ಭಾನುವಾರ, ಮಾರ್ಚ್ 12, 2023

ಭಾಷಣದ ವಿಡಿಯೊ ಕಳುಹಿಸಿ ರೂ. 1 ಲಕ್ಷ ಬಹುಮಾನ ಗೆಲ್ಲಿ


-: ಭಾಷಣ ಸ್ಪರ್ಧೆಯ ರೂಪರೇಷೆಗಳು :-

ಭಾಷಣದ ವಿಷಯ: ಪರಿಸರ ಉಳಿಸುವಲ್ಲಿ ನಮ್ಮನ್ನಾಳುವ ನಾಯಕರ ಜವಾಬ್ದಾರಿ ( ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗಿ 200 ಕೋಟಿ ಜನಸಂಖ್ಯೆ ಸಾವಿಗೀಡಾಗುವ ಸಂದರ್ಭ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತು ಉಳಿದ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಸೂಕ್ತ ಪ್ರಜ್ಞಾವಂತ ನಾಯಕರಿಗಿರಬೇಕಾದ ಗುಣಲಕ್ಷಣಗಳ ಕುರಿತ ಭಾಷಣ ಸ್ಪರ್ಧೆ ಇದಾಗಿದೆ)

ಬಹುಮಾನ:

1. ಮೊದಲ ಬಹುಮಾನ ರೂ. 1 ಲಕ್ಷ. 

2. ಎರಡನೇ ಬಹುಮಾನ ರೂ. 50 ಸಾವಿರ 

3. ಮೂರನೇ ಬಹುಮಾನ ರೂ. 25 ಸಾವಿರ 

4. ಸಮಾಧಾನಕರ ಬಹುಮಾನ ರೂ. 5 ಸಾವಿರದಂತೆ 10 ವಿದ್ಯಾರ್ಥಿಗಳಿಗೆ  ನೀಡಲಾಗುವುದು.

ಕೃಷಿ ಮಹಾವಿದ್ಯಾಲಯ, ವಿಜಯಪುರದ ಪ್ರಜ್ಞಾವಂತ ಕೃಷಿ ಪದವೀಧರರು ಬಹುಮಾನ ನೀಡುತ್ತಿದ್ದಾರೆ. 

(ಇತರರು ವೈಯಕ್ತಿಕವಾಗಿ ಅಥವಾ ಸಂಘ-ಸಂಸ್ಥೆಗಳ ಮೂಲಕ ಬಹುಮಾನ ನೀಡಲು ಮುಂದೆ ಬಂದರೆ ಆಯಾ ಬಹುಮಾನಗಳ ಸಂಖ್ಯೆ ಹೆಚ್ಚಾಗುವವು)

ಭಾಷಣ ಅವಧಿ: 

2 ರಿಂದ 10 ನಿಮಿಷ (ನಾವು ನೀಡಿದ ಅವಧಿಯಲ್ಲಿ ಇರುವ ಭಾಷಣಗಳನ್ನು ಮಾತ್ರ ಸ್ವೀಕರಿಸಲಾಗುವುದು)

ಭಾಷಣ ಕಳುಹಿಸಿ ಕೊಡುವ ಕೊನೆಯ ದಿನ: 01-07--2023

ವಿಜೇತರನ್ನು ಆಯ್ಕೆ ಮಾಡುವ ವಿಧಾನ

ಯುಟುಬ್ ವೀಕ್ಷಕರ ಸಂಖ್ಯೆ, ಸರಾಸರಿ ವೀಕ್ಣಣೆಯ ಸಮಯ, ಲೈಕ್ ಗಳು ಮತ್ತು ಕಮೆಂಟ್ ಗಳ ಆಧಾರದ ಮೇಲೆ ಬಹುಮಾನ ನೀಡಲಾಗುವುದು.

ತಾವು ವಿಡಿಯೋ ಕಳುಹಿಸಿದ ಮೂರು ದಿನಗಳಲ್ಲಿ ಯುಟುಬ್ ಗೆ ಅಪ್ಲೋಡ್ ಮಾಡಲಾಗುವುದು.

ದಿನಾಂಕ 15-07-2023 ರ ವರೆಗೆ ವೀಕ್ಷಿಸಿದ ವೀಕ್ಷಕರ ಆಧಾರದ ಮೇಲೆ ಬಹುಮಾನವನ್ನು ಘೋಷಿಸಲಾಗುವುದು(ಅಂದಿನ ದಿನ ಸಾಯಂಕಾಲ 6 ಗಂಟೆಗೆ). 

 ವಯೋಮಿತಿ: 

18 ವರ್ಷ ಮೀರಿರಬಾರದು (ದಿನಾಂಕ: 18-02-2023 ಕ್ಕೆ 18 ವರ್ಷ ಆಗಿರಬಾರದು)

 ಬದಲಾವಣೆ: ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ಬಹುಮಾನ ಘೋಷಣಾ ದಿನಾಂಕವನ್ನು ಹಲವು ಶಿಕ್ಷಕರ ಕೋರಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಭಾಷಣ ಸ್ಪರ್ಧೆಯಲ್ಲಿ ಭಾಗವಗಿಸುವ ಕೊನೆಯ ದಿನಾಂಕ : 15-05-2023 ರ ಬದಲು 01-07-2023 ಎಂದಾಗಿದೆ ಹಾಗೂ ಭಾಷಣ ಸ್ಪರ್ಧೆಯ ಬಹುಮಾನ ಘೋಷಣಾ ದಿನಾಂಕ: 15-06-23 ರ ಬದಲು 15-07-2023 ಎಂದಾಗಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಶಾಲಾ ಪರೀಕ್ಷೆಗಳು ಮತ್ತು ರಜಾ ದಿನಗಳು ಸ್ಪರ್ಧಾ ಸಮಯದಲ್ಲಿ ಇದ್ದ ಕಾರಣ ಸಿಕ್ಷಕರು ಮಕ್ಕಳನ್ನು ಭಾಷಣ ಸ್ಪರ್ಧೆಯಲ್ಲಿ ತೊಡಗಿಸಲು ಸಾಧ್ಯವಾಗಿಲ್ಲ.‌ ಹಾಗಾಗಿ ಶಾಲಾ ಶಿಕ್ಷಕರ ಕೋರಿಕೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

 ವಿಶೇಷ ಸೂಚನೆಗಳು : 

 1. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ  ಕೃಪೆಯಿಂದ ಬರೆದ "ಉಸಿರು" ಕಿರು ಪುಸ್ತಕವು  ಆನ್ಲೈನ್ ನಲ್ಲಿ ಲಭ್ವವಿದೆ, ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿರಿ.  ಮಣ್ಣು ಉಳಿಸಿ ಅಭಿಯಾನದ ಕುರಿತ ರೇಡಿಯೋ ಸಂದರ್ಶನದ ಆಡಿಯೋ ಯುಟುಬ್ ನಲ್ಲಿ ಲಭ್ಯವಿದೆ, ಅದನ್ನೂ ಕೂಡ ಕೇಳಿದ ನಂತರ ಭಾಷಣ ತಯಾರಿ ಮಾಡುವುದು.

2. ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನದ ಮಾತುಗಳು, ಗತಿಸಿಹೋದ ಹಲವು ಮಹಾನ್ ನಾಯಕರ ಮಾತುಗಳು ಹಾಗೂ ಕೆಲವು ಘಟನೆಗಳನ್ನು ಉಲ್ಲೇಖಿಸಿ ಭಾಷಣ ಮಾಡಬೇಕು.

3.ಮಣ್ಣು ಉಳಿಸಿ ಅಭಿಯಾನದ ವೆಬ್ಸೈಟ್ savesoil.org ನಲ್ಲಿಯ ಮಾಹಿತಿಯನ್ನು ಭಾಷಣದಲ್ಲಿ ಉಪಯಲಯೋಗಿಸಿ. ವಾಸ್ತವಿಕವಾಗಿ ರೈತರ ಹಾಗೂ ಇತರ ಸಾಮಾಜಿಕ ಸಮಸ್ಯೆಗಳ ಉಲ್ಲೇಖಿತ ಭಾಷಣ ಇರಬೇಕು.

4. ಭಾಷಣದಲ್ಲಿ ಯಾವುದೇ ವ್ಯಕ್ತಿಯ ತೇಜೊವಧೆ ಮಾಡಿರಬಾರದು ಹಾಗೂ ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಅಥವಾ ಪಕ್ಷದ ಹೆಸರನ್ನು ಬಳಕೆ ಮಾಡಬಾರದು. ಅಂತಹ ಭಾಷಣಗಳನ್ನು ಸ್ವೀಕರಿಸುವುದಿಲ್ಲ.

5. ಮುಂಬರುವ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಹೇಗಿರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಭಾಷಣ ಇರಬೇಕು.

6. ಭಾಷಣದಲ್ಲಿ ತಾವು ಭಾಗವಹಿಸುವುದು ಬಹಳ ಮುಖ್ಯ, ಆದ ಕಾರಣ ಭಾಷಣವನ್ನು ಜನರಿಗೆ ಮನಮುಟ್ಟುವಂತೆ ಓದಲೂ ಬಹುದು. ವಾಸ್ತವಿಕ‌‌ ಸಮಸ್ಯೆಗಳನ್ನು ಹೆಚ್ಚು ಜನರಿಗೆ ಮನಮುಟ್ಟುವಂತೆ ತಿಳಿಸುವಿರಿ ಎಂಬುದಕ್ಕೆ ಆದ್ಯತೆ ಇರುವುದು.

ಅತೀ ಹೆಚ್ಚು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲು ಪ್ರಜ್ಞಾವಂತ ಶಿಕ್ಷಕರು ಮತ್ತು ಪಾಲಕರಲ್ಲಿ ಕಳಕಳಿಯ ವಿನಂತಿ.

ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ವಿಶೇಷ ಅವಕಾಶ.

ಇಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.

ಈ ಕೆಳಕಂಡ ಸಂಪನ್ಮೂಲಗಳನ್ನು ಉಪಯೋಗಿಸಿ ಭಾಷಣ ಸಿದ್ದಪಡಿಸಿ.

1. ಪೂಜ್ಯ ಶ್ರಿ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪೆಯಿಂದ ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ಬರೆದ ಪುಸ್ತಕವು ಉಚಿತವಾಗಿ PDF ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು ಓದಿ

2. ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ರೇಡಿಯೋ ಸಂದರ್ಶನದಲ್ಲಿ ಮಣ್ಣು ಉಳಿಸಿ ಅಭಿಯಾನದ‌ ಕುರಿತು ಮಾತನಾಡಿದ ಅಡಿಯೋ ಅಲಿಸಿ

3. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಸದ್ಗುರು ಅವರು ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ತಿಲಿದುಕೊಳ್ಳಿ ಮತ್ತು ಹೆಚ್ಚಿನ ‌ಮಾಹಿತಿಗಾಗಿ savesoil.org ವೆಬ್ಸೈಟ್ ಗೆ ಭೇಟಿ ನೀಡಿ.

4. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ವಿಡಿಯೋಗಳನ್ನು ಆಲಿಸಿ

ಗೂಗಲ್ ಮೀಟ್ ಮುಖಾಂತರ ಜನರಿಗೆ ಭಾಷಣ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ವಿಡಿಯೋ ವೀಕ್ಷಿಸಿ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9110885321 / 9113811569 

ಅಭೀಃ ಫೌಂಡೇಶನ್, ವಿಜಯಪುರ

  • ಈಗಾಗಲೇ ಭಾಷಣದ ವಿಡಿಯೋ ಕಳುಹಿಸಿದ ವಿದ್ಯಾರ್ಥಿಗಳ ಭಾಷಣ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
            https://youtube.com/playlist?list=PL8k_q2UXZgollJ0b9J7AAZfQtsJzlToB6

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ