ಶನಿವಾರ, ಏಪ್ರಿಲ್ 8, 2023

ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ ರಾಜ್ಯಾದ್ಯಂತ ಮನವಿ ಪತ್ರ ಸಲ್ಲಿಕೆ ಪ್ರಾರಂಭ

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.‌  ಈ ಕಾನೂನಿನ ಅಡಿಯಲ್ಲಿ ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳಿಗೆ ಬೇಡಿಕೆ  ಸಲ್ಲಿಸುವ ಸೂಕ್ ಸಮಯವೇ ಚುನಾವಣೆ ಸಮಯ.  ಹಾಗಾಗಿ, ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ  ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ  ಯೋಜನೆ ಜಾರಿಗಾಗಿ ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ.
ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದು. ವೈಯಕ್ತಿಕವಾಗಿ ಹಾಗೂ ಸಂಘ-ಸಂಸ್ಥೆಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಬಹುದು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಲು ಇಚ್ಚಿಸುವವರಿಗೆ ಮತ್ತು ಗುಣಮಟ್ಟದ ಆಹಾರ ಸೇವನೆ ಮಾಡಲು ಇಚ್ಚಿಸುವವರಿಗೆ ಈ ಕಾನೂನು ವರದಾನವಾಗಿದೆ. ಹಾಗಾಗಿ, ಆಹಾರ ಸೇವನೆ ಮಾಡುವವರೆಲ್ಲರೂ ಅಭಿಯಾನದ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1

 

ಅಭ್ಯರ್ಥಿಗಳ ಅಭಿಪ್ರಾಯಗಳು

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ JDS ಅಭ್ಯರ್ಥಿಯಾದ ಶ್ರೀ ಅಪ್ಪುಗೌಡ ಪಾಟೀಲರು

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಶರಣಪ್ಪ ಸುಣಗಾರ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಶ್ರೀ ಬಸಲಿಂಗಪ್ಪಗೌಡ ಇಂಗಳಗಿ

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಸಂಜೀವ ಐಹೊಳೆಯವರು

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಎಂ ಬಿ ಪಾಟೀಲ ಅವರಿಂದ ಅಭಿಪ್ರಾಯ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಸೋಮನಗೌಡ ಪಾಟೀಲ ಅವರಿಂದ ಅಭಿಪ್ರಾಯ
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಅಶೋಕ ಮನಗೂಳಿ ಅವರಿಂದ ಅಭಿಪ್ರಾಯ.
 


ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ವಿಶಾಲಾಕ್ಷಿ  ಪಾಟೀಲರ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯಾದ ಶ್ರೀ ರಮೇಶ ಭೂಸನೂರ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ರಾಜುಗೌಡ ಪಾಟೀಲ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಎಸ್ ಕೆ ಬೆಳ್ಳುಬ್ಬಿ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿಠ್ಠಲ‌ ಕಟಕಧೊಂಡರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ಬಿ ಡಿ ಪಾಟೀಲರಿಂದ ಅಭಿಪ್ರಾಯ.


ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಯಶವಂತರಾಯಗೌಡ ಪಾಟೀಲರಿಂದ ಅಭಿಪ್ರಾಯ.


ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಶಿವಾನಂದ ಪಾಟೀಲರಿಂದ ಅಭಿಪ್ರಾಯ.
 
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜುಗೌಡ ಪಾಟೀಲರ ಅಭಿಪ್ರಾಯ.
ವಿಜಯಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಬಸನಗೌಡ ಪಾಟೀಲ( ಯತ್ನಾಳ) ಅವರು


ವಿಜಯಪುರ ವಿಧಾನಸಭಾ ಮತಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಹಮದ್ ಮುಶರಿಫ್ ಇವರಿಗೆ ಮಣ್ಣು ಪುನಶ್ಚೇತನ ಕಾನೂನು ಜಾರಿಗಾಗಿ ಬೆಂಬಲ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರ ಹೇಳಿಕೆ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದಿಂದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಶ್ರೀ ದೇವಾನಂದ ಚವ್ಹಾಣ ಅವರು ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನವಾಗಲು ಕೈ ಜೋಡಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
 
 ಜ್ಞಾನಯೋಗಾಶ್ರಮ, ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ದಿ:08-04-2023 ರಂದು ಚಾಲನೆ ನೀಡಲಾಯಿತು
 

ಅಭಿಯಾನದ ಕುರಿತು ಹೆಚ್ಚಿನ‌ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:    

https://missionsavesoil.blogspot.com/2023/04/blog-post_10.html?m=1


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ