ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳಿಗೆ ಬೇಡಿಕೆ  ಸಲ್ಲಿಸುವ ಸೂಕ್ ಸಮಯವೇ ಚುನಾವಣೆ ಸಮಯ.  ಹಾಗಾಗಿ, ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ  ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ  ಯೋಜನೆ ಜಾರಿಗಾಗಿ ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ.
ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದು. ವೈಯಕ್ತಿಕವಾಗಿ ಹಾಗೂ ಸಂಘ-ಸಂಸ್ಥೆಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಬಹುದು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಲು ಇಚ್ಚಿಸುವವರಿಗೆ ಮತ್ತು ಗುಣಮಟ್ಟದ ಆಹಾರ ಸೇವನೆ ಮಾಡಲು ಇಚ್ಚಿಸುವವರಿಗೆ ಈ ಕಾನೂನು ವರದಾನವಾಗಿದೆ. ಹಾಗಾಗಿ, ಆಹಾರ ಸೇವನೆ ಮಾಡುವವರೆಲ್ಲರೂ ಅಭಿಯಾನದ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1

 

ಅಭ್ಯರ್ಥಿಗಳ ಅಭಿಪ್ರಾಯಗಳು




 

ಗುರುವಾರ, ಏಪ್ರಿಲ್ 27, 2023

ಪ್ರಕೃತಿಯನ್ನು ಅರಿತು ನಡೆಯದಿದ್ದರೆ ಖಂಡಿತ ಮಾನವನಿಗೆ ಉಳಿಗಾಲವಿಲ್ಲ

 ಪ್ರಕೃತಿಯನ್ನು ಅರಿತು ನಡೆಯದಿದ್ದರೆ ಖಂಡಿತ ಮಾನವನಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶ ವಿಶ್ವ ಸಂಸ್ಥೆ ಮತ್ತು ಜಗತ್ತಿನ ಜವಾಬ್ದಾರಿಯುತ ವಿಜ್ಞಾನಗಳು ನೀಡುತ್ತಿರುವ ಅಂಕಿಅಂಶಗಳು ತಿಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳು ಪ್ರಕೃತಿಯನ್ನು ಅರಿತು ಮುಂದೆ ಹೆಜ್ಜೆ ಇಡದಿದ್ದರೆ ಮುಂದಿನ 10-15 ವರ್ಷಗಳಲ್ಲಿ ದೊಡ್ಡದಾದ ಅಪಾಯ ಎಲ್ಲರಿಗೂ ಕೂಡ ಕಾದಿದೆ.
ಹಲವು ಜನರು ಕೂಡಿ ಒಂದು ಗುರಿಯೆಡೆಗೆ ನಡೆಯುವುದಕ್ಕಾಗಿಯೇ ಸಂಘ ಸಂಸ್ಥೆಗಳ ಅವಶ್ಯಕತೆಯಿದೆ. ಇನ್ನು ಮುಂದಿನ ದಿನಗಳಲ್ಲಿ  ಸಂಘ ಸಂಸ್ಥೆಗಳ ಗುರಿ ಮತ್ತು ದೃಷ್ಟಿಕೋನ ಪ್ರಕೃತಿಗೆ ಪೂರಕವಾಗಿ ಇರದೇ ಇದ್ದರೆ ಅಂತಹ ಸಂಘ ಸಂಸ್ಥೆಗಳು ಬದುಕುಳಿಯುವುದು ಕಷ್ಟವಾಗುವುದು. ಪ್ರಕೃತಿಯ ವಿನಾಶದಿಂದ ಅಗುತ್ತಿರುವ ತೀವ್ರಗತಿಯ ಹಲವು ವೈಪರೀತ್ಯಗಳಿಂದಾಗಿ ಮುಂದಿನ 10-15 ವರ್ಷಗಳಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಅವನತಿ ಹೊಂದುವ ಸಾಧ್ಯತೆಯಿದೆ. ಈ ವಾಸ್ತವಿಕ ಸತ್ಯವನ್ನು ಅರಿತು ನಡೆಯುವ ಜವಬ್ದಾರಿ ಎಲ್ಲ‌ ಸಂಘ ಸಂಸ್ಥೆಗಳ ಮುಖ್ಯಸ್ಥರ ಮೇಲಿದೆ.   ಹಾಗೆಯೇ, ತಮ್ಮ ಸಂಘ ಸಂಸ್ಥೆಗಳ ನೌಕರರು ಮುಂಬರುವ ಸಮಸ್ಯೆಗಳನ್ನು ಎದುರಿಸಿ ಮುಂದುವರೆಯುವಷ್ಟು ಸಾಮರ್ಥ್ಯ ವೃದ್ಧಿಗೊಳ್ಳುವಂತೆ ಸೂಕ್ತ ಯೋಜನೆ ಹೊಂದುವ ಅವಶ್ಯಕತೆಯೂ ಕೂಡ ಇದೆ.
ಇತ್ತೀಚೆಗೆ ವಿಜಯಪುರ ಮೂಲದ ಬಿ.ಎಸ್.ವ್ಹಿ ಸೀಡ್ಸ್ ಕಂಪನಿಯವರು ಗೋವಾದ ಸಾಯಿರಾಜ ರೆಸಾರ್ಟ್ ನಲ್ಲಿ ಆಯೋಜಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ "ಪ್ರಕೃತಿ ಆಧಾರಿತ ನಾಯಕತ್ವ" ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಸಿಕೊಡುವ ಅವಕಾಶ ನನಗೆ ದೊರೆತಿತ್ತು. ಕೃಷಿಕರೊಂದಿಗೆ ಕೆಲಸ ಮಾಡುತ್ತಿರುವ ಕಂಪನಿ ಇದಾದ್ದರಿಂದ, ಕಂಪನಿಯ ಮುಖ್ಯಸ್ಥರೊಂದಿಗೆ ಮಣ್ಣಿನ ಮತ್ತು ರೈತರ ಸ್ಥಿತಿಗತಿಯ ಕುರಿತು ಆಳವಾಗಿ ಚರ್ಚೆ ಮಾಡಲಾಯಿತು. ಮಣ್ಣು ತೀವ್ರಗತಿಯಲ್ಲಿ ನಾಶವಾಗುತ್ತಿರುವುದು, ಇದರ ಜೊತೆಗೆ ರೈತರು ಕೃಷಿಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವುದು ಅವರಿಗೂ ಕೂಡ ಆಳವಾಗಿ ಮನವರಿಕೆಯಾಗಿದೆ ಎಂಬುದು ತಿಳಿಯಿತು. ಇದೇ ರೀತಿ ಮುಂದುವರೆದದ್ದೇ ಆದರೆ, ಖಂಡಿತ ಪ್ರತಿಯೊಬ್ಬರೂ ಹಲವು ರೀತಿಯ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುವುದು ಎಂಬುದು ಆಳವಾಗಿ ನನಗೆ ಮನವರಿಕೆಯಾಯಿತು. ಹಾಗಾಗಿ, ಇಂದು ಮಣ್ಣು ಮತ್ತು ರೈತರ ರಕ್ಷಣೆಯ ಜವಾಬ್ದಾರಿ ಹೊರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ‌. ಮಣ್ಣು ಮತ್ತು ರೈತರು ಉಳಿದರೆ ಮಾತ್ರ ಉಳಿದ ಎಲ್ಲ ಕ್ಷೇತ್ರಗಳ ಜನರೂ ಕೂಡ ಉಳಿಯಲು ಸಾಧ್ಯ. 

ಇಂದು ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಕಂಪನಿಗಳಿಗೆ ಪ್ರಕೃತಿಯ ವಾಸ್ತವಿಕ ಸ್ಥಿತಿಯ ಕುರಿತು ಮನವರಿಕೆ ಮಾಡಿ ಪ್ರಕೃತಿಗೆ ಪೂರಕವಾದ ಗುರಿ ಮತ್ತು ದೃಷ್ಟಿಕೋನ ಹೊಂದುವಂತೆ ಮಾಡಬೇಕಾಗಿದೆ.
ಪ್ರಕೃತಿಗೆ ಪೂರಕವಾದ ಗುರಿಯೊಂದಿಗೆ ಮುನ್ನಡೆಯುವಂತೆ ಎಲ್ಲ ಕ್ಷೇತ್ರದ ನಾಯಕರನ್ನು ತಯಾರಿ ಮಾಡುವ ಅವಶ್ಯಕತೆ ಇಂದು ಬಂದೊದಗಿದೆ. ಅದರಲ್ಲಿಯೂ ಕೂಡ, ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರಾಜಕೀಯ ನಾಯಕರಿಗೆ "ಪ್ರಕೃತಿ ಆಧಾರಿತ ನಾಯಕತ್ವ" ದ ಕುರಿತ ತರಬೇತಿ ನೀಡುವ ಅವಶ್ಯಕತೆಯಿದೆ. ಇಲ್ಲವಾದರೆ,  ಮುಂದಿನ ದಿನಗಳಲ್ಲಿ ಜನರ ಪ್ರಶ್ನೆಗಳನ್ನು ಎದುರಿಸುವುದು ರಾಜಕೀಯ ನಾಯಕರಿಗೆ ಖಂಡಿತ ಕಷ್ಟವಾಗುವುದು. ಇದರೊಂದಿಗೆ ಮಣ್ಣು ಮತ್ತು ರೈತರ ಹಿತ ಕಾಪಾಡುವ ಯೋಜನೆಗಳನ್ನು ತುರ್ತಾಗಿ ಜಾರಿಗೆ ತರುವ ಜವಾಬ್ದಾರಿ‌ ಇಂದಿನ ರಾಜಕೀಯ ನಾಯಕರ ಮೇಲಿದೆ. ಇದರ ಕುರಿತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸುವ ಪತ್ರ ಚಳುವಳಿ ಹಾಗೂ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಪ್ರಾರಂಭಿಸಲಾಗಿದೆ.
 
ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಲು ಮತ್ತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್‌ ಮಾಡಿ
https://missionsavesoil.blogspot.com/2023/04/blog-post_8.html?m=1

ಬಸವರಾಜ (ಅಭೀಃ)
9449303880
ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕ

ಸೋಮವಾರ, ಏಪ್ರಿಲ್ 24, 2023

ಸ್ವಾಮೀಜಿಗಳ ನೇತೃತ್ವದಲ್ಲಿ ರೈತರ ಆದಾಯ ಹೆಚ್ವಿಸುವ ಯೋಜನೆಗಾಗಿ ಮನವಿ ಪತ್ರ ಸಲ್ಲಿಕೆ

 ಸಿಂಧನೂರು ತಾಲೂಕಿನ ವಿಧಾನಸಭಾ ಚುನಾವಣಾ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಅವರಿಗೆ ಶ್ರೀ ಶ್ರೀ ಮಹಾಂತ ಶಿವಯೋಗಿಗಳ  ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಕೆ

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.‌  ಈ ಕಾನೂನಿನ ಅಡಿಯಲ್ಲಿ ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳಿಗೆ ಬೇಡಿಕೆ  ಸಲ್ಲಿಸುವ ಸೂಕ್ ಸಮಯವೇ ಚುನಾವಣೆ ಸಮಯ.  ಹಾಗಾಗಿ, ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ  ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ  ಯೋಜನೆ ಜಾರಿಗಾಗಿ ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ.
ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದು. ವೈಯಕ್ತಿಕವಾಗಿ ಹಾಗೂ ಸಂಘ-ಸಂಸ್ಥೆಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಬಹುದು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಲು ಇಚ್ಚಿಸುವವರಿಗೆ ಮತ್ತು ಗುಣಮಟ್ಟದ ಆಹಾರ ಸೇವನೆ ಮಾಡಲು ಇಚ್ಚಿಸುವವರಿಗೆ ಈ ಕಾನೂನು ವರದಾನವಾಗಿದೆ. ಹಾಗಾಗಿ, ಆಹಾರ ಸೇವನೆ ಮಾಡುವವರೆಲ್ಲರೂ ಅಭಿಯಾನದ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1
 
ಮಣ್ಣು ಮತ್ತು ರೈತರ ಒಳತಿಗೋಸ್ಕರ ಸ್ವಾಮೀಜಿಗಳು ಇಟ್ಟ ಹೆಜ್ಜೆ ಇತರರಿಗೆ ಮಾದರಿ
ಬಸವನ ಬಾಗೇವಾಡಿಯ ಮುಗುಳಖೋಡ ಮಠದ ಶ್ರೀಗಳಾದ ಯಲ್ಲಾಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ವಿಧಾನಸಭಾ ಚುನಾವಣಾ ಅಭ್ಯರ್ಥಿಯಾದ ಶ್ರೀ ಅಪ್ಪುಗೌಡ ಪಾಟೀಲರಿಗೆ ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ ಮನವಿ ಪತ್ರ ಸಲ್ಲಿಕೆ      ಶ್ರೀ ಮ.ನಿ.ಪ್ರ ಮಹಾಲಿಂಗ ಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ, ಯದ್ದಲದೊಡ್ಡಿ
 ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ  ಪರಿಹಾರ ಸಿಗಲು ಸಾಧ್ಯ.‌  ರೈತರು ಜನಪ್ರತಿನಿಧಿಗಳಿಗೆ ಬೇಡಿಕೆ ಪತ್ರ ಸಲ್ಲಿಸಿ ಕಾನೂನು ಅನುಷ್ಠಾನ ಆಗುವಂತೆ ಮಾಡುವ ಸೂಕ್ತ ಸಮಯವೇ ಚುನಾವಣೆ ಸಮಯ. 2023ರ ವಿಧಾನಸಭಾ  ಚುನಾವಣೆ ಸಂದರ್ಭದಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗಾಗಿ ಚುನಾವಣಾ ಅಭ್ಯರ್ಥಿಗಳಿಗೆ  ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯು ರಾಜ್ಯಾದ್ಯಂತ ಪ್ರಾರಂಭವಾಗಿದೆ. ರಾಯಚೂರ ಜಿಲ್ಲೆಯ ಸಿಂಧನೂರ ಮತಕ್ಷೇತ್ರದ ಸ್ವಾಮೀಜಿಗಳು ಈ ಪತ್ರ ಚಳುವಳಿಯ ನೇತೃತ್ವ  ವಹಸಿ ಚುನಾವಣಾ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ ಮನವಿ ಪತ್ರ ಸಲ್ಲಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ.  ಸಿಂಧನೂರ ಮತಕ್ಷೇತ್ರದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ, ಒಳಬಳ್ಳಾರಿ, ಶ್ರೀ ಮ.ನಿ.ಪ್ರ ಮಹಾಲಿಂಗ ಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ, ಯದ್ದಲದೊಡ್ಡಿ ಹಾಗೂ ಶ್ರೀ ಮ.ನಿ.ಪ್ರ ಬಸವಲಿಂಗ ಸ್ವಾಮೀಗಳು, ಕಿರಿಯ ಪೂಜ್ಯರು, ಒಳಬಳ್ಳಾರಿ, ಈ ಮೂವರು ಶ್ರೀಗಳ ನೇತೃತ್ವದಲ್ಲಿ ಹಾಲಿ ಶಾಸಕರಾದ ವೆಂಕಟರಾವ್ ನಾಡಗೌಡ್ರು ಇವರಿಗೆ ಮೊದಲಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪತ್ರ ಚಳುವಳಿಯನ್ನು ತಮ್ಮ ಕ್ಷೇತ್ರದಲ್ಲಿ ಪ್ರಾರಂಭಿಸಿದರು. ತಮ್ಮ ಕ್ಷೇತ್ರದ ಉಳಿದ ಎಲ್ಲ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ ಮನವಿ ಪತ್ರ ಸಲ್ಲಿಸಿ ತಮ್ಮ ಸುತ್ತಮುತ್ತಲ ಮತಕ್ಷೇತ್ರದ ಶ್ರೀಗಳ ಮುಖಾಂತರವೂ ಪತ್ರ ಚಳುವಳಿ ಪ್ರಾರಂಭಿಸುವುದಾಗಿ ತಿಳಿಸಿರುವುದು ಆ ಕ್ಷೇತ್ರದ ರೈತರಿಗೆ ದೊಡ್ಡ ಬಲ ಬಂದಂತಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವ ಕೃಷಿ ಕ್ಷೇತ್ರದ ಉಳಿವಿಗಾಗಿ ಚುನಾವಣೆ ಸಂದರ್ಭದಲ್ಲಿ ಸಿಂಧನೂರ ಮತಕ್ಷೇತ್ರದ ಶ್ರೀಗಳು ಇಟ್ಟ ಹೆಜ್ಜೆ ಇತರರಿಗೆ ಖಂಡಿತ ಮಾದರಿಯಾಗಿದೆ. ಈ ಶ್ರೀಗಳ ಹಾದಿಯಲ್ಲಿ ನಾವೂ ಕೂಡ ನಡೆದು ಪ್ರಕೃತಿ ಉಳಿಸಿ ಬೆಳೆಸಲು ಪ್ರಯತ್ನಿಸಿದ ನಮ್ಮ ಎಲ್ಲ ಹಿರಿಯರಿಗೆ ನಡೆ ನಮನ ಸಲ್ಲಿಸೋಣ ಬನ್ನಿ. 



 ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿಂದ ಪಡೆಯಿರಿ:
https://missionsavesoil.blogspot.com/2023/04/blog-post_8.html?m=1

ಅಭಿಯಾನದಲ್ಲಿ ಪಾಲ್ಗೊಳ್ಳಲು ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ
https://docs.google.com/forms/d/1MRyAdJs_kJigZxoRCNCz274pANFPKaHlfQ4Ugv0md6A/edit

ಶುಕ್ರವಾರ, ಏಪ್ರಿಲ್ 21, 2023

ಮಣ್ಣು ಉಳಿಸುವುದಕ್ಕಾಗಿ ಸಿಂಧನೂರ ಹೆಲ್ತ್ ಕ್ಲಬ್ ನ ಸದಸ್ಯರಿಂದ ಮಾದರಿ ನಡೆ

ಇಂದು ನಮ್ಮ ಆರೋಗ್ಯದ ಕೀಲಿಕೈ ಮಣ್ಣಿನ ಕೈಯಲ್ಲಿದೆ, ಮಣ್ಣಿನ ಆರೋಗ್ಯದ‌ ಕೀಲಿಕೈ ಸರ್ಕಾರದ ಕೈಯಲ್ಲಿದೆ.
 
ಜೀವಂತವಾಗಿರುವ  ಮಣ್ಣು ಮಾತ್ರ ಹಲವು ಜೀವರಾಶಿಗಳಗೆ ಜೀವಂತಿಕೆ ನೀಡಬಲ್ಲದು. ಮಣ್ಣಿನ ಹೀವಂತಿಕೆ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣವನ್ನು ಅವಲಂಬಿಸಿದೆ. ಸಾವಯವ ಇಂಗಾಲದ ಪ್ರಮಾಣವು ಭೂಮಿಯ ಮೇಲಿರುವ ಗಿಡಮರಗಳು, ಎಲ್ಲ ರೀತಿಯ ಸಸ್ಯ ರಾಶಿ, ಪಶು ಪಕ್ಷಿಗಳು, ಕೀಟಗಳು ಹಾಗೂ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯನ್ನು ಅವಲಂಬಿಸಿದೆ. ಅಂದರೆ, ಈ ಎಲ್ಲ ಜೀವರಾಶಿಗಳ ತ್ಯಾಜ್ಯ ಭೂಮಿಗೆ ಎಷ್ಟು ಸೇರುವುದೋ ಅಷ್ಟು ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ ಮಣ್ಣಿಗೆ ಜೀವಂತಿಕೆ ಹೆಚ್ಚಾಗುವುದು.

ಮಣ್ಣಿಗೆ ಎಷ್ಟು ಜೀವಂತಿಕೆ ಹೆಚ್ಚಾಗುವುದೋ ಅಷ್ಟು ರೈತ ಬೆಳೆಯುವ ಎಲ್ಲ ಆಹಾರ ಧಾನ್ಯಗಳು ಮತ್ತು ಹಣ್ಣು ಹಂಪಲುಗಳ ಜೀವಂತಿಕೆಯೂ ಕೂಡ ಹೆಚ್ಚಾಗುವುದು. ಆಹಾರ ಧಾನ್ಯಗಳು ಮತ್ತು ಹಣ್ಣು ಹಂಪಲುಗಳಲ್ಲಿ ಎಷ್ಟು ಜೀವಂತಿಕೆ ಹೆಚ್ಚಾಗಿರುವುದೋ ಅಷ್ಟು ಅದನ್ನು ಸೇವಿಸಿದ ಮಾನವನ ಜೀವಂತಿಕೆಯೂ ಕೂಡ ಹೆಚ್ಚಾಗುವುದು. ಈ ರೀತಿಯ ಪ್ರಕೃತಿ ಮಾತೆಯ ಜೀವಂತಿಕೆಯ ಪ್ರಕ್ರಿಯೆಯನ್ನು ಅರಿಯದೇ ಕೃಷಿ ಮಾಡುತ್ತಿರುವುದರಿಂದ, ಜಗತ್ತಿನ ಅರ್ಧದಷ್ಟು ಮಣ್ಣು ತನ್ನ ಜೀವಂತಿಕೆ ಕಳೆದುಕೊಂಡು ಅತ್ಯಂತ ಕಡಿಮೆ ಗುಣಮಟ್ಟದ ಆಹಾರ  ಉತ್ಪಾದನೆ ಆಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಏಕೆಂದರೆ, ಇದೇ ರೀತಿಯ ಯಾಂತ್ರಿಕ ಕೃಷಿ ಪದ್ಧತಿ ಮುಂದುವರೆದದ್ದೇ ಆದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯಿಂದ ಹಲವು ಜೀವರಾಶಿಗಳು ನಾಶವಾಗುವ ಸಾಧ್ಯತೆಯಿದೆ.

ಕಡಿಮೆ ಗುಣಮಟ್ಟದ ಆಹಾರ ಸೇವೆನೆಯಿಂದ‌ ಈಗಾಗಲೇ ಜಗತ್ತಿನಾದ್ಯಂತ ಬಹು ಜನರು ಹಲವು ರೀತಿಯ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾದರೆ, ಖಂಡಿತ ಮಾನವನ ಅರೋಗ್ಯದ ಕೀಲಿಕೈ ಮಣ್ಣಿನ ಕೈಯಲ್ಲಿದೆ.‌ ಮಣ್ಣಿನ ಅರೋಗ್ಯದ ಕೀಲಿಕೈ ಸರ್ಕಾರದ‌ ಕೈಯಲ್ಲಿದೆ. ಏಕೆಂದರೆ, ಸರ್ಕಾರಗಳು ಅನುಷ್ಠಾನ ಮಾಡುವ ಕಾನೂನುಗಳು ಪ್ರಕೃತಿಗೆ ಪೂರಕವಾದರೆ ಮಾತ್ರ ಮಣ್ಣಿನ ಜೀವಂತಿಕೆ ಹೆಚ್ಚಾಗಲು ಸಾಧ್ಯ. ಈ ಹಿಂದಿರುವ ಅನೇಕ ಕಾನೂನುಗಳು ಪ್ರಕೃತಿಗೆ ಪೂರಕವಿರದೇ ಇರುವ ಕಾರಣ, ಇಂದು ಮಣ್ಣಿನ ಜೀವಂತಿಕೆ ನಾಶವಾಗಿ ಹಲವು ಸಮಸ್ಯೆಗಳು ಉಲ್ಬಣವಾಗಿವೆ.

ಮಣ್ಣಿನ‌ ವಿನಾಶವನ್ನು ತಡೆಯುವುದಕ್ಕಾಗಿ 'ಮಣ್ಣು ಉಳಿಸಿ' ಅಭಿಯಾನವನ್ನು ಸದ್ಗುರು ಅವರು ಜಗತ್ತಿನಾದ್ಯಂತ ಪ್ರಾರಂಭಿಸಿದ್ದಾರೆ. ಮಣ್ಣು ಉಳಿಸುವ ಸೂಕ್ತ ಕಾನೂನಿನ ಜಾರಿಗಾಗಿ ಬೇಡಿಕೆ ವ್ಯಕ್ತಪಡಿಸುವ ಸೂಕ್ತ ಸಮಯವೇ ಚುನಾವಣೆ ಸಮಯ. ಈ ನಿಟ್ಟಿನಲ್ಲಿ ಕಾರ್ಯಪ್ರರುತ್ತರಾದ "ಸಿಂಧನೂರ ಹೆಲ್ತ್ ಕ್ಲಬ್" ನ ಸದಸ್ಯರು ಮಣ್ಣಿನ ಸ್ನಾನ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಣ್ಢಿನ ಮಹತ್ವ ಅರಿಯಲು ಪ್ರಯತ್ನಿಸಿದ್ದಾರೆ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಪಕ್ಷದ ಸದಸ್ಯರಿಗೆ ಮಣ್ಣು ಉಳಿಸುವ ಸೂಕ್ತ ಕಾನೂನು ಜಾರಿಗಾಗಿ ಮನವಿ ಪತ್ರ ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದಾರೆ.


ಸಿಂಧನೂರ ಹೆಲ್ತ್ ಕ್ಲಬ್ ನ ಸದಸ್ಯರು ತಾವು ಜವಾಬ್ದಾರಿಯುತ ಹೆಜ್ಜೆ ಇಟ್ಟು  ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದ್ದಾರೆ. ಮಣ್ಣು ಉಳಿಸಿ‌ ಅಭಿಯಾನದ ಸ್ವಯಂ‌ ಸೇವಕರಿಂದ‌ "ಮಣ್ಣು ಪುನಶ್ಚೇತನ ಕಾನೂನು" ಅನುಷ್ಠಾನಕ್ಕಾಗಿ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸುವ ಪತ್ರ ಚಳುವಳಿ ರಾಜ್ಯಾದ್ಯಂತ ಪ್ರಾರಂಭವಾಗಿದೆ. ಇತರ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಅವಶ್ಯಕತೆಯಿದೆ ಎಂಬುದು ನಮ್ಮ ಅಭಿಪ್ರಾಯ. ಇದು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಮಾಡಬೇಕಾದ ಮೊದಲ‌ ಕಾರ್ಯವಾಗಿದೆ. ಪತ್ರ ಚಳುವಳಿಯಲ್ಲಿ ಭಾಗವಹಿಸುವ ಕುರಿತು ಹೆಚ್ಚಿನ‌ ಮಾಹಿತಿಯನ್ನು ಪಡೆಯಲು ಸಿಂಧನೂರ ಹೆಲ್ತ್‌ ಕ್ಲಬ್ ನ ಸ್ಥಾಪಕರಾದ ಶ್ರೀ ಲಕ್ಷ್ಮಣಯ್ಯಶೆಟ್ಟಿ ಅವರ ಮೊಬೈಲ್ ಸಂಖ್ಯೆ 9880984268 ಗೆ ಸಂಪರ್ಕಿಸಿ.

ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಲು ಈ ಕೆಳಕಂಡ ಲಿಂಕ್ ಕ್ಲಿಕ್‌ ಮಾಡಿ
https://missionsavesoil.blogspot.com/2023/04/blog-post_8.html?m=1

ಬಸವರಾಜ (ಅಭೀಃ)
9449303880
ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕ


ಸೋಮವಾರ, ಏಪ್ರಿಲ್ 10, 2023

ಮಣ್ಣು ಮತ್ತು ರೈತರ ರಕ್ಷಣೆಗಾಗಿ 'ನಡೆ ನಮನ'


ಪ್ರಕೃತಿಯ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿದ ನಮ್ಮ ಎಲ್ಲ ಹಿರಿಯರ ಹಾದಿಯಲ್ಲಿ ನಾವು ನಡೆದು, ಅವರಿಗೆ 
'ನಡೆ ನಮನ' ಸಲ್ಲಿಸೋಣ ಬನ್ನಿ.

ಪತ್ರ ಚಳುವಳಿ

ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ  ಪ್ರಾರಂಭಿಸಿದ "ಪತ್ರ ಚಳುವಳಿ" ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://missionsavesoil.blogspot.com/2023/04/blog-post_79.html?m=1

ಭಾಷಣ ಸ್ಪರ್ಧೆ

ವಿದ್ಯಾರ್ಥಿಗಳು 2 ರಿಂದ 10 ನಿಮಿಷದ ಭಾಷಣದ ವಿಡಿಯೋ ಕಳುಹಿಸಿ ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಬಹುದಾದ ಭಾಷಣ ಸ್ಪರ್ಧೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://missionsavesoil.blogspot.com/2023/03/blog-post_12.html?m=1

ಭಾನುವಾರ, ಏಪ್ರಿಲ್ 9, 2023

ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ

 


ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ  ಪರಿಹಾರ ಸಿಗಲು ಸಾಧ್ಯ.‌ ಈ ಅಭಿಯಾನಕ್ಕೆ ಜಗತ್ತಿನ ಪ್ರಮುಖ ನಾಯಕರು ಮತ್ತು ಕಾರ್ನಾಟಕ ರಾಜ್ಯದ  ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರು ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿ ಕಾನೂನು ಅನುಷ್ಠಾನ ಆಗುವಂತೆ ಮಾಡುವ ಸೂಕ್ತ ಸಮಯವೇ ಚುನಾವಣೆ ಸಮಯ. ರೈತರು ಚುನಾವಣೆ ಸಂದರ್ಭದಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗಾಗಿ ಬೇಡಿಕೆ ಸಲ್ಲಿಸುವ "ಪತ್ರ ಚಳುವಳಿ" ಪ್ರಾರಂಭಿಸಲಾಗಿದೆ.

ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದೇ? ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.

https://missionsavesoil.blogspot.com/2023/04/blog-post_79.html?m=1


ವಿಜಯ ಕರ್ನಾಟಕ, 05-04-2023

ಯುದಯವಾಣಿ, 02-04-2023


ಹೆಚ್ಚಿನ ಮಾಧ್ಯಮ ವರದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:

ವಿದ್ಯಾರ್ಥಿಗಳು 2 ರಿಂದ 10 ನಿಮಿಷದ ಭಾಷಣದ ವಿಡಿಯೋ ಕಳುಹಿಸಿ ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಬಹುದಾದ ಭಾಷಣ ಸ್ಪರ್ಧೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ನಿರಂತರ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಗೃಪ್ ಸೇರಿಕೊಳ್ಳಿ:


ಶನಿವಾರ, ಏಪ್ರಿಲ್ 8, 2023

ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ ರಾಜ್ಯಾದ್ಯಂತ ಮನವಿ ಪತ್ರ ಸಲ್ಲಿಕೆ ಪ್ರಾರಂಭ

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.‌  ಈ ಕಾನೂನಿನ ಅಡಿಯಲ್ಲಿ ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳಿಗೆ ಬೇಡಿಕೆ  ಸಲ್ಲಿಸುವ ಸೂಕ್ ಸಮಯವೇ ಚುನಾವಣೆ ಸಮಯ.  ಹಾಗಾಗಿ, ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ  ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ  ಯೋಜನೆ ಜಾರಿಗಾಗಿ ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ.
ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದು. ವೈಯಕ್ತಿಕವಾಗಿ ಹಾಗೂ ಸಂಘ-ಸಂಸ್ಥೆಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಬಹುದು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಲು ಇಚ್ಚಿಸುವವರಿಗೆ ಮತ್ತು ಗುಣಮಟ್ಟದ ಆಹಾರ ಸೇವನೆ ಮಾಡಲು ಇಚ್ಚಿಸುವವರಿಗೆ ಈ ಕಾನೂನು ವರದಾನವಾಗಿದೆ. ಹಾಗಾಗಿ, ಆಹಾರ ಸೇವನೆ ಮಾಡುವವರೆಲ್ಲರೂ ಅಭಿಯಾನದ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1

 

ಅಭ್ಯರ್ಥಿಗಳ ಅಭಿಪ್ರಾಯಗಳು

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ JDS ಅಭ್ಯರ್ಥಿಯಾದ ಶ್ರೀ ಅಪ್ಪುಗೌಡ ಪಾಟೀಲರು

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಶರಣಪ್ಪ ಸುಣಗಾರ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಶ್ರೀ ಬಸಲಿಂಗಪ್ಪಗೌಡ ಇಂಗಳಗಿ

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಸಂಜೀವ ಐಹೊಳೆಯವರು

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಎಂ ಬಿ ಪಾಟೀಲ ಅವರಿಂದ ಅಭಿಪ್ರಾಯ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಸೋಮನಗೌಡ ಪಾಟೀಲ ಅವರಿಂದ ಅಭಿಪ್ರಾಯ
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಅಶೋಕ ಮನಗೂಳಿ ಅವರಿಂದ ಅಭಿಪ್ರಾಯ.
 


ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ವಿಶಾಲಾಕ್ಷಿ  ಪಾಟೀಲರ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯಾದ ಶ್ರೀ ರಮೇಶ ಭೂಸನೂರ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ರಾಜುಗೌಡ ಪಾಟೀಲ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಎಸ್ ಕೆ ಬೆಳ್ಳುಬ್ಬಿ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿಠ್ಠಲ‌ ಕಟಕಧೊಂಡರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ಬಿ ಡಿ ಪಾಟೀಲರಿಂದ ಅಭಿಪ್ರಾಯ.


ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಯಶವಂತರಾಯಗೌಡ ಪಾಟೀಲರಿಂದ ಅಭಿಪ್ರಾಯ.


ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಶಿವಾನಂದ ಪಾಟೀಲರಿಂದ ಅಭಿಪ್ರಾಯ.
 
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜುಗೌಡ ಪಾಟೀಲರ ಅಭಿಪ್ರಾಯ.
ವಿಜಯಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಬಸನಗೌಡ ಪಾಟೀಲ( ಯತ್ನಾಳ) ಅವರು


ವಿಜಯಪುರ ವಿಧಾನಸಭಾ ಮತಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಹಮದ್ ಮುಶರಿಫ್ ಇವರಿಗೆ ಮಣ್ಣು ಪುನಶ್ಚೇತನ ಕಾನೂನು ಜಾರಿಗಾಗಿ ಬೆಂಬಲ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರ ಹೇಳಿಕೆ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದಿಂದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಶ್ರೀ ದೇವಾನಂದ ಚವ್ಹಾಣ ಅವರು ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನವಾಗಲು ಕೈ ಜೋಡಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
 
 ಜ್ಞಾನಯೋಗಾಶ್ರಮ, ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ದಿ:08-04-2023 ರಂದು ಚಾಲನೆ ನೀಡಲಾಯಿತು
 

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1


ಗುರುವಾರ, ಏಪ್ರಿಲ್ 6, 2023

ಚುನಾವಣೆಯ ಸಂದರ್ಭದಲ್ಲಿ ಶುರುವಾದ ನೀರಿನ ಸಮಸ್ಯೆಗೆ ಚುನಾವಣೆ ಸಂದರ್ಭದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದೇ?



ಏಪ್ರಿಲ್ ಶುರುವಿನಲ್ಲೇ ನೀರಿಗಾಗಿ ಹಾಹಾಕಾರ ಉಂಟಾಗಿರುವುದಕ್ಕೆ ಮೂಲ ಕಾರಣವೇನೆಂದು ಪ್ರಜೆಗಳು ಮತ್ತು ನಾಯಕರು ಒಟ್ಟುಗೂಡಿ ಚರ್ಚಿಸಲು ಇರುವ ಸೂಕ್ತ ಸಮಯವೇ ಚುನಾವಣೆಯ ಸಮಯ. 

ಕರಾವಳಿ ಪ್ರದೇಶಗಳಲ್ಲಿಯೇ ತೆರೆದ ಬಾವಿಗಳು ಮತ್ತು ಕೊಳವೆ ಬಾವಿಗಳು ಎಪ್ರಿಲ್ ತಿಂಗಳಲ್ಲಿ ಬತ್ತುತ್ತಿರುವುದಕ್ಕೆ ಪ್ರಾರಂಭಿಸಿದರೆ, ಮುಂದೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉಂಟಾಗಬಹುದಾದ ನೀರಿನ ಕೊರತೆಯ ಗಂಭೀರತೆಯನ್ನು ಊಹಿಸಲೂ ಕೂಡ ಸಾಧ್ಯವಿಲ್ಲ.

ವಿಶ್ವ ಸಂಸ್ಥೆ ಮತ್ತು ಜಗತ್ತಿನ ಜವಾಬ್ದಾರಿಯುತ ವಿಜ್ಞಾನಿಗಳು ಈಗಾಗಲೇ ಪ್ರಕೃತಿ‌ ವಿನಾಶದಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. ಸಾಕಷ್ಟು ಮಳೆ ಆಗಿ ನದಿಗಳು ತುಂಬಿ ಹರಿದರೂ ಕೂಡ ಬಾವಿಗಳು ಮತ್ತು ಕೊಳವೆಬಾವಿಗಳು ಬತ್ತುತ್ತಿರುವುದಕ್ಕೆ ಮುಖ್ಯ ಕಾರಣ ಭೂಮಿಯ ಮೇಲ್ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಸಾವಯವ ಇಂಗಾಲದ ಪ್ರಮಾಣ ಮಣ್ಣಿನಲ್ಲಿ ಕಡಿಮೆ ಆಗುತ್ತಿರುವ ಕಾರಣ ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ದಿನ ಕಳೆದಂತೆ ಕಳೆದುಕೊಳ್ಳುತ್ತಿದೆ. ಹಾಗಾಗಿ, ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವ ಸೂಕ್ತ ಯೋಜನೆಯನ್ನು ಜಾರಿಗೆ ತರಲೇಬೇಕಾಗಿದೆ. ಈ ಕಾರಣಕ್ಕಾಗಿ ರೈತರಿಗೆ ವರದಾನವಾಗುವ  ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನ ಮಾಡುವ ಬೇಡಿಕೆ ಪತ್ರವನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಸಲ್ಲಿಸುವ "ಪತ್ರ ಚಳುವಳಿ" ಕಾರ್ಯಕ್ರಮ ಪ್ರಾರಂಭಿಸಲಾಗಿದೆ. 

ತಾವೂ ಕೂಡ ಅಭಿಯಾನದಲ್ಲಿ ಭಾಗವಹಿಸಲು ಹಾಗೂ ಸದರಿ  ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ:

ಮೊ. ಸಂ: 9449303880
ನಿರಂತರ ಮಾಹಿತಿಗಾಗಿ ಈ ವಾಟ್ಸಪ್ ಗೃಪ್ ಸೇರಿಕೊಳ್ಳಿ.

ಮಂಗಳವಾರ, ಏಪ್ರಿಲ್ 4, 2023

ನಡೆದಾಡುವ ದೇವರಿಂದ ಪತ್ರದ ಮೂಲಕ ಸಂದೇಶ!


ನನ್ನ ಗುರುದೇವರ ಆಶಯದಂತೆ ಜ್ಞಾನವನ್ನು ಉಣಬಡಿಸುವ ಕೆಲಸವನ್ನು ನಲವತ್ತು ವರ್ಷಗಳ ಕಾಲ ಶ್ರದ್ಧೆಯಿಂದ ಮಾಡಿದೆ. ನಾನು ದೇಹ ತ್ಯಜಿಸಿದ ಸಂದರ್ಭದಲ್ಲಿ 20 ಲಕ್ಷಕ್ಕಿಂತ ಅಧಿಕ ಜನರು ನನ್ನ ಅಂತಿಮ ದರ್ಶನಕ್ಕೆ ಬಂದಿರುವುದನ್ನು ಕಂಡು ನನ್ನ ಜೀವನ ಸಾರ್ಥಕವೆನಿಸಿತು. ಏಕೆಂದರೆ, ನಾನು ಉಣಬಡಿಸಿದ ಜ್ಞಾನ ಎಷ್ಟೊಂದು ಜನರ ಮೇಲೆ ಪರಿಣಾಮ ಬೀರಿದೆ ಎಂದು ಭಾವಿಸಿ ಸಂತೋಷಪಟ್ಟೆ. 


ನನ್ನ ಅಂತಿಮ‌ ಸಂಸ್ಕಾರವಾದ ಕೆಲವು ದಿನಗಳಲ್ಲಿ "ನಡೆದಾಡುವ ದೇವರು ಎಡವಿದ್ದು ಉಂಟು" ಎಂಬ ಶಿರ್ಷಿಕೆಯಡಿ ಒಬ್ಬ ಪ್ರಭಾವಿ ಲೇಖಕರು ಲೇಖನ ಬರೆದರು. ಅದನ್ನು ಸಾವಿರಾರು ಜನ ಓದಿದರು. ಓದಿದ ಕೆಲವರ ಹೃದಯವನ್ನಾದರೂ ಆ ಲೇಖನದ ಮಾತು ಸ್ಪರ್ಷಿಸಿ ಅದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಯಾರೂ ಆ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಇರುವುದು ವಿಷಾದ ಉಂಟು ಮಾಡಿತು. 


ನಾನು ದೇಹ ತ್ಯಜಿಸಿದ ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾಚಣೆಯಲ್ಲಿ ನಾನು ನೀಡಿದ ಜ್ಞಾನ ಜನರ ಮೇಲೆ ಪ್ರಭಾವ ಬೀರಿ ಹಣ, ಜಾತಿ ಮತ್ತು ಸರಾಯಿ ಬಳಕೆ ಕಡಿಮೆಯಾಗುವುದೆಂದು ಭಾವಿಸಿದ್ದೆ. ಏಕೆಂದರೆ, ನನ್ನ ಅಂತಿಮ‌ ಸಂಸ್ಕಾರಕ್ಕೆ ದೂರ ದೂರದಿಂದ ರಾಜಕೀಯ ನಾಯಕರೂ ಸೇರಿ 20 ಲಕ್ಷಕ್ಕಿಂತ ಅಧಿಕ ಜನರು ದೌಡಾಯಿಸಿ ಬಂದಿರುವುದನ್ನು ಕಂಡು ನಾನು ಅವರೆಲ್ಲರ ಮೇಲೆ ಬಹಳ ವಿಶ್ವಾಸವಿಟ್ಟಿದ್ದೆ. ಆದರೆ, ನನ್ನ ವಿಶ್ವಾಸ ಹುಸಿಯಾಗುತ್ತಿರುವುದನ್ನು ಕಂಡು ಮತ್ತೆ ನೋವಾಯಿತು. ಪ್ರಭಾವಿ ಲೇಖಕರು ನನ್ನ ಕುರಿತು ಬರೆದಂತೆ, ನಾನೇ ಜೀವನದಲ್ಲಿ ಎಡವಿದ್ದೇನೆಯೇ ಎಂದು ಮರಳಿ ನನ್ನನ್ನೇ ನಾನು ಪ್ರಶ್ನೆ ಕೇಳಿಕೊಳ್ಳುವಂತಾಯಿತು.   


ನಾನು 40 ವರ್ಷಗಳ ಕಾಲ ಪ್ರಕೃತಿಗೆ ಪೂರಕವಾಗಿ ಬದುಕಿ ಇತರರೂ ಪ್ರಕೃತಿಗೆ ಪೂರಕವಾಗಿ ಹೇಗೆ ಬದುಕಬೇಕು ಎನ್ನುವುದನ್ನು ಎಲ್ಲ ಸಾಹಿತ್ಯವನ್ನು ಉಪಯೋಗಿಸಿ ಹೇಳಲು ಪ್ರಯತ್ನಿಸಿದೆ‌. ಆದರೂ ಸಹ ಈ ಆಧುನಿಕ ಜಗತ್ತು ನಾನು ನೀಡಿದ ಜ್ಞಾನ ಆಳವಾಗಿ ಇಳಿಯಲು ಬಿಡುಲಿಲ್ಲ ಎಂಬುದು ತಿಳಿದಿದೆ. ಆದರೆ, ಇನ್ನು ಮುಂದೆ ನಾನು ನೀಡಿದ ಜ್ಞಾನವನ್ನು ಅನುಷ್ಠಾನಕ್ಕೆ ತರಲೇಬೇಕಾದ ಅವಶ್ಯಕತೆ ಮಾನವ ಕುಲಕ್ಕೆ ಬಂದೊದಗಿದೆ.‌ ನೀವು ಅನುಷ್ಠಾನಕ್ಕೆ ತರದೇ ಹೋದರೆ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಯುವುದು ಕಷ್ಟ. ಕೆಲವೇ ವರ್ಷಗಳಲ್ಲಿ ಪ್ರಕೃತಿ ವಿಕೋಪಗಳ ದುಷ್ಪಪರಿಣಾಮವನ್ನು ನೀವು ನೋವು ಉಂಡು ನಿಮ್ಮ ಮಕ್ಕಳನ್ನೂ ನೋವಿಗೆ ಎಡೆಮಾಡುತ್ತೀರಿ ಎಂಬ ಆತಂಕ ನನಗಿದೆ.


ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಎಷ್ಟು ಹಣ ದುರ್ಬಳಕೆ ಆಗುವುದೋ ಅಷ್ಟು ಪ್ರಕೃತಿ ನಾಶವಾಗುವುದು. ಸಮಾಜದ ಭವಿಷ್ಯ ನಿರ್ಧರಿಸುವ ಚುನಾವಣೆ ಸಂದರ್ಭದಲ್ಲಿಯೇ ಇಷ್ಟೊಂದು ಹಣ ದುರ್ಬಳಕೆಯಾದರೆ, ಮುಂದೆ ಯಾವುದೇ ಸರ್ಕಾರ ಆಡಳಿತ ನಡೆಸುವಾಗ ಎಷ್ಟು ಹಣ ದುರ್ಬಳಕೆಯಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.


ನನ್ನ ಗುರುದೇವರ ಶ್ರಮ‌ ವ್ಯರ್ಥವಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ಏಕೆಂದರೆ, ಅವರು ನನ್ನ ಮೂಲಕ ನಲವತ್ತು ವರ್ಷ ಮಾತನಾಡಿದರು. ನನ್ನ ಶ್ರಮವೂ ಕೂಡ ವ್ಯರ್ಥವಲ್ಲ ಎನ್ನುವುದನ್ನು ನಿರೂಪಿಸುವುದಕ್ಕಾಗಿ ಸಾವಿರಾರು ಜನರು ಬಂದರೂ ಅವರೆಲ್ಲರ ಮಖಾಂತರ ನಾನೇ ಕೆಲಸ ಮಾಡಲು ಪ್ರಾರಂಭಿಸುತ್ತೇನೆ. ನನ್ನ ಕೆಲಸ ಮುಂದುವರೆಸಲು ಬಯಸಿದ ಎಲ್ಲರ ಹೃದಯದಲ್ಲಿ ನೆಲೆ ನಿಂತು ಕೆಲಸ ಮಾಡುವ ಉದ್ದೇಶವಿದೆ. 


ಪ್ರಕೃತಿ ಮಾತೆಯನ್ನು ಉಳಿಸಿ ಬೆಳೆಸುವ ನನ್ನ ಸತ್ಯ ಸಂಕಲ್ಪ ಇಡೇರುವವರಿಗೆ ನಾನು ನಿಮ್ಮೊಂದಿಗೆಯೇ ಇರುವೆ. ಈ ಕಾರ್ಯವನ್ನು ಕೈಗೆತ್ತಿಕೊಂಡವರ ಹೃದಯದಲ್ಲಿ ನೆಲೆ ನಿಂತು ಕೆಲಸ ಮಾಡುವೆ. ಹೀಗೆಯೇ ಒಬ್ಬರು ನನ್ನ ಕೆಲಸ ಮುಂದುವರೆಸಲು ಮುಂದೆ ಬಂದಾಗ "ನಡೆ ನಮನ" ಎಂಬ ಅಭಿಯಾನವನ್ನು ಹೆಣೆದು ಅವರಿಗೆ ನೀಡಿರುವೆ. ಅದರ ಉದ್ದೇಶ ಏನೆಂಬುದನ್ನು ಸಂಪೂರ್ಣವಾಗಿ ಒಮ್ಮೆ ಓದಿ ತಿಳಿದುಕೊಳ್ಳಿ. ತಾವೂ ಕೂಡ ಆ ಕೆಲಸದಲ್ಲಿ ಕೈ ಜೋಡಿಸಲು ಇಚ್ಚಿಸದರೆ, ಆಗ ಖಂಡಿತ ನಾನು ನಿಮ್ಮೊಂದಿಗೆ ಒಂದಾಗಿ ಕೆಲಸ ಮಾಡುವೆ.‌ ನನಗೆ ಈಗಾಗಲೇ ಸಾಕಷ್ಟು ನುಡಿ ನಮನ ಅರ್ಪಿಸಲಾಗಿದೆ. ಆದರೆ, ಇನ್ನು ಮುಂದೆ ಬೇಕಿರುವುದು ನಿಮ್ಮ "ನಡೆ ನಮನ" ಮಾತ್ರ.


"ನಡೆ ನಮನ" ಅಭಿಯಾನದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

https://missionsavesoil.blogspot.com/2023/04/blog-post_79.html?m=1

ಸೋಮವಾರ, ಏಪ್ರಿಲ್ 3, 2023

ಏ ರೈತ, ನಿನ್ನ ಈ ಪರಿಸ್ಥಿತಿಗೆ ಕಾರಣರಾರು ತಿಳಿದಿದೆಯೇ?


ತಾಯಿಯು ತನ್ನ ಕಂಕುಳಲ್ಲಿರುವ ಮಗುವಿನ ಕೈಗೆ ಹರಿತವಾದ ಚಾಕುವನ್ನು ಏಂದೂ ಕೊಡುವ ಯೋಚನೆ ಮಾಡಲಾರಳು. ಏಕೆಂದರೆ,  ಪ್ರಜ್ಞೆ ಇಲ್ಲದ ಮಗು ಚಾಕುವಿನಿಂದ ತನ್ನ ಮೈಯನ್ನೇ ಪರಚಿಕೊಳ್ಳುವ ಸಾಧ್ಯತೆಯಿದೆ ಎಂದು ತಾಯಿಗೆ ತಿಳಿದಿದೆ. ಇದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರೂ ಕೂಡ ಪ್ರಜೆಗಳಿಗೆ ತಾಯಿಯೇ ಇದ್ದಂತೆ.  ಹಾಗಾದರೆ, ರಾಜಕೀಯ ನಾಯಕರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದದ್ದೇ ಆದರೆ, ಅವರು ಕಡಿಮೆ ವಿದ್ಯಾವಂತರಿಂದ ಕೂಡಿದ ಕೃಷಿ ಕ್ಷೇತ್ರದ ಜನರ  ಕೈಗೆ ಏನು ಕೊಡಬೇಕು ಅಥವಾ ಕೊಡಬಾರದು ಎಂಬುದನ್ನು ಯೋಚಿಸಿ ಕೊಡುತ್ತಿದ್ದರು.‌ ಪ್ರಜ್ಞೆಯ ಕೊರತೆಯಿಂದ ಕೆಟ್ಟ ಪರಿಣಾಮ ಉಂಟುಮಾಡುವ ಏನಾದರೂ ವಸ್ತುವನ್ನು ಕೊಟ್ಟರೂ ಸಹ ಸಮಯಕ್ಕೆ ಸರಿಯಾಗಿ ಸೂಕ್ತ ಕಾನೂನುಗಳನ್ನು ರೂಪಿಸಿ ರೈತರ ಹಿತ ಕಾಪಾಡಲು ಮುಂದಾಗುವುದು ಅವರ ಜವಾಬ್ದಾರಿ. 

ಇದು ಕೇವಲ ಕೆಲವು ರೈತರ ಪರಿಸ್ಥಿತಿಯಲ್ಲ, ಲಕ್ಷಾಂತರ ರೈತರು ತಮ್ಮ ಭೂಮಿಯನ್ನು ಬರಡು ಮಾಡಿಕೊಳ್ಳುತ್ತಿದ್ದಾರೆ. ಯಾವಾಗ ಭೂಮಿಯ ಬರಡುತನದಿಂದ ಸತ್ವ ರಹಿತ ಆಹಾರ ಉತ್ಪಾದನೆ ಆಗುವುದೋ, ಆಗ ಮಕ್ಕಳನ್ನು ಹೆರಲು ಸಾಧ್ಯವಿರುವ ಹೆಣ್ಣುಮಕ್ಕಳೂ ಕೂಡ ಬಂಜೆಯರಾಗಲು ಪ್ರಾರಂಭಿಸುತ್ತಾರೆ. ಇದೇ ಕಾರಣಕ್ಕೆ ಇಂದು ಎಲ್ಲ ಪಟ್ಟಣಗಳಲ್ಲಿ ಸಂತಾನೋತ್ಪತ್ತಿ ಕೇಂದ್ರಗಳು ತಲೆ ಎತ್ತಿ ನಿಲ್ಲುತ್ತಿವೆ. ಮಕ್ಕಳಾಗುವುದು ಒಂದು ಸಮಸ್ಯೆಯಾದರೆ, ಹುಟ್ಟಿದ ಮಕ್ಕಳು ತಮ್ಮ ಪೂರ್ಣ ಆಯಸ್ಸು ಸ್ವಚ್ಚಂದವಾಗಿ ಕಳೆಯುವ ಸಾಧ್ಯತೆ ಕಡಿಮೆಯಿದೆ ಎಂದು ವಿಶ್ವ ಸಂಸ್ಥೆಯ ಹಲವು ವರದಿಗಳಲ್ಲಿರುವ ಅಂಕಿ ಅಂಶಗಳು ಹೇಳುತ್ತಿವೆ.


ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾದರೆ ಕುಟುಂಬದ ಮುಖ್ಯಸ್ಥ ಜವಬ್ದಾರಿಯಾಗುವನು. ಇದೇ ರೀತಿ ಸಮಾಜದಲ್ಲಿ ಸಮಸ್ಯೆಗಳು ಹೆಚ್ಚಾದರೆ ರಾಜಕೀಯ ನಾಯಕರೇ ಅದಕ್ಕೆ ನೇರ ಜವಬ್ದಾರರಾಗುವರು. ಹಾಗಾಗಿ, ಇನ್ನು ಮುಂದೆ ಜನಪ್ರತಿನಿಧಿ ಆಗಲು ಬಯಸುವವರಿಗೆ ಜನರ ಬಗ್ಗೆ ಎಷ್ಟು ನಿಜವಾದ ಕಾಳಜಿಯಿದೆ ಎಂಬುದನ್ನು ಜನರು ಯೋಚಿಸಿ ಮತ ನೀಡುವ ಅವಶ್ಯಕತೆಯಿದೆ. 


ಸಣ್ಣ ಮಕ್ಕಳು ಪ್ರಜ್ಞೆಯ ಕೊರತೆಯಿಂದ ಹೆಚ್ಚು ಸಿಹಿ ತಿನ್ನಲು ಬಯಸುತ್ತವೆ. ಆದರೆ, ಅದರ ದುಷ್ಪರಿಣಾಮ ಅರಿತ ತಂದೆ ತಾಯಿಯಂದಿರು ಮಕ್ಕಳಿಗೆ ಬುದ್ಧಿ ಹೇಳಿ ಅವಶ್ಯಕತೆ ಇರುವಷ್ಟು ನೀಡುವುದು ಮಕ್ಕಳ  ಆರೋಗ್ಯದ ದೃಷ್ಟಿಕೋನದಿಂದ ಬಹಳ ಒಳಿತು. ಇದೇ ರೀತಿ, ಸಮಾಜದ ಉತ್ತಮ ಆರೋಗ್ಯಕ್ಕೆ ಯಾವುದು  ಒಳಿತು ಎಂಬುದನ್ನು ಯೋಚಿಸಿ ನೀಡಬೇಕಾದವರೇ ರಾಜಕೀಯ ನಾಯಕರು. ಆದರೆ, ಕೇವಲ ಜನರ ಮತ ಪಡೆದು ಅಧಿಕಾರದ ಗದ್ದುಗೆ ಏರುವ ಉದ್ದೇಶದಿಂದ ಜನರು ಬಯಸಿದ್ದೆಲ್ಲವನ್ನೂ ನೀಡಿ ಅವರ ಜಮೀನುಗಳು ಮತ್ತು ಅರೋಗ್ಯ ಹಾಳು ಮಾಡುತ್ತಿರುವವರು ನಿಜವಾದ ನಾಯಕರೇ? ಎಂಬುದನ್ನು ಜನರು ಯೋಚಿಸಬೇಕಾಗಿದೆ. 


ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಅವರೇ ಇತರರಿಗೆ ಕೈ ಎತ್ತಿ ಕೊಡುವಂತೆ ಮಾಡುವವನೇ ನಿಜವಾದ ನಾಯಕ. ಜನರನ್ನು ಎಲ್ಲದಕ್ಕೂ ಪರಾವಲಂಬಿಗಳನ್ನಾಗಿ ಮಾಡಿ, ಇತರರ ಮುಂದೆ ಕೈ ಚಾಚುವಂತೆ ಮಾಡುವವನೇ ಖಳನಾಯಕ. ಇಂದು ಅತೀ ಹೆಚ್ಚು ಯುವಕರು ಚಟಗಳಿಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ, ಯುವಕರನ್ನು ಚಟಗಳಿಂದ ಮುಕ್ತರನ್ನಾಗಿ ಮಾಡುವ ಭರವಸೆ ನೀಡುವವನು ನಿಜವಾದ ನಾಯಕ. ಚಟಗಳಿಗೆ ದಾಸರಾದ ಯುವಕರ ಗುಂಪು ಕಟ್ಟಿಕೊಂಡು ಚುನಾವಣೆ ಪ್ರಚಾರ ಮಾಡುತ್ತಿರುವವನು ಸಮಾಜದಲ್ಲಿ ಒಬ್ಬ ದೊಡ್ಡ ಖಳನಾಯಕ.


2023ರ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಮಕ್ಕಳ‌ ಭವಿಷ್ಯದ ಕುರಿತು ಯೋಚಿಸುವ ನಿಜವಾದ ನಾಯಕರಿಗೆ ಮತ ನೀಡುತ್ತಿರುವಿರೋ ಅಥವಾ  ಮಕ್ಕಳ ಭವಿಷ್ಯವನ್ನೇ ಹಾಳು ಮಾಡುವ ಖಳನಾಯಕರಿಗೆ ಮತ ನೀಡುತ್ತಿರುವಿರೋ ಎಂಬುದನ್ನು ಒಮ್ಮೆ ಯೋಚಿಸಿ ಮತ ನೀಡಿ.

..........................................

ಪ್ರಕೃತಿ, ರೈತರು ಮತ್ತು ನಮ್ಮ ಮುಂದಿನ ಪೀಳಿಗೆಯನ್ನು ಉಳಿಸುವ ಸೂಕ್ತ ಕಾನೂನಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ "ನಡೆ ನಮನ" ಎಂಬ ಅಭಿಯಾನ ಪ್ರಾರಂಭಿಸಲಾಗಿದೆ. ಅಭಿಯಾನದಲ್ಲಿ ತಾವೂ ಕೂಡ ಭಾಗವಹಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಗೃಪ್ ಸೇರಿಕೊಳ್ಳಿ.


https://chat.whatsapp.com/Kvw0wWNyf0FJMdCWEoXjNu

ಭಾನುವಾರ, ಏಪ್ರಿಲ್ 2, 2023

ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ "ಪತ್ರ ಚಳುವಳಿ" ಮೂಲಕ "ನಡೆ ನಮನ"



ನಡೆ ನಮನ ಅಭಿಯಾನದ ಕುರಿತು ಸಂವಾದ



ವಿಜಯ ಕರ್ನಾಟಕ, 05-04-2023

ಯುದಯವಾಣಿ, 02-04-2023

ಹೆಚ್ಚಿನ ಮಾಧ್ಯಮ ವರದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:

ವಿದ್ಯಾರ್ಥಿಗಳು 2 ರಿಂದ 10 ನಿಮಿಷದ ಭಾಷಣದ ವಿಡಿಯೋ ಕಳುಹಿಸಿ ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಬಹುದಾದ ಭಾಷಣ ಸ್ಪರ್ಧೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ನಿರಂತರ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಗೃಪ್ ಸೇರಿಕೊಳ್ಳಿ:

ಓ ರೈತ, ನಿನ್ನ ಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಯಾವಾಗ?


ಜಗತ್ತಿನ ಮುಂದುವರೆದ ದೇಶ ಮತ್ತು ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ  ಅಮೇರಿಕ ದೇಶದಲ್ಲಿ ಕೃಷಿಯನ್ನು ಅವಲಂಬಿಸಿದವರು ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದೇ ರೀತಿ, ಭಾರತ ದೇಶದಲ್ಲಿಯೂ ಕೂಡ ದಿನಕ್ಕೆ 15 ಜನ ರೈತರು ಅತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಯಾವುದು ಇಲ್ಲದೇ ಬದುಕಲು ಸಾಧ್ಯವಿಲ್ಲವೋ ಅದನ್ನು ಉತ್ಪಾದಿಸುವ ರೈತ ಆತ್ಮಹತ್ಯೆಗೆ ಶರಣಾದರೆ, ಮುಂದೆ ಉಳಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜನರಿಗೂ ಒಳ್ಳೆಯ ಭವಿಷ್ಯವಿಲ್ಲ ಎಂದು ತಿಳಿದು ಬರುತ್ತದೆ.

ಅತೀ ಹೆಚ್ಚು ಮಾನವನ ಶ್ರಮ ಬೇಡುವ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ಸೂಕ್ತ ಕಾನೂನುಗಳನ್ನು ತರದೇ ಹೋದರೆ ಮುಂದೆ ಹಲವು ನಾಗರೀಕತೆಗಳೇ ನಾಶವಾಗುವ ಸಾಧ್ಯತೆಯಿದೆ. ಹಿಂದೆ ಅನೇಕ ನಾಗರೀಕತೆಗಳ ನಾಶ ಮೊದಲು ರೈತ ನಾಶವಾಗುವ ಮೂಲಕವೇ ಪ್ರಾರಂಭವಾಗಿವೆ.

ಇಂದು ರೈತರ ಮಕ್ಕಳು ರೈತರಾಗಲು ಇಷ್ಟಪಡದೇ ಇರುವುದು ಹಾಗೂ ನಾವು ರೈತರ ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ಸ್ಥಿತಿಗೆ ವ್ಯವಸ್ಥೆ ಬಂದು ತಲುಪಿರುವುದಕ್ಕೆ ಮುಖ್ಯ ಕಾರಣ ಕೃಷಿ ಲಾಭದಾಯಕವಾಗುವ ಕಾನೂನುಗಳು ಇರದೇ ಇರುವುದಾಗಿದೆ.

ಇತ್ತೀಚಿನ ದಿನಗಳಲ್ಲಿ ಶೇರ್ ಮಾರ್ಕೆಟಿಂಗ್ ಮತ್ತು ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅನೇಕ ಜನ ತಾವು ಗಳಿಸಿದ ಹಣವನ್ನು ಹೂಡುತ್ತಿದ್ದಾರೆ. ಇದು ಇಂದು ಗ್ರಾಮಗಳ ಹಂತದಲ್ಲೂ ಆವರಿಸಿ ಅನೇಕರು ಹಣ ಹೂಡುವುಂತೆ ಮಾಡುತ್ತಿದೆ.  ಇದಕ್ಕೆ ಮೂಲ ಕಾರಣ, ಸರಳವಾಗಿ ಕೆಲವೇ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡು ಸಂಪಾದಿಸಲು ಮತ್ತು ಕಳೆದುಕೊಳ್ಳಲು ಅವಕಾಶವಿರುವ ಕಾನೂನುಗಳು ಇರುವುದಾಗಿದೆ.  ಇದೊಂದು ಜೂಜಾಟವಾಗಿದೆ. ಈ ಜೂಜಾಟಕ್ಕೆ ಅವಕಾಸವಿರುವ  ಕಾನೂನುಗಳು ಇರುವುಸರಿಂದ ಇಂದು ಜನರ ಶ್ರಮ ಸಂಸ್ಕೃತಿ ನಾಶವಾಗಿ ಕೊನೆಗೆ ಯಾರು  ಶ್ರಮ ವಹಿಸಿ ದುಡಿಯಲು ಪ್ರಯತ್ನಿಸುತ್ತಿರುವರೋ ಅವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಗೆ ಬಂದು ತಲಪುವಂತೆ ಮಾಡುತ್ತಿದೆ. ಯಾವಾಗ ಶ್ರಮ ಸಂಸ್ಕೃತಿ ನಾಶವಾಗುವುದೋ, ಆಗ ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥ ಬಳಕೆಯಾಗಿ ಪ್ರಕೃತಿ ನಾಶವಾಗಲು ಪ್ರಾರಂಭಿಸುವುದು.

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ರೈತರ ಶ್ರಮಕ್ಕೆ ತಕ್ಕ‌ ಬೆಲೆ ನೀಡುವ ಕಾನೂನಾಗಿದೆ. ಈ ಕಾನೂನಿನ ಅಡಿಯಲ್ಲಿ, ರೈತರ ಜಮೀನುಗಳಲ್ಲಿರುವ ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುವ ಯೋಜನೆ ತರುವುದರಿಂದ ಎಲ್ಲರೂ ಜಾನುವಾರು ಮತ್ತು ಗಿಡಮರಗಳ ಆಧಾರಿತ ಕೃಷಿ ಪ್ರಾರಂಭಿಸಿ ಮಣ್ಣಿನ ಜೀವಂತಿಕೆ ಹೆಚ್ಚಿಸಬಹುದಾಗಿದೆ.‌ ಇಂದು ಜಾನುವರು ಮತ್ತು ಗಿಡಮರಗಳ ಆಧಾರಿತ ಕೃಷಿ ಮಾಡುವವರಿಗೆ ತಕ್ಕ ಲಾಭ ಇರದೇ ಇರುವ ಕಾರಣ ಜಾನುವಾರು ಸಾಕುವವರ ಮತ್ತು ಗಿಡ ಮರಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಜಾನುವಾರು ಮತ್ತು ಗಿಡಮರಗಳ ಆಧಾರಿತ ಕೃಷಿಯನ್ನು ಪೋಷಿಸುವ ಸೂಕ್ತ ಯೋಜನೆ ತಂದರೆ ಮಾತ್ರ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಿಕೊಳ್ಳಬಹುದು. ಶ್ರಮ‌ ಸಂಸ್ಕೃತಿಯನ್ನು ಪೋಷಿಸಿ ಕೃಷಿ ಸಂಸ್ಕೃತಿ ಪುನಶ್ಚೇತನಗೊಳ್ಳುವ ಸೂಕ್ತ ಯೋಜನೆ ತರುವ ಕುರಿತು ಆಳವಾಗಿ ಚರ್ಚೆ ಮಾಡುವ ಸೂಕ್ತ ಸಮಯವೇ ಚುನಾವಣೆಯ ಸಮಯ.

2023 ರ ಕರ್ನಾಟಕ ವಿಧಾನ ಸಭೆ ಚುನಾವಣೆಯ ಮುಖ್ಯ ಚರ್ಚಾ ವಿಷಯ ರೈತನ ಆದಾಯ ಹೆಚ್ಚಿಸುವ ಕಾನೂನಿನ ಕುರಿತು ಆಗಬೇಕು. ಈಗಾಗಲೇ ವಿಜಯಪುರ ಜಿಲ್ಲೆಯ ಹಿರಿಯ ಸಾವಯವ ಕೃಷಿಕರ ನೇತೃತ್ವದಲ್ಲಿ ಈ ನಿಟ್ಟಿನ ಪ್ರಯತ್ನ ಪ್ರಾರಂಭವಾಗಿದೆ. ಕರ್ನಾಟಕದ 224 ವಿಧಾನ ಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೂ "ಮಣ್ಣು ಪುನಶ್ಚೇತನ ಕಾನೂನಿನ"  ಮೂಲಕ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗೆ ತರಲು ಮನವಿ ಪತ್ರ ಸಲ್ಲಿಸುವ "ನಡೆ ನಮನ" ಎಂಬ 'ಪತ್ರ ಚಳುವಳಿ' ಪ್ರಾರಂಭಿಸಲಾಗಿದೆ.

ಸದರಿ ಮನವಿ ಪತ್ರದ ಮೂಲಕ  ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ  ಪ್ರೋತ್ಸಾಹ ಧನ ನೀಡುವ ಬೇಡಿಕೆ ನೀಡಲಾಗುತ್ತಿದೆ. ರೈತರು ಕೇಳುವ ಬೇಡಿಕೆ ಸಾಧ್ಯವಿಲ್ಲ ಎನ್ನುವುದು ಜನಪ್ರತಿನಿಧಿಗಳ ಅಭಿಪ್ರಾಯವಾದರೆ, ತಾವು ಎಷ್ಟು ಪ್ರೋತ್ಸಾಹ ಧನ ಘೋಷಿಸಲು ಸಾಧ್ಯವಿದೆಯೋ ಅದನ್ನು ಘೋಷಿಸಬೇಕು ಎಂಬುದು ಸಾವಯವ ಕೃಷಿಕರ ನಿಲುವಾಗಿದೆ.

ಇತ್ತೀಚೆಗೆ ಸರ್ಕಾರಿ ನೌಕರರು ಏಳನೆ ವೇತನ ಆಯೋಗ ಆಧಾರಿತ ವೇತನ‌ದ ಬೇಡಿಕೆ ಸಲ್ಲಿಸಿದಾಗ ಸರ್ಕಾರವು ತಮಗೆ ಸಾಧ್ಯವಿರುವುದನ್ನು ಪರಿಗಣಿಸಿ ವೇತನ ಹೆಚ್ಚಿಗೆ ಮಾಡಿತು.‌ ಇದೇ ರೀತಿ, ರೈತರ ಬೇಡಿಕೆಯನ್ನು ಸ್ವೀಕರಿಸಿ ತಮ್ಮ ಇತರ ಯೋಜನೆಗಳ ಜೊತೆಗೆ ಮಣ್ಣು ಪುನಶ್ಚೇತನ ಕಾನೂನಿನ ಅನ್ವಯ ರೈತರಿಗೆ ಎಷ್ಟು ಪ್ರೋತ್ಸಾಹ ಧನ ನೀಡಬಹುದು ಎಂಬುದನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸುವ ಅವಶ್ಯಕತೆಯಿದೆ. ರೈತರು ತಮಗೆ ತಿಳಿದಿರುವಷ್ಟು ಬೇಡಿಕೆಯನ್ನು ಸಲ್ಲಿಸಿದಾಗ ಅದನ್ನು ಪರಿಶೀಲಿಸಿ ತಾವು ಎಷ್ಟು ಪ್ರಮಾಣಸಲ್ಲಿ ಬೇಡಿಕೆ ಪೂರೈಸಬಹುದು ಎಂಬುದನ್ನು ತಿಳಿಸುವುದು ಜನಪ್ರತಿನಿಧಿಗಳಾಗಲು ಬಯಸುತ್ತಿರುವವರ ಜವಾಬ್ದಾರಿಯಾಗಿದೆ.

ಜಾನುವಾರು ಮತ್ತು ಮರಗಿಡಗಳ ಆಧಾರಿತ ಕೃಷಿ ಹೆಚ್ಚು ಶ್ರಮವನ್ನು ಬೇಡುತ್ತವೆ.‌ ಅದಕ್ಕೆ ತಕ್ಕ ಬೆಲೆ ಅವರಿಗೆ ದೊರೆಯದೇ ಹೋದರೆ, ಅವರಿಗೆ ಎಲ್ಲಿ ಹೆಚ್ಚು ಹಣ ದೊರೆಯುವುದೋ ಅಲ್ಲಿಗೆ ವಲಸೆ ಹೋಗುವುದು ಸಾಮಾನ್ಯ. ಇದೇ ಕಾರಣಕ್ಕಾಗಿ ಇಂದು ಗ್ರಾಮಗಳಿಂದ ಯುವಕರು ವಲಸೆ ಹೋಗುತ್ತಿದ್ದಾರೆ. ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಪ್ರೋತ್ಸಾಹ ಧನ ಘೋಷಿಸಿದರೆ ಹಣ ಇರುವವರು ಶೇರ್ ಮಾರ್ಕೆಟಿಂಗ್ ನಲ್ಲಿ ಹಣ ಹೂಡುವ ಬದಲು ಜಮೀನಿನ ಫಲವತ್ತತೆ ಹೆಚ್ಚಿಸಲು ಹಣ ಹೂಡುವರು.‌ ಈ ಮೂಲಕ ಒಟ್ಟು ಪ್ರಕೃತಿಯ ಪೋಷಣೆಗೆ ಅನೇಕ ಜನರನ್ನು ವಿವಿಧ ರೀತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು.

ಓ ರೈತ, ನಿನ್ನ ಶ್ರಮಕ್ಕೆ ತಕ್ಕ ಬೆಲೆ‌ ಕೇಳುವ ಸೂಕ್ತ ಸಮಯವೇ ಚುನಾವಣೆ ಸಮಯ. ಲಾಭದ ಯಾವ ಭರವಸೆಯೂ ಇಲ್ಲದ ಸಂದರ್ಭದಲ್ಲಿಯೂ ಕೂಡ ಸಾವಯವ ಕೃಷಿ ಮಾಡಿ ಭೂಮಿಯ ಜೀವಂತಿಕೆ ಉಳಿಸಲು ಪ್ರಯತ್ನಿಸಿದ ಸಾವಯವ ಕೃಷಿಕರು ಮುಂದಾಳತ್ವ ವಹಿಸಿ ಯೋಜನೆ ಜಾರಿಯಾಗುವಂತೆ ಮಾಡಲೇಬೇಕು. ಹೆಚ್ಚು ಶ್ರಮ‌‌‌ವಿರುವ ಸಾವಯವ ಕೃಷಿ ಅನುಸರಿಸುತ್ತಾ ಬರುತ್ತಿರುವ ರೈತರಿಗೆ ಈ ಯೋಜನೆಯಿಂದ ಹೆಚ್ಚಿಗೆ ಪ್ರೋತ್ಸಾಹ ಧನ ದೊರೆಯುವುದು. ಇದರ ಮೂಲಕ ಸರಳ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿರುವ ರೈತರಿಗೆ ಭೂಮಿಯಲ್ಲಿ ಸಾವಯುವ ಪ್ರಮಾಣ ಹೆಚ್ಚಿಸುವುದರಿಂದ ಹೆಚ್ಚಿಗೆ ಲಾಭವಾಗುವುದು ಎಂಬುದರ ಅರಿವು ಉಂಟಾಗುವುದು.

ಅನೇಕ ವರ್ಷಗಳಿಂದ ಸಾವಯವ ಕೃಷಿ ಅನುಸರಿಸುತ್ತಾ ಬಂದ ಸಾವಯವ ಕೃಷಿಕರೂ ಕೂಡ ಮುಂದೆ ಸುಸ್ಥಿರವಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ, ಇತರ ಎಲ್ಲರ ಜಮೀನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾದಂತೆ ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಬಾವಿ ಮತ್ತು ಬೋರವೆಲ್ ನೀರು ಅವಲಂಬಿತರು ನೀರಿನ ಕೊರತೆ ಅನುಭವಿಸುವರು. ಇದರ ಜೊತೆಗೆ ಪ್ರಕೃತಿ ವಿಕೋಪಗಳು ಹೆಚ್ಚಾಗಿ ವಿವಿಧ ರೀತಿಯಲ್ಲಿ ಹಾನಿಗೊಳಗಾಗುವ ಸಂದರ್ಭ ಬರುವುದು. ಹಾಗಾಗಿ, ಇಂದು ಸಾವಯವ ಕೃಷಿಕರು ಮುಂದಾಳತ್ವ ವಹಿಸಿ ಈ ಯೊಜನೆ ಜಾರಿಯಾಗುವಂತೆ ಮಾಡಿ ತಮ್ಮನ್ನು ರಕ್ಷಿಸಿಕೊಂಡು ಇತರ ರೈತರನ್ನೂ ರಕ್ಷಿಸುವ ಜವಾಬ್ದಾರಿಯಿದೆ.

ಮಣ್ಣು ಪುನಶ್ಚೇತನ ಯೋಜನೆ ಜಾರಿಗೆ ತರುವುದರಿಂದ ರೈತರಿಗೆ ಮತ್ತು ರೈತರನ್ನು ಅವಲಂಬಿಸಿದವರಿಗೆ ಆಗುವ ಲಾಭಗಳು.

೧. ಈಗಾಗಲೇ ಹಲವು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ ರೈತರಿಗೆ ಮೊದಲು ಹೆಚ್ಚಿನ ಪ್ರೋತ್ಸಾಹ ಧನ ದೊರೆಯುವುದು. ಇದರಿಂದ, ಇತರ ರೈತರಿಗೆ ಇವರು ಮಾದರಿಯಾಗಿ ತರಬೇತಿಗೊಳಿಸಲು ಸಾಧ್ಯವಿದೆ. ಇವರ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

೨. ಮರ ಆಧಾರಿತ ಕೃಷಿ ಮತ್ತು ಹಸಿರೆಲೆ ಗೊಬ್ಬರದ ಉಪಯೋಗದಿಂದ ಮಣ್ಣಿನ ಫಲವತ್ತದೆ ಹೆಚ್ಚಾಗುವದು.

೩. ಜಾನುವಾರು ಆಧಾರಿತ ಕೃಷಿ ಹೆಚ್ಚಾಗುವುದು.

೪. ಸಾವಯವ ಕೃಷಿಯಿಂದ ಮೊದಲ ವರ್ಷಗಳಲ್ಲಿ ಬರುವ ಕಡಿಮೆ ಆದಾಯವನ್ನು ಒಪ್ಪಿಕೊಂಡು ನಷ್ಟ ಸರಿದೂಗಿಸಬಹುದು.

೫. ರಾಸಾಯನಿಕ ಗೊಬ್ಬರ ಬಳಕೆ ಮತ್ತು ಕೀಟನಾಶಕಗಳ ಬಳಕೆ ಕಡಿಮೆಯಾಗಿ ಶುದ್ಧ ಆಹಾರ ಉತ್ಪಾದನೆ ಆಗುವುದು ಹಾಗೂ ಉತ್ಪಾದನಾ ಖರ್ಚು ಕಡಿಮೆಯಾಗುವುದು.

೬. ರೈತರ ಜಮೀನುಗಳಗೆ ಕೆಲಸ ಮಾಡಲು ಬರುವ ಕೆಲಸಗಾರರ ಹೆಚ್ಚಿನ ಸಂಬಳದ ಬೇಡಿಕೆಯನ್ನು ಪೂರೈಸಬಹುದು.

೭. ರೈತರ ಶ್ರಮ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಬಹುದು.

೮. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಗ್ರಾಮಗಳಿಂದ ವಲಸೆ ಹೋಗುವ ಜನಗಳ ಸಂಖ್ಯೆ ಕಡಿಮೆಯಾಗುವುದು.

೯. ರೈತರು ಮುತುವರ್ಜಿ ವಹಿಸಿ ಜಮೀನು ಸವಳು ಅಥವಾ ಜವಳು ಆಗುವುದನ್ನು ತಡೆಯುವರು.

೧೦. ರೈತರ ಜಮೀನುಗಳ ಫಲವತ್ತತೆ ಹೆಚ್ಚಾಗುತ್ತಾ ಉತ್ಪಾದಕತೆಯೂ ಹೆಚ್ಚಾಗುವುದು.

೧೧. ರೈತರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುವುದು. 

೧೨. ನಾಶವಾಗುತ್ತಿರುವ ಜೀವ ವೈವಿಧ್ಯತೆ ತಡೆದು ಕೃಷಿ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗುವುದು.


ಹೆಚ್ಚು ಶ್ರಮವಿರುವ ಸಾವಯವ ಕೃಷಿಕರಿಗೆ ಮತ್ತು ಸರಳ ಕೃಷಿ ಅನುಸರಿಸಿದವರಿಗೆ 3 ಮಾದರಿಯ ಯೋಜನೆಯಿಂದ ದೊರೆಯಬಹುದಾದ  ಪ್ರೋತ್ಸಾಹ ಧನದ ಅಂದಾಜು ಮೊತ್ತ ಕೋಷ್ಟಕದಲ್ಲಿ ನೀಡಲಾಗಿದೆ


..........................................

ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು. 

 ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.

https://missionsavesoil.blogspot.com/2023/03/blog-post_12.html

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ


 

ಮಣ್ಣು ಮತ್ತು ರೈತರ ರಕ್ಷಣೆಯ ಹೊಣೆ ಹೊತ್ತ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ  ಪರಿಹಾರ ಸಿಗಲು ಸಾಧ್ಯ.‌ ಈ ಅಭಿಯಾನಕ್ಕೆ ಜಗತ್ತಿನ 400 ಕೋಟಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರು ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿ ಕಾನೂನು ಅನುಷ್ಠಾನ ಆಗುವಂತೆ ಮಾಡುವ ಸೂಕ್ತ ಸಮಯವೇ ಚುನಾವಣೆ ಸಮಯ. ರೈತರು ಮತ್ತು ಇತರ ಪ್ರಗತಿಪತರ ಸಂಘ ಸಂಸ್ಥೆಗಳ ಮೂಲಕ ಚುನಾವಣೆ ಸಂದರ್ಭದಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗಾಗಿ ಬೇಡಿಕೆ ಸಲ್ಲಿಸುವ "ಪತ್ರ ಚಳುವಳಿ" ಯನ್ನು  ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶವನ್ನು ಎಲ್ಲ ಪ್ರಜೆಗಳಿಗೆ ತಿಳಿಸುವ ಜವಾಬ್ದಾರಿ ಹೊತ್ತು ಸದರಿ ವಿಷಯದ ಕುರಿತು ಸುದ್ದಿ ಮಾಡುತ್ತಿರುವ ಎಲ್ಲ ಮಾಧ್ಯಮ‌ ಮಿತ್ರರಿಗೆ ಅನಂತ ಧನ್ಯವಾದಗಳು.


ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಮೂಲಕ‌ ಪಡೆಯಿರಿ

https://missionsavesoil.blogspot.com/2023/05/blog-post.html

 


ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ  ಪ್ರಾರಂಭಿಸಿದ "ಪತ್ರ ಚಳುವಳಿ" ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://missionsavesoil.blogspot.com/2023/04/blog-post_79.html?m=1

ವಿದ್ಯಾರ್ಥಿಗಳು 2 ರಿಂದ 10 ನಿಮಿಷದ ಭಾಷಣದ ವಿಡಿಯೋ ಕಳುಹಿಸಿ ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಬಹುದಾದ ಭಾಷಣ ಸ್ಪರ್ಧೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://missionsavesoil.blogspot.com/2023/03/blog-post_12.html?m=1


ಪ್ರಜಾವಾಣಿ, 29-04-2023

ಸಂದರ್ಶನ ದಿನಪತ್ರಿಕೆ, ದಿನಾಂಕ:30-04-2023


ಯುದಯವಾಣಿ, 02-04-2023













ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ

ಸಂದರ್ಶನ ದಿನ ಪತ್ರಿಕೆ