ಶುಕ್ರವಾರ, ಮಾರ್ಚ್ 31, 2023

ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು ಏಕೆ ಅವಶ್ಯಕ?

 

ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳೆಲ್ಲರು ಒಮ್ಮತದ ಅಭಿಪ್ರಾಯದಿಂದ ಉತ್ತಮ ಭವಿಷ್ಯ ರೂಪಿಸಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಿ ಅವನನ್ನು ಹಿಂಬಾಲಿಸುವುದು ಎಂದು ಅರ್ಥ. ಈ ಪ್ರಕ್ರಿಯೆ ಶಾಂತಿ ಸಮಾಧಾನದಿಂದ ನಡೆಯುತ್ತಿದ್ದರೆ, ಆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುತ್ತಿದೆ ಎಂದು ಹೇಳಬಹುದು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ಭಾರತ ದೇಶದಲ್ಲಿ ಶಾಂತಿಯಿಂದ ಜನಪ್ರತಿನಿಧಿಗಳ ಆಯ್ಕೆ ಆಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುತ್ತಿರುವುದಕ್ಕೆ ಕೈಗನ್ನಡಿಯಾಗಿದೆ.


ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಪ್ರಜಾಪ್ರಭುತ್ವ ದೇಶ ನಮ್ಮದಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ. ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸುವುದು ಬಹು ಕಷ್ಟದ ಕೆಲಸ. ನಮ್ಮ ಅನೇಕ ಜನ ಪೂರ್ವಜರ ತ್ಯಾಗ ಬಲಿದಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ. ಅದನ್ನು ಉಳಿಸಿ-ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಬುನಾದಿಯಾದ ಚುನಾವಣೆ ಯಾವ ಆಧಾರದ ಮೇಲೆ ನಡೆಯುತ್ತದೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸುತ್ತದೆ.


ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಒಂದು ಸಾವಿರ ಕೋಟಿಗಿಂದ ಅಧಿಕ ಹಣ ದುರ್ಬಳಕೆ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಿರುವುದು ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂದಿನ ಈ ವ್ಯವಸ್ಥೆಗೆ ಕಡಿವಾಣ ಹಾಕದಿದ್ದರೆ, ಮುಂದೆ ಸಮಾಜದಲ್ಲಿ ಅಶಾಂತಿ ತಲೆದೋರಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸೋಲುವ ಸಾಧ್ಯತೆಯಿದೆ. ಆಗ, ನಮ್ಮ ಪೂರ್ವಜರ ತ್ಯಾಗ ಬಲಿದಾನಕ್ಕೆ ಯಾವುದೇ ಅರ್ಥ ಇಲ್ಲದಂತೆ ಅಗುವುದು. ಇದರ ಕುರಿತು ಪ್ರಜ್ಞಾವಂತರು ಯೋಚಿಸುವ ಸಮಯ ಕೂಡಿ ಬಂದಿದೆ. ನಮ್ಮ ಇಂದಿನ ನಡೆಯಿಂದ ಪ್ರಕೃತಿಯ ಮೇಲಾಗುವ ಪರಿಣಾಮದ ಕುರಿತು ವಿಚಾರ ಮಾಡದೇ ನಡೆಯುವವರ ಸಂಖ್ಯೆ ಯಾವಾಗ ಹೆಚ್ಚಾಗುವುದೋ ಆಗ ಚುನಾವಣೆಗಳು ವಾಮಮಾರ್ಗದಿಂದ ನಡೆದು, ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗುವಂತೆ ಆಗುವುದು.


ಇಂದು ಎಲ್ಲ ಜನರಿಗೂ ಪ್ರಕೃತಿಯ ಮಹತ್ವವನ್ನು ತಿಳಿಸಬೇಕಾಗಿದೆ. ಪ್ರಕೃತಿಯನ್ನು ಉಳಿಸಿ-ಬೆಳೆಸುವುದಕ್ಕೆ ಪೂರಕವಾದ ಯೋಜನೆಗಳನ್ನು ತರುವ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.


ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಸುದೀರ್ಘವಾಗಿ ಗೆಲ್ಲುತ್ತಾ ಸಾಗುವುದೋ ಅಷ್ಟು ಆ ದೇಶಕ್ಕೆ ವಿಶ್ವದಲ್ಲಿ ಮಹತ್ವ ಬರುವುದು. ಇಂದು ಜರುಗುತ್ತಿರುವ ಚುನಾವಣೆಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಂಡರೆ, ಖಂಡಿತವಾಗಿ ಭಾರತ ದೇಶ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿ ನಿಲ್ಲುವುದು. ದೇಶದ ಜನ ಎಷ್ಟು‌ ಪ್ರಜ್ಞಾವಂತಿಕೆಯಿಂದ ಮತದಾನದಲ್ಲಿ ಭಾಗವಹಿಸುವರೋ ಅಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲುವುದು.


ಜನರು ಪ್ರಜ್ಞಾವಂತಿಕೆಯಿಂದ ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಮುಂದಿನ ದಿನಗಳಲ್ಲಿ ಭೂಮಿಯ ಮೇಲಿನ ಎಲ್ಲ ಜನರೂ ಎದುರಿಸಬೇಕಾದ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ. ಕೇವಲ ವೈಯಕ್ತಿಕ ಸಮಸ್ಯೆಗೆ ಗಮನ ಹರಿಸದೇ ದೇಶದ ಸಮಸ್ಯೆಗೆ ಗಮನ ಹರಿಸುವಂತೆ ಜನರನ್ನು ತಯಾರಿ ಮಾಡುವ ಯೋಜನೆ ರೂಪಿಸಬೇಕಾಗಿದೆ. ಈ ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸೂಕ್ತ ಸಮಯವೇ ಚುನಾವಣೆಯ ಸಮಯ. ನಾವು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೆಲ್ಲಿಸಿದರೆ, ಮುಂದೆ ನಮ್ಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಸುಂದರ ವಾತಾವರಣವನ್ನು ನಿರ್ಮಿಸಲು ಇಂದೇ ನಾವು ಹೆಜ್ಜೆ ಇಟ್ಟಂತೆ ಅಗುವುದು.‌ ಇದುವೇ ಪ್ರಕೃತಿ ಪ್ರೇಮಿಗಳಾದ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸಲ್ಲಿಸುವ ನಡೆ ನಮನವಾಗಿದೆ...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. *ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ?* ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಮಾರ್ಚ್ 30, 2023

ಮಾಧ್ಯಮ ‌ಮಿತ್ರರು ಮಣ್ಣಿನ ಋಣ ತೀರಿಸಲು ಮುಂದಾಗಬಹುದೇ?

 


ಮಾಧ್ಯಮ ಮಿತ್ರರು ಎಂದರೆ ಸಮಾಜದ ಅಭಿವೃದ್ಧಿಗೆ ಅವಶ್ಯವಿರುವ ಮಾಹಿತಿಯನ್ನು ಸಕಾಲಕ್ಕೆ ಒದಗಿಸುವ ಜವಾಬ್ದಾರಿ ಹೊತ್ತವರು ಎಂದು ಅರ್ಥ. ಯಾರು ಇನ್ನೊಬ್ಬರ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೋ ಅವರನ್ನು ಮಿತ್ರರು ಎಂದು ಸಂಭೋಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಏಳಿಗೆಯ ಮುಖ್ಯ ಕೊಂಡಿಯಾಗಿ ಕೆಲಸ ಮಾಡುವವರೇ ಮಾಧ್ಯಮ ಮಿತ್ರರು.


ಇತ್ತೀಚಿನ ದಿನಗಳಲ್ಲಿ ಕಲುಷಿತ ವಾಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಸರಿ ದಾರಿಗೆ ತರುವಲ್ಲಿ ಅನೇಕ ಮಾಧ್ಯಮ ಮಿತ್ರರು ತಮ್ಮದೇ ಆದ ಮಾರ್ಗದಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಲವು ಮಾಧ್ಯಮ ಮಿತ್ರರು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿರುವ ಕಾರಣ ಅತ್ಯಂತ ಕೀಳು ಮಟ್ಟಕ್ಕಿಳಿಯುವ ವ್ಯವಸ್ಥೆಯನ್ನು ಖಂಡಿತ ತಡೆಯಲಾಗುತ್ತಿದೆ. 


ಸಾಮಾಜಿಕ ವ್ಯವಸ್ಥೆಯು ಸರಿಯಾಗಿ ಕೆಲಸ ನಿರ್ವಹಿಸಬೇಕಾದರೆ, ಮಾಧ್ಯಮ‌ ಮಿತ್ರರು ಯಾವುದು ಸಮಾಜದ ಅಭಿವೃದ್ದಿಗೆ ಪೂರಕ ಅಥವಾ ಪೂರಕವಲ್ಲ, ಎಂಬ ಎರಡೂ ವಿಷಯಗಳನ್ನು  ಜನರಿಗೆ ಮನವರಿಕೆ ಮಾಡಿ ಕೊಡಬೇಕಾಗುವುದು. ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಕಲುಷಿತ ವಾಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಎತ್ತಿ ತೋರಿಸಿ ಅದನ್ನು ಸರಿ ದಾರಿಗೆ ತರುವುದಕ್ಕೆ ಮಾಧ್ಯಮ ಮಿತ್ರರು ಸಮಯ ನೀಡುವುದು ಅನಿವಾರ್ಯವಾಗಿದೆ.


ಕಲುಷಿತವಾಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಶುದ್ಧಗೊಳಿಸುವ ಸೂಕ್ತ ಸಮಯವೇ ಚುನಾವಣೆ ಸಮಯ.‌ ಈ ಸಮಯದಲ್ಲಿ ಯಾವ ವಿಷಯಗಳನ್ನು ಮುನ್ನೆಲೆಗೆ ತರುವೆವೋ ಅವು ಸಮಾಜದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವವು.


ಕತ್ತಲನ್ನು ಬೆಳಕು ಮಾತ್ರ ಹೋಗಲಾಡಿಸಲು ಸಾಧ್ಯ. ಹಾಗಾಗಿ, ಕಲುಷಿತ ವಿಷಯಗಳನ್ನು ಹೋಗಲಾಡಿಸುವ ಶಕ್ತಿ ಒಳ್ಳೆಯ ವಿಷಯಗಳಿಗೆ ಮಾತ್ರವಿದೆ. ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಮಿತ್ರರು  ಹೆಚ್ಚು ಚರ್ಚೆಗೆ ಒಳಪಡಿಸಬಹುದಾದ ಅತ್ಯಂತ ಅವಶ್ಯಕ ವಿಷಯವೇ "ಮಣ್ಣು ಪುನಶ್ಚೇತನ ಕಾನೂನು" ತರಬಹುದಾದ ಕ್ರಾಂತಿಕಾರಿ ಬದಲಾವಣೆಯ ಕುರಿತು.


ಕಳೆದ ವರ್ಷ ಪ್ರಾರಂಭವಾದ 'ಮಣ್ಣು ಉಳಿಸಿ' ಅಭಿಯಾನಕ್ಕೆ ಜಗತ್ತಿನ 400 ಕೋಟಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆ ಮತ್ತು ಜಗತ್ತಿನ ಜವಾಬ್ದಾರಿಯುತ ವಿಜ್ಞಾನಿಗಳು ಮಣ್ಣಿನ ನಾಶದಿಂದ ನಾಗರೀಕತೆಗಳೇ ನಾಶವಾಗುವ ದಿನಗಳು ಹತ್ತಿರವಿವೆ ಎಂದು ಹೇಳುತ್ತಿರುವುದರಿಂದ ಮಣ್ಣು ಉಳಿಸಿ ಅಭಿಯಾನ ಜಗತ್ತಿನ‌ ಅತೀ ಹೆಚ್ಚು ಜನರ ಬೆಂಬಲ ಪಡೆದಿದೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಮಾಧ್ಯಮ‌ ಮಿತ್ರರು ಮಣ್ಣಿನ ವಿನಾಶದ ಕುರಿತು ಚರ್ಚೆ ಮಾಡಿ, ಮಣ್ಣನ್ನು ಉಳಿಸುವ ಮೂಲಕ ಎಲ್ಲರಿಗೂ ಆಹಾರ ಮತ್ತು ಇನ್ನಿತರ ಜೀವನ ಅವಶ್ಯಕತೆಗಳ ಭದ್ರತೆ ಒದಗಿಸುವ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಸೂಕ್ತ ಮಾಹಿತಿಯನ್ನು ಎಲ್ಲ ಜನರಿಗೂ ಒದಗಿಸುವ ಜವಾಬ್ದಾರಿಯಿದೆ.


ಮಣ್ಣು ಉಳಿಸಿ ಅಭಿಯಾನದ ಮೂಲಕ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ ಮಣ್ಣು ಪುನಶ್ಚೇತನ ಕಾನೂನಿನ ಕುರಿತು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸದರಿ ಕಾನೂನಿನ  ಅಡಿಯಲ್ಲಿ "ಪ್ರತಿ ಒಂದು ಪ್ರತಿಶತ ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರದಿಂದ ಪ್ರತಿ ಒಂದು ಎಕರೆಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವ ಯೋಜನೆ"ಯನ್ನು  ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕೆಂದು ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು ಮನವಿ ಪತ್ರ ಸಲ್ಲಿಸುವ 'ಪತ್ರ ಚಳುವಳಿ' ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪ್ರಕೃತಿ ಉಳಿದು ಮುಂದಿನ ಪೀಳಿಗೆ ಉಳಿಯಬೇಕಾದರೆ ಎಲ್ಲರೂ ಈ ಕಾನೂನು ಅನುಷ್ಠಾನವಾಗಲು ಆಗ್ರಹಿಸುವ ಅವಶ್ಯಕತೆಯಿದೆ. ಮೊದಲು ರೈತರಿಗೆ, ನಂತರ ಸಮಸ್ತ ಜೀವರಾಶಿಗಳಿಗೆ ಒಳಿತನ್ನು ಮಾಡುವ "ಮಣ್ಣು ಪುನಶ್ಚೇತನ ಕಾನೂನಿನ ಮಹತ್ವ"ದ ಕುರಿತು ಮಾಧ್ಯಮ ಮಿತ್ರರು ಜನರಿಗೆ ಅರಿವು ಮೂಡಿಸುವ ಕೆಲಸ ಕೈಗೆತ್ತಿಗೊಂಡರೆ "ಸದಾ ಹಸಿರು ಕ್ರಾಂತಿಗೆ" ಅವರೇ ಮುನ್ನುಡಿ ಬರೆದಂತಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಮಣ್ಣಿನ  ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ಮಾಧ್ಯಮ‌ ಮಿತ್ರರು ಮಣ್ಣಿನ ಋಣ ತೀರಿಸಿಬಹುದಾಗಿದೆ. 


ರಾಜಕೀಯ ವ್ಯವಸ್ಥೆ ದಿನ ಕಳೆದಂತೆ ಬಹಳ ಕಲುಷಿತ ಗೊಳ್ಳುತ್ತಿದೆ ಎಂಬುದು ಬಹು ಜನರ ಅಭಿಪ್ರಾಯ. ಆದರೆ, ಗಬ್ಬು ನಾರುತ್ತಿರುವ ತಿಪ್ಪೆಯಿಂದ ದೊರೆಯುವ ಗೊಬ್ಬರವು ಸುಂದರ ಗಿಡಮರಗಳು ಬೆಳೆಯಲು ಹೇಗೆ ಪೋಷಣೆ ನೀಡುವುದೋ, ಅದೇ ರೀತಿ ಇಂದು ಗಬ್ಬು‌ ನಾರುತ್ತಿರುವ ರಾಜಕೀಯ ವ್ಯವಸ್ಥೆಯ ಆಳದಲ್ಲಿ ಒಂದು ಮಹಾನ್ ಸಾಧ್ಯತೆ ಅಡಗಿದೆ. ಅದುವೇ ಮಣ್ಣು ಪುನಶ್ಚೇತನ ಕಾನೂನನ್ನು ಅನುಷ್ಠಾನಗೊಳಿಸಿ ಮುಂದಿನ ಪೀಳಿಗೆ‌ ಬದುಕುಳಿಯುವ ಯೋಗ್ಯ ಪರಿಸರ ನಿರ್ಮಿಸುವ ಕಾರ್ಯದಲ್ಲಿ ಎಲ್ಲರನ್ನೂ ತೊಡಗಿಸುವುದಾಗಿದೆ. 


"ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಮನುಷ್ಯ ಎಲ್ಲಗೆ?" ಎಂಬ ವಿಷಯದ ಕುರಿತು ಆಳವಾಗಿ ಚಿಂತನೆ ಮಾಡುವ ಅತ್ಯಂತ ಸೂಕ್ತ ಸಮಯವೇ ಚುನಾವಣೆ ಸಮಯ. ಈ ಮಹಾನ್ ಕಾರ್ಯದ ಸಫಲತೆ ಇಂದಿನ ಮಾಧ್ಯಮ‌ ಮಿತ್ರರನ್ನು ಅವಲಂಬಿಸಿದೆ. ಈ ಮೂಲಕ ಮಾಧ್ಯಮ‌ ಮಿತ್ರರು ಮಣ್ಣಿನ ಋಣ ತೀರಿಸಲು ಮೊದಲ ಹೆಜ್ಜೆ ಇಡಬಹುದಾಗಿದೆ...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  


 ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ. 


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಬುಧವಾರ, ಮಾರ್ಚ್ 29, 2023

ಭಾರತವೇಕೆ ವಿಶ್ವ ಗುರುವಾಗುವ ಸಾಧ್ಯತೆಯಿದೆ?


 

ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದು ಅರ್ಥ. ಯಾರು ಆಂತರ್ಯದಲ್ಲಿ ಕವಿದಿರುವ ಕತ್ತಲೆಯನ್ನು ಹೋಗಲಾಡಿಸಿ ಜೀವನವನ್ನು ಸ್ಪಷ್ಟವಾಗಿ ಅರಿತುಕೊಂಡಿರುವರೋ ಅವರೇ ಗುರುಗಳು.‌ ಅವರು ಮುಂದಾಗಬಹುದಾದನ್ನು ಇಂದು ಗ್ರಹಿಸಿ ಸರಿಯಾದ ಮಾರ್ಗದರ್ಶನ ನೀಡಬಲ್ಲರು. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಶಕ್ತಿಯ ತವರೂರಾದ ಭಾರತ ದೇಶದಲ್ಲಿ ಕಾಲ ಪಕ್ವವಾದಾಗ ಖಂಡಿತ ಆಧ್ಯಾತ್ಮಿಕ ಗುರುಗಳಿಂದ ಇತರರಿಗೆ ಮಾರ್ಗದರ್ಶನ ದೊರೆತು ಭಾರತವು ವಿಶ್ವ ಗುರುವಿನ ಸ್ಥಾನ ಅಲಂಕರಿಸವುದು.

ಕೇವಲ‌ ಒಬ್ಬ ವ್ಯಕ್ತಿ ಗುರುವಾಗಬೇಕೆಂದರೆ ಗುರುವಾಗಲು ಸಾಧ್ಯವಿಲ್ಲ. ಯೋಗ ಸಾಧನಗಳ ಮುಖಾಂತರ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಾಗ, ಇತರರು ಅಂತಹ ವ್ಯಕ್ತಿಯ ಮಾರ್ಗದರ್ಶನ ಪಡೆಯಲು ಮುಂದಾಗುವರು. ಆಗ ಸೂಕ್ತ ಮಾರ್ಗದರ್ಶನ ನೀಡಿದ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸುವರು. ಇದೇ ರೀತಿ, ಭಾರತ ದೇಶ ವಿಶ್ವ ಗುರುವಾಗಬೇಕೆಂದು ಕೇವಲ ಬಯಸಿದರೆ ಸಾಲದು, ದೇಶದಲ್ಲಿರುವ ಜನರು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ತಮ್ಮ ಮುಂದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಹೊರಬೇಕು. ಇಂತಹ ವ್ಯಕ್ತಿಗಳ ಸಂಖ್ಯೆ ಎಷ್ಟು ಹೆಚ್ಚಾಗುವುದೋ‌ ಅಷ್ಟು ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿ ಇತರ ದೇಶಗಳಿಗೆ ಗುರುವಾಗಿ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದುವುದು.‌

ಇತರ ದೇಶಗಳು ಭಾರತ ದೇಶದ ಮಾರ್ಗದರ್ಶನ ಪಡೆಯುವ ದಿನಗಳು ಬಹಳ ದೂರವಿಲ್ಲ.‌ ಏಕೆಂದರೆ, ಕೇವಲ ಭೌತಿಕ ಅಭಿವೃದ್ಧಿ ಹೊಂದಿದ ದೇಶಗಳು ಯುದ್ದೋತ್ಸಾಹದಲ್ಲಿರುವುದು ಅವರ ಮೃಗೀಯ ಭಾವನೆಯನ್ನು ತೋರಿಸುತ್ತಿದೆ.‌ ಇದಕ್ಕೆ ಮುಖ್ಯ ಕಾರಣ ಜೀವನದ ಮಹತ್ವ ಅರಿಯದೇ ಕೇವಲ ಭೌತಿಕ ಸ್ತರದ ಆನಂದಕ್ಕೆ ಅವಲಂಬಿತರಾಗಿ ಇರುವುದಾಗಿದೆ. ಹಾಗಾಗಿ, ಕೇವಲ ಭೌತಿಕ ಸೌಕರ್ಯಗಳಿಂದ ಬಯಸುವ ಆನಂದದ ದುಷ್ಪರಿಣಾಮ ಏನಾಗುವುದು ಎಂಬುದನ್ನು ಅರಿತ ಮೇಲೆ ಖಂಡಿತ ಅನೇಕ ದೇಶಗಳು ಭಾರತ‌ ದೇಶದ ಕಡೆಗೆ ಮುಖ ಮಾಡುವ ಸಂದರ್ಭ ಬರುವುದು. ಆ ಕಾಲ ಬಹಳ ದೂರ ಉಳಿದಿಲ್ಲ.

ಈ ಸಂದರ್ಭದಲ್ಲಿ ಭಾರತ ದೇಶದ ಜನರು ಸೂಕ್ತ ಮಾರ್ಗದರ್ಶನ ‌ನೀಡುವ ಆಧ್ಯಾತ್ಮಿಕ ಗುರುಗಳನ್ನು ಹುಡುಕಿ, ಅವರು ನೀಡಿದ ಜ್ಞಾನವನ್ನು ಅಳವಡಿಸಿಕೊಂಡು ನಡೆಯುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ನಾಯಕರು ದೇಶದ ಒಳತಿಗಾಗಿ ನೀಡಿದ ಸಲಹೆಗಳನ್ನು ರಾಜಕೀಯ ನಾಯಕರು ಸ್ವೀಕರಿಸಿ ಅನುಷ್ಠಾನಕ್ಕೆ ತರುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇಂದು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿದ ಆಧ್ಯಾತ್ಮಿಕ ನಾಯಕರಾದ ಸದ್ಗುರು ಅವರು ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ 'ಮಣ್ಣು ಪುನಶ್ಚೇತನ ಕಾನೂನನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುವ ಅವಶ್ಯಕತೆಯಿದೆ. ಈ ಕಾನೂನಿಗೆ ಭಾರತ ದೇಶದ ಭವಿಷ್ಯವನ್ನು ಬದಲಿಸುವ ಸಾಮರ್ಥ್ಯವಿದೆ. ಇಂದು ಅಳಿವಿನ ಅಂಚಿನಲ್ಲಿರುವ ಕೃಷಿ ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಈ ಕಾನೂನಿನ ಮೂಲಕ ರೈತರಿಗೆ ಲಾಭವಾಗುವ ಯೋಜನೆಯನ್ನು‌ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಬೇಕು. 

ನಮ್ಮ ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾದರೆ, ಜನರು ಸದರಿ ಕಾನೂನಿನ ಮೂಲಕ ಯಾವ ರೀತಿಯ ಯೋಜನೆ ಬೇಕೆಂಬುದನ್ನು ಜನಪ್ರತಿನಿಧಿಗಳಿಗೆ ತಿಳಿಸುವ ಅವಶ್ಯಕತೆಯಿದೆ. ಮಣ್ಣು ಪುನಶ್ಚೇತನ ಕಾನೂನಿನ ಕುರಿತು ಹೆಚ್ಚು ಚರ್ಚೆ ಆಗಬೇಕಾದ ಸೂಕ್ತ ಸಮಯವೇ ಚುನಾವಣೆಯ ಸಮಯ. ಹಾಗಾಗಿ, ಮಣ್ಣು ಪುನಶ್ಚೇತನ ಕಾನೂನಿನ ಅಡಿಯಲ್ಲಿ ಕೃಷಿಕರಿಗೆ ಲಾಭವಾಗುವ ಯೋಜನೆಗಳನ್ನು ಜಾರಿಗೊಳಿಸಿದರೆ ಮಾತ್ರ ಕೃಷಿ ಸಂಸ್ಕೃತಿ ಉಳಿದು ಇತರ ದೇಶಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಒಲಿದು ಬರುವುದು. ಈ ಮೂಲಕ ಭಾರತ ದೇಶ ವಿಶ್ವ ಗುರುವಾಗುವ ಸಾಧ್ಯತೆಯಿದೆ.
...........................................
ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. *ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ?* ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  

ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.

...........................................
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಸೋಮವಾರ, ಮಾರ್ಚ್ 27, 2023

ಮಣ್ಣು ಮಿತ್ರರೇ! ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಯಾರಿಗಿದೆ?


ಯಾವುದರಿಂದ ಈ ದೇಹ ವ್ಯಕ್ತವಾಗಿ ಅವ್ಯಕ್ತವಾಗುವುದೋ ಅದಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ. ಅದುವೇ ಪಂಚ ಮಹಾಭೂತಗಳ ಸಮ್ಮಿಶ್ರಣದಿಂದ ಕೂಡಿದ  ಪ್ರಕೃತಿ. ಆ ಪ್ರಕೃತಿ ಮಾತೆ ಮುನಿಸಿಕೊಂಡಾಗ ಎಲ್ಲರೂ ಒಂದಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆವು. ಒಂದು ಕಡೆ ಆಹಾರ ಅಥವಾ ನೀರಿನ ಕೊರತೆಯುಂಟಾದಾಗ, ಇನ್ನೊಂದು ಸ್ಥಳದವರು ಮಾನವೀಯತೆಯ ದೃಷ್ಟಿಕೋನದಿಂದ ಕೊರತೆಯನ್ನು ಹೋಗಲಾಡಿಸಬಹುದು. ಆದರೆ, ಭೂಮಿಯ ಮೇಲಿನ ಬಹು ಜನರಿಗೆ ಆಹಾರ ಮತ್ತು ನೀರಿನ ಕೊರತೆಯುಂಟಾದಾಗ ಅನೇಕರು ಅಸಹಾಯಕರಾಗುವರು. ಇಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾದಾಗ ಮಾನವೀಯತೆಯನ್ನು ಮರೆತು ಒಬ್ಬರಲ್ಲಿರುವುದನ್ನು ಇನ್ನೊಬ್ಬರು ದೋಚಲು ಪ್ರಾರಂಭಿಸುವರು. ಈ ರೀತಿ ಒಂದು ದೇಶ ಇನ್ನೊಂದು ದೇಶದ ಮೇಲೆ ಅಕ್ರಮಣ ಮಾಡುವ ಮೂಲಕ ತನ್ನ ದೇಶದ ಜನರನ್ನು ಬದುಕುಳಿಸುವುದಕ್ಕೆ ಪ್ರಯತ್ನಿಸಬಹುದು. ಮೊದಲು ದೇಶಗಳ ಮಧ್ಯೆ ಯುದ್ಧ ಪ್ರಾರಂಭವಾಗಿ, ನಂತರ ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು, ಗ್ರಾಮಗಳು, ಕೊನೆಗೆ ಕುಟುಂಬಗಳ ಮಧ್ಯೆ ಯುದ್ಧಗಳು ಘಟಿಸುವವು. ಪ್ರಾಕೃತಿಕ ಸಮಸ್ಯೆ ಎದುರಾದಾಗ ಮೊದಲು ದೊಡ್ಡ ಸಮೂಹದಲ್ಲಿ ಎದುರಿಸಬಹುದಾದ ಸಮಸ್ಯೆಯನ್ನು ಮುಂದೆ ಒಬ್ಬಂಟಿಯಾಗಿ ಎದುರಿಸುವ ಸಂದರ್ಭ ಸೃಷ್ಟಿಯಾಗುವುದು.

ವಿಜ್ಞಾನಿಗಳು ಸಂಶೋಧನಗಳ ಮೂಲಕ ನೀಡುತ್ತಿರುವ ಅಂಕಿ ಅಂಶಗಳ ಪ್ರಕಾರ ಈ ರೀತಿಯ ಘಟನೆಗಳು ಮುಂದಿನ 20 ವರ್ಷಗಳಲ್ಲಿ ಆಗುವ ಸಾಧ್ಯತೆಯಿದೆ. ಈಗಾಗಲೇ ಆಹಾರ ಭದ್ರತೆಗಾಗಿ ಕೆಲವು ದೇಶಗಳ ಮಧ್ಯೆ ಯುದ್ಧಗಳು ಪ್ರಾರಂಭವಾಗಿವೆ.

ವಿಜ್ಞಾನಿಗಳ ಶೋಧನೆಯು ಅಂಕಿ ಅಂಶಗಳಿಗೆ ಕೊನೆಗೊಂಡರೆ, ಆಧ್ಯಾತ್ಮಿಕ ನಾಯಕರ ಆಂತರಿಕ ಶೋಧನೆಯು ಪ್ರಾಪಂಚಿಕರ ಸಮಸ್ಯೆಗೆ ಸೂಕ್ತ ಪರಿಹಾರದ ಮಾರ್ಗ ತಿಳಿಸುವ ಮೂಲಕ ಕೊನೆಗೊಳ್ಳುವುದು. ಯಾವ ಆಧ್ಯಾತ್ಮಿಕ ನಾಯಕರು ತೀವ್ರವಾದ ಆಂತರಿಕ ಶೋಧನೆಗೆ ಇಳಿಯುವರೋ ಅವರು ಕೊನೆಗೆ ಪ್ರಕೃತಿ‌ ಮಾತೆಯ ಸ್ವರೂಪವೇ ತಾವಾಗುವರು. ಮುಂದಾಗುವುದನ್ನು ಇಂದೇ ಆಂತರಿಕವಾಗಿ ಕಂಡು ಪ್ರಾಪಂಚಿಕರಿಗೆ ಸೂಕ್ತ ಮಾರ್ಗದರ್ಶನ ನೀಡುವರು. ಹೀಗಾಗಿಯೇ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು 40 ವರ್ಷಗಳ ಕಾಲ ಪ್ರಕೃತಿಗೆ ಪೂರಕವಾಗಿ ಬದುಕುವ ಮಾರ್ಗಗಳನ್ನು ಪ್ರವಚನಗಳ ಮೂಲಕ ತಿಳಿಸುತ್ತಾ ಕೊನೆಗೆ "ನನ್ನನ್ನು ಪ್ರಕೃತಿಯಲ್ಲಿ ಕಾಣಿ" ಎಂದು ಹೇಳುವ ಮೂಲಕ ಶ್ರೇಷ್ಠ ಸಂದೇಶವನ್ನು ಮಾನವ ಕುಲಕ್ಕೆ ನೀಡಿ ಲಿಂಗೈಕ್ಯರಾದರು. ಪ್ರಕೃತಿ ಉಳಿಸುವುದೇ ನಿಮ್ಮ ಮೊದಲ ಜವಾಬ್ದಾರಿ ಆಗಲಿ ಎಂಬುದನ್ನು ಆ ಮಾತಿನ ಮೂಲಕ ಸ್ಪಷ್ಟಪಡಿಸಿದ್ದಾರೆ. 

ಆಧುನಿಕ ಯುಗದಲ್ಲಿ ನಮ್ಮ ಕಣ್ಣಿಗೆ ಕಾಣುವ ಜ್ಞಾನೋದಯ ಹೊಂದಿದ ಆಧ್ಯಾತ್ಮಿಕ ನಾಯಕರಾದ ಸದ್ಗುರು ಅವರು ತಮ್ಮ 65 ನೇ ವಯಸ್ಸಿನಲ್ಲಿ ಜಗತ್ತಿನಾದ್ಯಂತ 'ಮಣ್ಣು ಉಳಿಸಿ' ಅಭಿಯಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೇವಲ 100 ದಿನಗಳಲ್ಲಿ 30 ಸಾವಿರ ಕಿಲೋಮೀಟರ್ ಬೈಕ್ ಮೇಲೆ ಪ್ರಯಾಣ ಮಾಡಿದರು. ಈ ಅತಿಮಾನುಷ ಕಾರ್ಯ ಮಾಡಿರುವುದಕ್ಕೆ ಮುಖ್ಯ ಕಾರಣವೇ ಸಮಸ್ತ ಜೀವರಾಶಿಗಳ ಮೇಲೆ ಅವರಿಗಿರುವ ಪ್ರೀತಿ ಮತ್ತು ಕರುಣೆ. 

ಸದ್ಗುರು ಅವರ ಪ್ರಯತ್ನಕ್ಕೆ ಜಗತ್ತಿನ ಹಲವು ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಇತಿಹಾಸದಲ್ಲಿ ಜಗತ್ತಿನ ಅತೀ ಹೆಚ್ಚು ಜನರು ಪಾಲ್ಗೊಂಡ ಮೊದಲ ಅಭಿಯಾನ ಇದಾಗಿದೆ. ಪ್ರಕೃತಿಯ ಸ್ವರೂಪವೇ ಆದ ಆಧ್ಯಾತ್ಮಿಕ‌ ನಾಯಕರ ಸತ್ಯ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. 

ಕರ್ನಾಟಕ ರಾಜ್ಯದ ಅನೇಕ ಆಧ್ಯಾತ್ಮಿಕ ನಾಯಕರು, ರಾಜಕೀಯ ನಾಯಕರು, ವಿಜ್ಞಾನಿಗಳು, ಸರ್ಕಾರಿ ನೌಕರರು, ಉದ್ದಿಮೆದಾರರು, ಖಾಸಗಿ ನೌಕರರು, ರೈತರು ಹಾಗೂ ಜನಸಾಮಾನ್ಯರೂ ಕೂಡ ಅಭಿಯಾನಕ್ಕೆ ಅನೇಕ ರೀತಿಯಿಂದ ಬೆಂಬಲ ವ್ಯಕ್ತಪಡಿಸಿದರು.

ಮಣ್ಣು ಉಳಿಸಿ ಅಭಿಯಾನ ಮೊದಲು ಜನರಲ್ಲಿ ಅರಿವು ಮೂಡಿಸುವ ಮೂಲಕ  ಪ್ರಾರಂಭವಾಗಿದೆ. ಇನ್ನು ಮುಂದೆ ಅಭಿಯಾನದ ಮೂಲ‌ ಉದ್ದೇಶ ಇಡೇರಬೇಕಾದರೆ ಅಭಿಯಾನದ ಮೂಲಕ ವಿವಿಧ ದೇಶ ಮತ್ತು ರಾಜ್ಯಗಳಿಗೆ ಸಲ್ಲಿಸಿದ "ಮಣ್ಣು ಪುನಶ್ಚೇತನ" ಕಾನೂನಿನ ಅಂಶಗಳು ವ್ಯವಸ್ಥಿತವಾಗಿ ಅನುಷ್ಠಾನವಾಗುವ ಅವಶ್ಯಕತೆಯಿದೆ. ಜನರು ಸಾಮಾನ್ಯವಾಗಿ ಏನು ಬೇಡಿಕೆ ಇಡುವರೋ ಅದನ್ನೇ ಆಳುವ ಸರ್ಕಾರಗಳು ನೀಡುವವು. ಹಾಗಾಗಿ, ಕೃಷಿ ಸಂಸ್ಕೃತಿಯನ್ನು ಉಳಿಸಿ ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸುವ ಮಣ್ಣು ಪುನಶ್ಚೇತನ ಕಾನೂನಿನ‌ ಕುರಿತು ಜನರು ಅರಿತುಕೊಂಡು, ಮುಂದೆ ತಮ್ಮ ಬೇಡಿಕೆಗೆ ಸ್ಪಂದಿಸುವ ನಾಯಕರನ್ನು ಆಯ್ಕೆ ಮಾಡುವ ಅವಶ್ಯಕತೆಯಿದೆ.

ಕರ್ನಾಟಕ ರಾಜ್ಯದ ಎಲ್ಲ ಮಾಜಿ  ಹಾಗೂ ಹಾಲಿ ಮುಖ್ಯಮಂತ್ರಿಗಳು "ಮಣ್ಣು ಉಳಿಸಿ" ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಆಗಬಹುದಾದ ಶಾಶ್ವತ ಹಸಿರು ಕ್ರಾಂತಿಗೆ  ದಿಕ್ಸೂಚಿಯಾಗಿದೆ. ಮಣ್ಣಿನ ಜೀವಂತಿಕೆ ಉಳಿಸಿ ಕೃಷಿಕರಿಗೆ ಲಾಭ ತಂದುಕೊಡುವ "ಮಣ್ಣು ಪುನಶ್ಚೇತನ ಕಾನೂನು" ಅನುಷ್ಠಾನ ಆಗಬೇಕಾದರೆ ಜನರ ಬೆಂಬಲದ ಅವಶ್ಯಕತೆಯಿದೆ. ಈಗಾಗಲೇ ಜಗತ್ತಿನ 400 ಕೋಟಿ‌ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದರಿಂದ ಜನರ ಬೆಂಬಲ ಚುನಾವಣೆ ಸಮಯದಲ್ಲಿ ವ್ಯಕ್ತವಾಗುವ ಅವಶ್ಯಕತೆಯಿದೆ. ಅದಕ್ಕಾಗಿ, ಚುನಾವಣೆ ಸಮಯದಲ್ಲಿ ಮರಳಿ "ಮಣ್ಣು ‌ಉಳಿಸಿ" ಅಭಿಯಾನದ ಮೂಲಕ ಅನುಷ್ಠಾನ ಗೊಳ್ಳಬೇಕಾದ ಕಾನೂನಿನ ಕುರಿತು ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ.

ಈಗಾಗಲೇ ಎಲ್ಲ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಮಣ್ಣು ಉಳಿಸಿ‌ ಅಭಿಯಾನಕ್ಮೆ ಬೆಂಬಲ ನೀಡಿರುವುದು ನಮಗೆಲ್ಲ ತಿಳಿದ ವಿಷಯ. ಹಾಗಾಗಿ, ಅವರ‌ ನೇತೃತ್ವದಲ್ಲಿ ಅಭಿಯಾನವನ್ನು ಪುನಃ ವಿಧಾನ ಸಭೆ ಚುನಾವಣೆ‌‌ ಸಂದರ್ಭದಲ್ಲಿ ಪ್ರಾರಂಭಿಸುವ ಉದ್ದೇಶದಿಂದ "ನಡೆ ನಮನ" ಎಂಬ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಜಯಪುರದ 'ಮಣ್ಣು ಉಳಿಸಿ'' ಅಭಿಯಾನದ ಸ್ವಯಂ ಸೇವಕರಿಂದ ದಿನಾಂಕ:27-03-2023 ರಂದು ಚಾಲನೆ ದೊರೆಯಿತು.

ಇಂದು ನಾವು ಎಲ್ಲ ಜಾತಿ, ಮತ, ಪಂಥ ಮತ್ತು ಪಕ್ಷಗಳ ಭೇದಭಾವವನ್ನು ಮರೆತು ಕೃಷಿ ಸಂಸ್ಕೃತಿಯನ್ನು ಉಳಿಸಿ ನಮ್ಮ ಮಕ್ಕಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಮಣ್ಣು ಪುನಶ್ಚೇತನ ಕಾನೂನನ್ನು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸುವ ಕುರಿತು ಯೋಚಿಸಬೇಕಿದೆ. ಆಧ್ಯಾತ್ಮಿಕ ನಾಯಕರು ಮುಂದಾಗಬಹುದಾದ ಪ್ರಕೃತಿ ವಿನಾಶದ ದುಷ್ಪರಿಣಾಮವನ್ನು ಕಂಡಿದ್ದಾರೆ. ಹಾಗಾಗಿ, ತಮ್ಮದೇ ಅದ ರೀತಿಯಲ್ಲಿ ಜನಜಾಗೃತಿ ಮೂಡಿಸುವ ತಮ್ಮ ಪ್ರಯತ್ನ ಈಗಾಗಲೇ ಮಾಡಿದ್ದಾರೆ. ಇನ್ನು ಮುಂದೆ ಜನರು ಮತ್ತು ಜನಪ್ರತಿನಿಧಿಗಳು ಇದರ ಕುರಿತು ಆಳವಾಗಿ ಚಿಂತನೆ ಮಾಡಿ ಒಮ್ಮತದಿಂದ ಕಾನೂನು ಅನುಷ್ಠಾನ ಮಾಡುವ ಅವಶ್ಯಕತೆಯಿದೆ. ಇಂದು ಶಾಂತಿಯಿಂದ ದೊರೆಯುವ ಪರಿಹಾರವನ್ನು ಕೈ ಚೆಲ್ಲಿದರೆ, ಮುಂದೆ ಪ್ರಕೃತಿ ಮುನಿಸಿಕೊಂಡ ಅಶಾಂತಿಯ ವಾತಾವರಣದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆರೆ "ಗಡ್ಡಕ್ಕೆ ಬೆಂಕಿ ಹತ್ತಿದಾಗ ಹಳ್ಳ ತೋಡಿದಂತೆ" ಎಂಬ ಗಾದೆ ಮಾತಿನಂತೆ ನಮ್ಮ ಪರಿಸ್ಥಿತಿ ಆಗುವುದು.

ಮುಂಬರುವ ವಿಧಾನ‌ ಸಭೆ ಚುನಾವಣೆ‌ ಯಾವ ಆಧಾರದ ಮೇಲೆ‌ ನಡೆಯುವುದೋ ಅದು ರೈತರ ಮತ್ತು ಮುಂದಿನ ಪೀಳಿಗೆಯ ಅಳಿವು-ಉಳಿವಿಗೆ ದಿಕ್ಸೂಚಿಯಾಗಿದೆ.

ವಿಧಾನ ಸಭೆ ಚುನಾವಣೆ ಸಮಯದಲ್ಲಿ ನಮ್ಮ ಎಲ್ಲ ರೀತಿಯ ಭೇದಗಳನ್ನು ಮರೆತು ಪ್ರಜ್ಞಾಪೂರ್ವಕಾವಾಗಿ ಒಂದುಗೂಡಬಹುದೇ? ಈ ನಿಟ್ಟಿನಲ್ಲಿ ಪ್ರಕೃತಿ ಮಾತೆಯ ಸ್ವರೂಪಿಗಳೇ ಅದ  ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಸದ್ಗುರು ಅವರು ತಮ್ಮದೇ ಆದ ರೀತಿಯಲ್ಲಿ ನಿರ್ಮಿಸಿದ ವೇದಿಕೆಯನ್ನು ನಾವು ಒಂದಾಗಿ ಎಲ್ಲ‌‌‌ ಜೀವರಾಶಿಗಳಿಗೆ ಒಳಿತಾಗುವ ಕಾನೂನಿನ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದೇ? ಈ ಮೂಲಕ ನಾವು ನಡೆದಾಡುವ ದೇವರಿಗೆ 'ನಡೆ ನಮನ' ಸಲ್ಲಿಸಬಹುದೇ?... ಯೋಚಿಸಿ!

...........................................
ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  

 ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ. 

...........................................
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ನಡೆದಾಡುವ ದೇವರಿಗೆ ನಡೆ ನಮನ ಸಲ್ಲಿಸುವುದು ಹೇಗೆ?

 




'ನಾನು' ಎಂಬುದು ಸಂಪೂರ್ಣವಾಗಿ ನಶಿಸಿ ಎಲ್ಲವನ್ನೂ ತಮ್ಮಲ್ಲಿ ಒಂದಾಗಿಸಿಕೊಂಡು ನಡೆಯುವ ಆಯಾಮ ತಲುಪಿದವರೇ ನಡೆದಾಡುವ ದೇವರು. 'ನಾನು' ಎಂಬುದೇ ನೋವಿಗೆ ಮೂಲ ಕಾರಣ. 'ನಾನು' ಎಂಬುದು ತನಗೆ ಮಾತ್ರ ನೋವು ನೀಡದೇ ಕೊನೆಗೆ ಪ್ರಕೃತಿಯ ನಾಶಕ್ಕೂ ಕೂಡ ಕಾರಣವಾಗುವುದು.

"ಒಬ್ಬ ಗೆಲ್ಲುಗ ಬೇರೊಬ್ಬರನ್ನು ಗೆಲ್ಲುತ್ತಾನೆ, ಆದರೆ ಒಬ್ಬ ಬುದ್ಧಿವಂತ ತನ್ನನ್ನು ತಾನು ಗೆಲ್ಲುತ್ತಾನೆ" ಎಂಬ ಮಾತಿನಂತೆ ಇಂದು ರಾಜಕೀಯ ನಾಯಕರು   ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ, ಅಧಿಕಾರದ ಗದ್ದುಗೆ ಏರಬೇಕು ಎಂಬ ಹಂಬಲದಲ್ಲಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಜೊತೆಗೆ ಬಹು ಜನರು ಕೈ ಜೋಡಿಸುತ್ತಿರುವುದು ಅತ್ಯಂತ ಆತಂಕದ ಸಂಗತಿ.  ಅವರ ಇಂದಿನ ಈ ನಡೆ ಮುಂದೆ ಪ್ರಕೃತಿಯ ಮೇಲೆ ಯಾವ ರೀತಿಯ ಪರಿಣಾಮ‌ ಬೀರುವುದು ಎಂಬುದರ ಪ್ರಜ್ಞೆ ಅವರಿಗಿಲ್ಲ. ನಾಯಕರು ಮತ್ತು ಪ್ರಜೆಗಳಿಗೆ ಪ್ರಜ್ಞೆ ಇರದೇ ಇರುವ ಕಾರಣ ಹಣ, ಜಾತಿ ಮತ್ತು ಷರಾಯಿ ಇಂದಿನ ಚುನಾವಣೆಗಳಲ್ಲಿ ಮೇಲುಗೈ ಸಾಧಿಸುತ್ತಿವೆ. ಇದಕ್ಕೆಲ್ಲ ಮೂಲ ಕಾರಣ,  ಸ್ಪರ್ಧೆ ಆಧಾರಿತ ಶಾಲಾ ಶಿಕ್ಷಣವು ನಮ್ಮಲ್ಲಿ "ನಾನು" ಎಂಬುದನ್ನು ಆಳವಾಗಿ ಬೇರೂರುವಂತೆ ಮಾಡಿದೆ. ಹಾಗಾಗಿ, ನಾಯಕರ ಮತ್ತು ಪ್ರಜೆಗಳ ಒಟ್ಟಾರೆ ನಡೆಯು ಮುಂದೆ ಸ್ವತಃ ಅವರ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವುದು ಎಂಬುದರ ಪರಿಜ್ಞಾನ ಇಲ್ಲದಂತೆ ಮಾಡಿದೆ.

'ನಾನು' ಎಂಬುದನ್ನು ಅಳಿದುಕೊಂಡ ಸಂತರ‌ ಮಾರ್ಗದರ್ಶನದಲ್ಲಿ ನಡೆಯಲು ಪ್ರಾರಂಭಿಸಿದರೆ ಮಾತ್ರ ನಮಗೆ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಇಲ್ಲವಾದರೆ ಮುಂದಿನ ಕೆಲವು ವರ್ಷಗಳಲ್ಲಿ ಅನೇಕ ಜೀವರಾಶಿಗಳು ನಾಶವಾಗಿ, ಕೊನೆಗೆ ಮಾನವ ವಿವಿಧ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಿ ನರಳಾಡುವ ಸಾಧ್ಯತೆಯಿದೆ. 

ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಹಿಂದೆ ಗುರು, ಮುಂದೆ ಗುರಿ ಇರಬೇಕು ಎಂಬ ಮಾತು ಕೇಳಿರುತ್ತೇವೆ. ತನ್ನ ಶಿಷ್ಯರ ಗುರಿ ದೊಡ್ಡದಾಗಿ ಮನಸ್ಸಿನ ವಿಶಾಲತೆ ಹೆಚ್ಚಾಗಲಿ ಎಂಬುದೇ ಆಧ್ಯಾತ್ಮಿಕ ಗುರುವಿನ ಇಚ್ಛೆ ಆಗಿರುತ್ತದೆ. ನಮ್ಮ ಗುರಿ ರಾಷ್ಟ್ರದಷ್ಟು ದೊಡ್ಡದಾದರೆ, ನಮ್ಮ ಮನಸ್ಸಿನ ವಿಶಾಲತೆಯೂ ಕೂಡ ಅಷ್ಟು ದೊಡ್ಡದಾಗುವುದು. ಆಗ‌ ಮಾತ್ರ ವೈಯಕ್ತಿಕ‌ ಹಿತಾಸಕ್ತಿಯನ್ನು ಬದಿಗಿಟ್ಟು ರಾಷ್ಟ್ರ‌ದ ಕುರಿತು ಚಿಂತನೆ ಮಾಡುವೆವು. ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಸಾವಿರಾರು ಕಿಲೋಮೀಟರ್ ದೂರದಿಂದ ಜನರು ಪಾದಯಾತ್ರೆ ಮುಖಾಂತರ ಹೋಗುತ್ತಾರೆ.  ಶ್ರೀಶೈಲ ಮಲ್ಲಯ್ಯನನ್ನು ಕಾಣಬೇಕೆಂಬ ದೊಡ್ಡ ಗುರಿ ಅವರ ಹೃದಯದಲ್ಲಿ ಸ್ಥಾಪಿತವಾಗಿರುವುದರಿಂದ ಅದೆಷ್ಟೇ ಕಷ್ಟವಾದರೂ ಸಹಿಸಿಕೊಂಡು ಮುಂದೆ ಹೆಜ್ಜೆ ಹಾಕುತ್ತಾರೆ. ಮಲ್ಲಯ್ಯನನ್ನು ಕಾಣಬೇಕೆಂಬ ಅವರ ದೊಡ್ಡ‌ ಗುರಿ ಎಲ್ಲ‌‌‌ ಕಠಿಣತೆಯನ್ನೂ ಸ್ವೀಕಾರ ಮಾಡುವಂತೆ ಮಾಡುತ್ತದೆ.‌ ಇದೇ ರೀತಿ ರಾಷ್ಟ್ರ‌ ನಿರ್ಮಾಣವೇ ನಮ್ಮ ಗುರಿಯಾದರೆ ನಮ್ಮ‌ ಸಣ್ಣ ಆಸೆ ಮತ್ತು ಆಕಾಂಕ್ಷೆಗಳನ್ನು ಬದಿಗಿಟ್ಟು ಮುಂದೆ ಸಾಗುವ ಮಾರ್ಗ ಖಂಡಿತ ತಿಳಿಯುವುದು.

ಒಂದು ಸುಂದರ ದೇಶ ಅಥವಾ ರಾಷ್ಟ್ರವೆಂದರೆ ಅಲ್ಲಿ ಎಲ್ಲ ಜೀವರಾಶಿಗಳೂ ಜೀವಿಸಲು ಯೋಗ್ಯವಾದ ಪ್ರಕೃತಿಯಿದೆ ಎಂದು ಅರ್ಥ. ಆದರೆ, ಇಂದು ಮನುಷ್ಯನ ಸ್ವಾರ್ಥದಿಂದ ಅನೇಕ ಜೀವರಾಶಿಗಳು ನಾಶವಾಗಿ ಕೊನೆಗೆ ಅವನೂ ಕೂಡ ನಾಶವಾಗುವ ದಿನಗಳು ಹತ್ತಿರ ಬರುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಹಾಗಾದರೆ, ಪ್ರಕೃತಿಯನ್ನು ಉಳಿಸುವ ಕುರಿತು ಜಾಗೃತಿ ಮೂಡಿಸಿ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬರುವ ಸೂಕ್ತ ಸಮಯವೇ ಚುನಾವಣೆ ಸಮಯವಾಗಿದೆ. 

ಪ್ರಕೃತಿಯನ್ನು ಉಳಿಸಿ ಸುಂದರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದೇ ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸುವ ಕಾನೂನುಗಳನ್ನು ತರುವ ಕುರಿತು ಪ್ರಜೆಗಳಿಗೆ ಮತ್ತು ನಾಯಕರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಅಡಗಿರುವ ಈ ಮಹಾನ್ ಕಾರ್ಯದಲ್ಲಿ ಎಲ್ಲರೂ ಕೈ‌ ಜೋಡಿಸುವ ಮೂಲಕ ನಡೆದಾಡುವ ದೇವರಿಗೆ ನಡೆ‌ ನಮನ ಅರ್ಪಿಸಬಹುದಾಗಿದೆ. ತಾವೂ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಬಹುದೇ?...ಯೋಚಿಸಿ!
...........................................
ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. *ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ?* ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  

ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.

...........................................
🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಭಾನುವಾರ, ಮಾರ್ಚ್ 26, 2023

ಸಮಸ್ಯೆಗಳಿಲ್ಲದ ಜೀವನಕ್ಕೆ ಅರ್ಥವಿದೆಯೇ?

 

ಇತಿಹಾಸವು ಯಾರು ಸಮಸ್ಯೆಗಳನ್ನು ಸವಾಲಾಗಿ ಸ್ಚೀಕರಿಸಿ ಜೀವನಕ್ಕೆ ಅರ್ಥ ಬರುವ ಹಾಗೆ ನಡೆದುಕೊಂಡಿರುವರೋ ಅವರ ಇತಿಹಾಸವಾಗಿದೆ. ಇತರರು ಎದುರಿಸಲಾಗದ ಸಮಸ್ಯೆಗಳನ್ನು ಯಾರು ಎದುರಿಸಿರುವರೋ ಅವರು ಸತ್ತರೂ ಕೂಡ ಇನ್ನೂ ಅನೇಕ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. 


ಜೀವನದಲ್ಲಿ ಯಾವ ಸಮಸ್ಯೆಗಳೂ ಬರದೇ ಇದ್ದರೆ, ನಮ್ಮ ಸಾಮರ್ಥ್ಯವನ್ನು ಪರಿಚಯ ಮಾಡಿಕೊಳ್ಳಲು ದೇವರು ಅವಕಾಶವೇ ನೀಡಲಿಲ್ಲ ಎಂದು ಅರ್ಥ. ಯಾರೂ ಊಹಿಸಲಾಗದ ಸಮಸ್ಯೆ ನಮಗೆ ಎದುರಾದ ಸಂದರ್ಭದಲ್ಲಿ, ಅದನ್ನು ಎದುರಿಸುವ ಛಲವೂ ಕೂಡ ನಮ್ಮಲ್ಲಿದ್ದರೆ, ಆಗ ದೇವರು ನಮ್ಮೊಂದಿಗಿದ್ದಾನೆ ಎಂದು ಅರ್ಥ. 


ಯಾವ ಕಲ್ಲು ಹೆಚ್ಚು ಕೆತ್ತನೆಗೆ ಒಳಗಾಗುವುದೋ ಆ ಕಲ್ಲು ಸುಂದರ ಮೂರ್ತಿಯಾಗುವುದು. ಅದೇ ರೀತಿ ನಮ್ಮ ಜೀವನದಲ್ಲಿ ಎಷ್ಟು ಪೆಟ್ಟುಗಳನ್ನು ತಿಂದರೂ ಸಹ ಉತ್ಸಾಹ-ಉಲ್ಲಾಸ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದರೆ ನಮ್ಮ ನಿಜವಾದ ಸಾಮರ್ಥ್ಯದ ಪರಿಚಯವಾಗಲು ಪ್ರಾರಂಭಿಸಿದೆ ಎಂದು ಅರ್ಥ. 


"ಸಮಸ್ಯೆಗಳು ಮನುಷ್ಯನಿಗೆ ಬರದೇ ಕಲ್ಲಿಗೆ ಬರುವವೇ" ಎಂಬ ಮಾತಿನಂತೆ ಮನುಷ್ಯನಿಗೆ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಹಾಗಾದರೆ, ಸಮಸ್ಯೆಗಳು ಎದುರಾದ ಸಂದರ್ಭವನ್ನು ಹೇಗೆ ಎದುರಿಸುತ್ತೇವೆ ಎಂಬುದು ಬಹಳ ಮುಖ್ಯ. ಸಮಸ್ಯೆಗಳು ಎದುರಾದಾಗ, ಯಾರು ಸಣ್ಣ ಸಮಸ್ಯೆಯನ್ನೂ ಕೂಡ ಎದುರಿಸಲಾಗದೇ ಕೆಟ್ಟ ಚಟಗಳಿಗೆ ಬಲಿಯಾಗಿರುವರೋ ಅಂತಹ ವ್ಯಕ್ತಿಗಳ ಸಂಗ ಮಾಡಿದರೆ, ಸಮಸ್ಯೆಗಳು ದ್ವಿಗುಣಗೊಳ್ಳುವವು. ಯಾರು ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸಿಯೂ ಕೂಡ ಸಮಚಿತ್ತತೆಯಿಂದ ಜೀವನ ಸಾಗಿಸುತ್ತಿರುವರೋ ಅಂತಹ ವ್ಯಕ್ತಿಗಳ‌ ಸಂಗ ಮಾಡಿದರೆ, ಖಂಡಿತ ಅವರಿಂದ ಸೂಕ್ತ ಮಾರ್ಗದರ್ಶನ ದೊರೆತು ಜೀವನಕ್ಕೆ ಅರ್ಥ ಬರುವುದು. ಹಾಗಾಗಿ, ಸಮಸ್ಯೆಗಳು ಎದುರಾದಾಗ ನಮ್ಮ ಸಂಗ ಯಾರೊಂದಿಗಿದೆ ಎಂಬುದು ಬಹಳ ಮುಖ್ಯ. ಸಮಸ್ಯೆಗಳು ಎದುರಾದಾಗ ಒಳ್ಳೆಯ ಸಂಗ ದೊರೆತರೆ ಇತರರಿಗೆ ಮಾದರಿಯಾಗುವ ಹಾಗೆ ಬದುಕಿ ತೋರಿಸಬಹುದು, ಕೆಟ್ಟ ಸಂಗ ದೊರೆತರೆ ಆ ವ್ಯಕ್ತಿಯ ಹಾಗೆ ಬದುಕಬಾರದೆಂಬ ಎಚ್ಚರಿಕೆಯ ಸಂದೇಶ ರವಾನೆಯಾಗುವುದು.


ಜೀವನದಲ್ಲಿ ದೊರೆಯಬಹುದಾದ ಎಲ್ಲಕ್ಕಿಂತಲೂ ಶ್ರೇಷ್ಠವಾದ ಸಂಗವೇ ಗುರುವಿನ ಸಂಗ. ಒಬ್ಬ ನಿಜವಾದ ಆಧ್ಯಾತ್ಮಿಕ ಗುರು ಕೇವಲ‌ ನಮಗೆ ಸಾಂತ್ವನದ ಮಾತು ಹೇಳದೆ ಬಂದಿರುವ ಎಲ್ಲ ಸಮಸ್ಯೆಗಳನ್ನೂ ಎದುರಿಸಿ ಜಯಶಾಲಿಗಳನ್ನಾಗಿ ಮಾಡುವನು. ಪಾಂಡವರು ಹನ್ನೆರಡು ವರ್ಷದ ವನವಾಸದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕೊನೆಗೆ ಜಯಶಾಲಿಗಳಾಗಿ ಜಗತ್ತಿಗೆ ಮಾದರಿಯಾಗಿ ನಿಲ್ಲುವರು. ಇದಕ್ಕೆ ಮುಖ್ಯ ಕಾರಣವೇ ಅವರು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಗುರುವಿನ ಸಂಗ‌ ಬಿಡದಿರುವುದು. ಆಧ್ಯಾತ್ಮಿಕ ಗುರು ಎಂದರೆ, ಅವರು ಎಲ್ಲವನ್ನೂ ಆಂತರ್ಯದಲ್ಲಿ ಅನುಭವಿಸಿ ಕಂಡವರು ಎಂದು ಅರ್ಥ. ಯಾರು ಎಷ್ಟು ಸ್ವತಃ ಅನುಭವಿಸಿ ಕಂಡಿರುವರೋ ಅಷ್ಟು ಇತರರಿಗೆ ದಾರಿ ತೋರಿಸಬಲ್ಲರು. 


ಇತ್ತೀಚಿನ ದಿನಗಳಲ್ಲಿ ಅನೇಕರು ಒಂದು ಸಮಸ್ಯೆ ಎದುರಾದರೆ, ಅದರಿಂದ ಹತ್ತು ಸಮಸ್ಯೆಗಳು ಸೃಷ್ಟಿಯಾಗುವಂತೆ ಮಾಡಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಯೋಗ್ಯ ಗುರುವಿನ ಸಂಗ ಇರದೇ ಇರುವುದಾಗಿದೆ. ಮನುಷ್ಯನ ಪ್ರಜ್ಞಾ ಕೊರತೆಯಿಂದ ಪ್ರಕೃತಿ ವಿನಾಶದ ದುಷ್ಪಪರಿಣಾಮವನ್ನು ಮುಂದಿನ ದಿನಗಳಲ್ಲಿ ಸಮಾಜ ವಿವಿಧ ರೀತಿಯಲ್ಲಿ ಎದುರಿಸುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳುತ್ತಿದೆ. ಆ ಸಂದರ್ಭದಲ್ಲಿ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಮುಂದುವರೆದಾಗ ಮಾತ್ರ ಸಮಚಿತ್ತತೆಯಿಂದ ಸಮಸ್ಯೆಗಳನ್ನು ಎದುರಿಸಿ ಇತರರಿಗೆ ಮಾದರಿಯಾಗಿ ನಿಲ್ಲಬಹುದು. ಪ್ರಕೃತಿ ವಿನಾಶ‌ ತಡೆಯುವ ಭರವಸೆಗಳು ಕಡಿಮೆಯಾಗುತ್ತಿರುವ ಸಮಯದಲ್ಲಿ‌ ಯೋಗ್ಯ ಗುರುವಿನ ಶೋಧನೆ ಮಾಡಿ ಅವರ ಮಾರ್ಗದರ್ಶನದಲ್ಲಿ ಜೀವನಕ್ಕೆ ಅರ್ಥ ಬರುವಂತೆ ನಡೆಯುವುದು ಬಹಳ ಒಳಿತು...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶನಿವಾರ, ಮಾರ್ಚ್ 25, 2023

ರಾಷ್ಟ್ರ ನಿರ್ಮಾಣದ ಕೀಲಿ ಕೈ ಪ್ರಕೃತಿ ಪ್ರೇಮಿಗಳ ಸಂಗಮದಲ್ಲಿದೆ.


"ವ್ಯಕ್ತಿ ನಿರ್ಮಾಣವಾದರೆ ಸಮಾಜ ನಿರ್ಮಾಣ ಅಗುವುದು, ಸಮಾಜ ನಿರ್ಮಾಣವಾದರೆ ರಾಷ್ಟ್ರ ನಿರ್ಮಾಣ ಅಗುವುದು" ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದಂತೆ  ರಾಷ್ಟ್ರ ನಿರ್ಮಾಣದ ಕೀಲಿ ಕೈ ವ್ಯಕ್ತಿ ನಿರ್ಮಾಣದಲ್ಲಿದೆ. ಹಾಗಾದರೆ, ವ್ಯಕ್ತಿ ನಿರ್ಮಾಣದ ಕೀಲಿ ಕೈ ಖಂಡಿತ ಅವನ ಸಂಕಲ್ಪ ಶಕ್ತಿಯಲ್ಲಿದೆ.


ಪ್ರಾಪಂಚಿಕರ ಸಂಕಲ್ಪ ಶಕ್ತಿಯನ್ನು ವೃದ್ಧಿಸುವವರೇ ಆಧ್ಯಾತ್ಮಿಕ ಗುರುಗಳು. ಆಧ್ಯಾತ್ಮಿಕ ಗುರುಗಳು ಅವರ  ಸಾಧನೆಗೆ ತಕ್ಕಂತೆ ಅವರ ಕುಟುಂಬದ ವಿಸ್ತಾರ ದೊಡ್ಡದಾಗುತ್ತಾ ಹೋಗುತ್ತದೆ. ಅರಿವಿನ ವಿಸ್ತಾರ ದೊಡ್ಡದಾಂತೆ ಕೆಲವು ಆಧ್ಯಾತ್ಮಿಕ ಸಾಧಕರಿಗೆ ವಿಶ್ವವೇ ಅವರ ಕುಟುಂಬವಾಗುವುದು. ಆಗ ಅವರು ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುತ್ತಾ ತಮ್ಮ ಜೀವಿತಾವಧಿಯನ್ನು ಕಳೆಯುವರು. ಇಂತಹ ಆಧ್ಯಾತ್ಮಿಕ ನಾಯಕರು ಪ್ರಾಪಂಚಿಕರಿಗೆ ಪ್ರಕೃತಿಗೆ ಪೂರಕವಾಗಿ ಬದುಕುವ ಮಾರ್ಗವನ್ನು ತಿಳಿಸುವರು. ಕೆಲವೊಮ್ಮೆ ಪ್ರಾಪಂಚಿಕರ ಪ್ರಜ್ಞೆಯ ಕೊರತೆಯಿಂದ ಪ್ರಕೃತಿ ವಿನಾಶದ ಅಂಚಿಗೆ ಬಂದು ನಿಂತಾಗ, ಎಲ್ಲ ಆಧ್ಯಾತ್ಮಿಕ ನಾಯಕರು ಒಂದಾಗಿ ಪ್ರಾಪಂಚಿಕರಿಗೆ ಸೂಕ್ತ ಮಾರ್ಗದರ್ಶನ‌ ನೀಡಿ ಪ್ರಕೃತಿಯನ್ನು ಉಳಿಸಿ ಮುಂದಿನ ಪೀಳಿಗೆ ಬದುಕಲು ಸೂಕ್ತ ವಾತಾವರಣ ನಿರ್ಮಿಸುವರು. 


ಆಧ್ಯಾತ್ಮಿಕ ನಾಯಕರ ಪ್ರಕೃತಿ ಉಳಿಸುವ ಸತ್ಯ ಸಂಕಲ್ಪಕ್ಕೆ ಕಾಲ‌ ಕೂಡಿ ಬಂದಾಗ ಅದು ಕೋಟ್ಯಾಂತರ ಜನರ ಸಂಕಲ್ಪವಾಗಿ ಮಾರ್ಪಡುವುದು. ಈ ನಿಟ್ಟಿನಲ್ಲಿ ಹಿಂದೆ ಮಾನವನ ಪ್ರಜ್ಞೆಯ ಕೊರತೆಯಿಂದ ಪ್ರಕೃತಿಯು ವಿನಾಶದ ಅಂಚಿಗೆ ಬಂದು ನಿಂತಾಗ ಭಾರತ ದೇಶದ ಆಧ್ಯಾತ್ಮಿಕ ನಾಯಕರು ಒಂದಾಗಿ ನಮ್ಮ ದೇಶವನ್ನು ಕಾಪಾಡಿ,‌ ಅದು ಇತರ ದೇಶಗಳಿಗೆ ಮಾದರಿಯಾಗಿ‌ ನಿಲ್ಲುವಂತೆ ಮಾಡಿದ್ದಾರೆ. ಆ ಸಂದರ್ಭವೇ ಭಾರತ ದೇಶ ಇತರ ದೇಶಗಳಿಗೆ ವಿಶ್ವ ಗುರುವಾಗಿ ಮಾರ್ಗದರ್ಶನ ನೀಡಿದ ಸಂದರ್ಭವಾಗಿದೆ. 


ಇಂದು ಪ್ರಕೃತಿಯ ವಿನಾಶದಿಂದ ವಿಶ್ವವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಭಾರತ ದೇಶದ ಆಧ್ಯಾತ್ಮಿಕ‌ ನಾಯಕರು ಒಂದು ಗೂಡಿ ಪ್ರಾಪಂಚಿಕರಿಗೆ ಮಾರ್ಗದರ್ಶನ ನೀಡುವ ಕಾಲ ಸನ್ನಿಹಿತವಾಗಿದೆ. ಈ ಕಾರ್ಯ ಕೈಗೂಡುವ ಮೂಲಕ ಭಾರತ ದೇಶ ಮತ್ತೊಮ್ಮೆ ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸುವ ಕಾಲ ಹತ್ತಿರವಾಗುತ್ತಿದೆ. ಇದು ಜ್ಞಾನದ ಬಲದಿಂದ ಅಗುವ ಕಾರ್ಯವೇ ಹೊರತು ಅಜ್ಞಾನದಿಂದ ಕೂಡಿದ ದೂಷಣೆ ಅಥವಾ ಯುದ್ಧಗಳಿಂದಲ್ಲ. 


ಜ್ಞಾನದ ಬಲದಿಂದ ಭಾರತವು ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸಬೇಕಾದರೆ, ಭಾರತದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಕೂಡ ಅಷ್ಟೇ ಇದೆ. "ಪ್ರಕೃತಿ ಉಳಿದರೆ ಮಾತ್ರ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿದೆ" ಎಂಬ ಮಾತಿನ ಅರಿವು ಎಲ್ಲರಲ್ಲಿ ಉಂಟಾದಾಗ ಮಾತ್ರ ನಾವೆಲ್ಲರೂ ಜಾತಿ ಮತ ಭೇದಗಳನ್ನು ಮರೆತು ಒಂದು ಗೂಡಲು ಸಾಧ್ಯ.


ಪ್ರಕೃತಿಯ ಕುರಿತು ಅರಿವನ್ನು ಮೂಡಿಸಲು ಇರುವ ಸೂಕ್ತ ಸಮಯವೇ ಚುನಾವಣೆಯ ಸಮಯ, ಏಕೆಂದರೆ ಚುನಾವಣೆಗಳು ಯಾವ ಆಧಾರದ ಮೇಲೆ ಜರಗುವವೋ ಅದೇ ಆಧಾರದ ಮೇಲೆ ಮುಂದಿನ ಐದು ವರ್ಷ ಆಳುವ ಸರ್ಕಾರ ಆಡಳಿತ‌ ನೀಡುವುದು. ಹಾಗಾಗಿ, ಪ್ರಕೃತಿ ಪ್ರೇಮಿಗಳು ವಿಚಾರ ಹಂಚಿಕೊಳ್ಳಲು  "ಚುನಾವಣೆ ಸಂದರ್ಭದಲ್ಲಿ ಪ್ರಕೃತಿ ಪ್ರೇಮಿಗಳ ಸಂಗಮ" ಎಂಬ ಶೀರ್ಷಿಕೆಯಡಿ ಸೂಕ್ತ ವೇದಿಕೆ ಒದಗಿಸುವ ಅವಶ್ಯಕತೆಯಿದೆ. ಈಗಾಗಲೇ‌‌ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು  "ನನ್ನನ್ನು ಪ್ರಕೃತಿಯಲ್ಲಿ ಕಾಣಿ" ಎಂಬ ಮಾತಿನ ಮೂಲಕ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ ಹಾಗೂ ಸದ್ಗುರು ಅವರು ಜಗತ್ತಿನಾದ್ಯಂತ "ಮಣ್ಣು ಉಳಿಸಿ" ಅಭಿಯಾನ ಪ್ರಾರಂಭಿಸುವ ಮೂಲಕ "ಪರಿಸರ ವಿಷಯವೇ ಚುನಾವಣೆಯ ಮುಖ್ಯ ಚರ್ಚಾ ವಿಷಯ ಆಗಬೇಕು" ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಯಾರು ಈ ಆಧ್ಯಾತ್ಮಿಕ‌ ನಾಯಕರ‌ ಮಾತುಗಳಿಂದ ಪ್ರೇರೇಪಿತ‌ರಾಗಿರುವರೋ ಅವರು ಇಂದು ಒಂದುಗೂಡಿ ಇತರ ಪ್ರಕೃತಿ ಪ್ರೇಮಿಗಳನ್ನು ಒಂದು ಗೂಡಿಸುವ ಕಾರ್ಯ ಪ್ರಾರಂಭಿಸಬೇಕಾಗಿದೆ. 


ಪ್ರಕೃತಿಯನ್ನು ಉಳಿಸುವ  ಸಂಕಲ್ಪ ಮಾತ್ರ ನಮ್ಮೆಲ್ಲರನ್ನು ಒಂದು ಗೂಡಿಸಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸಬಲ್ಲದು...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಎಲ್ಲ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು.  


 ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ. 


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶುಕ್ರವಾರ, ಮಾರ್ಚ್ 24, 2023

ನಡೆದಾಡುವ ದೇವರು ಜನರಲ್ಲಿ ಪರಿವರ್ತನೆ ತರಲು ಪ್ರಯತ್ನಿಸಲಿಲ್ಲವೇ?


ವಿಜಯಪುರದಲ್ಲಿ ದಿನಾಂಕ: 23-03-23 ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾನಿಧ್ಯ ವಹಿಸಿದ್ದ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು ಮಾತನಾಡುತ್ತಾ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಕೊನೆಯ ದಿನಗಳಲ್ಲಿಯಾದರೂ ಜನರನ್ನು ಪರಿವರ್ತಿಸುವ ಮಾತುಗಳನ್ನು ಹೇಳಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕೇವಲ ಶಾಂತಿ, ಸಮಾಧಾನ ಮತ್ತು ಸಾಂತ್ವನದ ಮಾತುಗಳಿಗೆ ಅಪ್ಪಾಜಿಯವರು ಸೀಮಿತವಾದರು ಎಂಬ ಬೇಸರ ವ್ಯಕ್ತಪಡಿಸಿರುವುದರ ಹಿಂದಿನ ಉದ್ದೇಶ ಅವರ ಪ್ರವಚನಗಳನ್ನು ಕೇಳಿಯೂ ಕೇಳದಂತೆ ನಿದ್ರಿಸುತ್ತಿರುವ ಜನಗಳನ್ನು ಎಚ್ಚರಿಸುವುದಾಗಿತ್ತು ಎಂಬುದು ನನ್ನ ಅಭಿಪ್ರಾಯ. 


ನಡೆದಾಡುವ ದೇವರು ದೇಹ ತ್ಯಜಿಸಿದರೂ ಅವರ ಸತ್ಯ ಸಂಕಲ್ಪ ಇಡೇರುವವರೆಗೆ ಆತ್ಮ ವಿಶ್ರಮಿಸುವುದಿಲ್ಲ. ಇದೇ ಕಾರಣಕ್ಕಾಗಿ ನಿಡುಮಾಮಿಡಿ ಶ್ರೀಗಳ ಮೂಲಕ ಅಪ್ಪಾಜಿಯವರೇ ಮಾತನಾಡಿದ್ದಾರೆ ಮತ್ತು ಅವರೇ ನನ್ನಿಂದ ಈ ಬರಹವನ್ನು ಬರೆಸುತ್ತಿದ್ದಾರೆ ಎಂಬ ದೃಢವಾದ ನಂಬಿಕೆ ನನ್ನದಾಗಿದೆ. 


ನನ್ನದು ಸಾವಧಾನದ ಬದುಕು ಎಂದು ಅಪ್ಪಾಜಿಯವರು ಹೇಳಿದ ಮಾತಿನ ಉದ್ದೇಶ ಸಾಕಷ್ಟು ಕೊಳೆಯಾದ ಪಾತ್ರೆಯನ್ನು ಬೇಗನೆ ತೊಳೆಯುವುದು ಕಷ್ಟ, ಅದೇ ರೀತಿ ಸಾಕಷ್ಟು ಕೊಳೆಯಾಗಿರುವ ಸಮಾಜವನ್ನು ಶುದ್ಧೀಕರಣಗೊಳಿಸಿ ಸರಿದಾರಿಗೆ ತರುವುದೂ ಕೂಡ ಅಷ್ಠೇ ಕಷ್ಟ ಎಂಬುದಾಗಿದೆ. ಅವರು ಇರುವಾಗ ಕೇವಲ ಕೆಲವು ಹೊಗಳಿಕೆಯ ಮಾತನ್ನೂ ಕೂಡ ಸಹಿಸಿದ ಸಮಾಜ ನೇರ ಪರಿವರ್ತನಾ ನುಡಿಗಳನ್ನು ಹೇಗೆ ಸ್ವೀಕರಿಸಿತ್ತಿತ್ತು ಎಂಬುದು ಊಹಿಸಲೂ ಕೂಡ ಸಾಧ್ಯವಿಲ್ಲ.


ಇಂದಿನ ಸಮಾಜವು ಸ್ವತಃ ತನ್ನ ಮುಂದಿನ ಪೀಳಿಗೆ ಬದುಕುಳಿಯಲಾರದಷ್ಟು ಪ್ರಕೃತಿಯನ್ನು ನಾಶಮಾಡುತ್ತಿದೆ. ಸಮಾಜವು ದೂರದೃಷ್ಟಿಕೋನ ರಹಿತ ಹೆಜ್ಜೆ ಇಡುತ್ತಿರುವುದಕ್ಕೆ ಮುಖ್ಯ ಕಾರಣವೇ ಎಲ್ಲರು ಪಡೆದಿರುವ ಬ್ರಿಟಿಷ್ ಶಿಕ್ಷಣ. ಕೇವಲ ಸ್ಪರ್ಧೆ ಆಧಾರಿತ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿ ಪೋಷಣೆ ಮಾಡುತ್ತಾ ಬಂದಿರುವುದರಿಂದ ಎಲ್ಲರಲ್ಲಿ ಇನ್ನೊಬ್ಬರನ್ನು ದ್ವೇಷ ಮತ್ತು ಅಸೂಯೆ ಭಾವನೆಯಿಂದ ಗೆಲ್ಲುವುದೇ ಮೊದಲ ಆಧ್ಯತೆಯಾಗಿದೆ. ಅದರಲ್ಲಿಯೂ ಕೂಡ ಇಂದಿನ ರಾಜಕೀಯ ನಾಯಕರಿಗೆ ಬ್ರಿಟಷ್ ಶಿಕ್ಷಣ ಹೆಚ್ಚಿಗೆ ದೊರೆತಂತೆ ಕಾಣುತ್ತದೆ. ಇದೇ ಕಾರಣಕ್ಕೆ ತಾವು ಕೇವಲ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಭರದಲ್ಲಿ ತಾವು ರೂಪಿಸುತ್ತಿರುವ ಜನಪ್ರೀಯ ಯೋಜನೆಗಳಿಂದ ಪ್ರಕೃತಿಯ ಮೇಲೆ ಮತ್ತು ಮುಂದಿನ ಪೀಳಿಗೆಯ ಮೇಲೆ ಆಗುವ ದುಷ್ಪರಿಣಾಮದ ಅರಿವು ಅವರಿಗಿಲ್ಲ.


ಬ್ರಿಟಿಷರು ಪ್ರಕೃತಿಗೆ ಪೂರಕವಾದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿ ಸ್ಪರ್ಧೆ ಆಧಾರಿತ ಶಿಕ್ಷಣ ವ್ಯವಸ್ಥೆ ಸ್ಥಾಪಿಸಲು 200 ವರ್ಷ ಸಮಯ ತೆಗೆದುಕೊಂಡರು. ನಾವು ಬ್ರಿಟಿಷರಿಂದ ಸ್ವತಂತ್ರಗೊಂಡರೂ ಅವರ ಶಿಕ್ಷಣ ವ್ಯವಸ್ಥೇಯಿಂದ ಸ್ವತಂತ್ರಗೊಳ್ಳಲಿಲ್ಲ.‌ ಇದೇ ಕಾರಣಕ್ಕೆ ನಡೆದಾಡುವ ದೇವರು ಬಂದರೂ ಸಹ ನಮ್ಮ ಮನಸ್ಸು ಬೇಗನೆ ಪರಿವರ್ತನೆ ಗೊಳ್ಳದಿರುವ ಸ್ಥಿತಿಗೆ ಬಂದು ತಲುಪಿದ್ದೇವೆ.


ನಡೆದಾಡುವ ದೇವರಿಗೆ ಗೊತ್ತಿತ್ತು, ಅವರು ದೇಹದಲ್ಲಿ ಇದ್ದಾಗ ಪರಿವರ್ತನಾ ಮಾತುಗಳನ್ನು ನೇರವಾಗಿ ಹೇಳದರೆ ಅವರು ಒಬ್ಬರೇ ಹೇಳಬೇಕಾಗಿತ್ತು ಎಂದು. ಇವತ್ತು ನೇರವಾಗಿ ಹೇಳುವವರನ್ನು ಅನೇಕರು ಅಸ್ಪೃಶ್ಯರಂತೆ ಕಾಣುವಂತೆ ಅಪ್ಪಾಜಿಯವರನ್ನೂ ಅದೇ ರೀತಿ ಕಾಣುತ್ತಿದ್ದರೋ ಎನೋ ತಿಳಿಯದು. ಅದೇ ಕಾರಣಕ್ಕೆ ದೇಹದಲ್ಲಿ ಇರುವಾಗ ಹೇಗೆ ಹೇಳಬೇಕೋ ಹಾಗೆ ಹೇಳಿದರು. ಈಗ ಅತ್ಮಿಕವಾಗಿ ಕೆಲಸ ಮಾಡುವಾಗ ಹೇಗೆ ಹೇಳಬೇಕೋ ಅದನ್ನು ಇನ್ನು ಮುಂದೆ ಲಕ್ಷಾಂತರ ಜನರ ಮೂಲಕ ಖಂಡಿತ ಹೇಳುತ್ತಾರೆ. ಅದರಲ್ಲಿ ಒಬ್ಬನಾಗಿ ನನ್ನನ್ನು ಅಯ್ಕೆ ಮಾಡಿಕೊಂಡಿರುವುದಕ್ಕೆ ನಾನೇ ಭಾಗ್ಯಶಾಲಿ. 


ಒಂದು ಮರದ ಬೀಜವನ್ನು ನೆಟ್ಟು ಅದರ ಫಲ ಪಡೆಯಬೇಕಾದರೆ ಸುಮಾರು ವರ್ಷಗಳ ಕಾಲ ಪೋಷಣೆ ಮಾಡುತ್ತಾ ಕಾಯಬೇಕಾಗುತ್ತದೆ. ಅದೇ ರೀತಿ ಅಪ್ಪಾಜಿಯವರು ನೆಟ್ಡು ಪೋಷಣೆ ಮಾಡಿದ ಆಧ್ಯಾತ್ಮಿಕ ವೃಕ್ಷವು ಫಲ ಕೊಡುವ ಕಾಲ ಪಕ್ವವಾಗಿದೆ. ಈ ವೃಕ್ಷವೇ ಉತ್ತರ ಕರ್ನಾಟಕದಲ್ಲಿ ಆಧ್ಯಾತ್ಮಿಕ ಕ್ರಾಂತಿಗೆ ಮುನ್ನುಡಿ ಬರೆಯುವುದು. ಅವರು ಇರುವಾಗಲೇ ಆ ಕ್ರಾಂತಿಯ ಬೀಜವನ್ನು ನೆಟ್ಟು ಹೋಗಿರುವರು. ಆ ಬೀಜವು ಮರವಾಗಿ ಫಲ ಕೊಡುವ ಕಾಲ ಸನ್ನಿಹಿತವಾಗಿದೆ. ಓ ಕ್ರಾಂತಿಯ ಹರಿಕಾರರೇ ಒಮ್ಮೆ ಅಪ್ಪಾಜಿಯವರನ್ನು ನೆನೆದು ನಾವಾರೆಂದು ಪ್ರಶ್ನೆ ಮಾಡಿಕೊಳ್ಳಿ. ಆಗ ಕೆಚ್ಚೆದೆಯಿಂದ ಮಾಡಬೇಕಾದ ಕೆಲಸದ ಅರಿವು ಉಂಟಾಗುವುದು. ಈ ದೇಹ ಶಾಶ್ವತವಲ್ಲ ಎಂಬುದನ್ನು ಕೊನೆಗೆ ತಮ್ಮ ದೇಹವನ್ನೂ ಕೂಡ ಚಿತೆಗೆ ಅರ್ಪಿಸಿ ಸಂದೇಶ ನೀಡಿರುವುದನ್ನು ನೆನೆಪಿಸಿಕೊಳ್ಳಿ. ಬ್ರಿಟಿಷ್ ಶಿಕ್ಷಣದ ಪರಿಣಾಮದಿಂದ ಇಂದು ಅಧಿಕಾರದ ವ್ಯಾಮೋಹದಿಂದ ಅತೀ ಹೆಚ್ಚು ಹಣ ಚುನಾವಣೆ ಸಂದರ್ಭದಲ್ಲಿ ದುರ್ಬಳಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಎಷ್ಟು ಹಣ ದುರ್ಬಳಕೆ ಆಗುವುದೋ ಅಷ್ಟು ಪ್ರಕೃತಿ ನಾಶವಾಗುವುದು. ಹಾಗಾದರೆ, ಈ ಸಂದರ್ಭದಲ್ಲಿ ಹಣದ ದುರ್ಬಳಕೆಯನ್ನು ಹೇಗೆ ತಡೆಯುವುದು ಯೋಚಿಸಿ. ನಾವು ಈ ಕಾರ್ಯದಲ್ಲಿ ಎಷ್ಟು ಕಾರ್ಯಪ್ರವೃತ್ತರಾಗುವೆವೋ ಅಷ್ಟು ಪರಿವರ್ತನೆ ಅಗುತ್ತಿದ್ದೇವೆ ಎಂದು ಅರ್ಥ. ಇದರ ಒಳ್ಳೆಯ ಪರಿಣಾಮ ಖಂಡಿತ ಮೊದಲು ನಮ್ಮ ಮಕ್ಕಳ ಮೇಲೆಯೇ ಉಂಟಾಗುವುದು...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಎಲ್ಲ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ?


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಮಾರ್ಚ್ 23, 2023

ಸಾಹಿತ್ಯ ಸಮ್ಮೇಳನಗಳನ್ನು ಏಕೆ ನಡೆಸಬೇಕು?


ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕೆಲವು ಜನರು ತಮ್ಮ ಶೋಧನಾ ಸಾಮರ್ಥ್ಯದಿಂದ ಕಂಡುಕೊಂಡ ಸತ್ಯವನ್ನು ಹಲವು ಜನರಿಗೆ ಪರಿಚಯವಾಗುವಂತೆ ಮಾಡಲು ವೇದಿಕೆ ಒದಗಿಸುವುದಕ್ಕಾಗಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬೇಕು.


ಹಿಂದೆ ರಾಜರ ಆಡಳಿತ ಇರುವ ಸಮಯದಲ್ಲಿ ಅಂದಿನ ರಾಜರು ಅನೇಕ ಸಾಹಿತಿಗಳ ಪೋಷಣೆಯ ಜವಾಬ್ದಾರಿ ಹೊತ್ತು ಅವರನ್ನು ಮರ್ಯಾದೆಯಿಂದ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ,  ರಾಜರ ಮತ್ತು ಪ್ರಜೆಗಳ ಮಧ್ಯೆ ಉತ್ತಮ ಭಾಂದವ್ಯ ಬೆಸೆಯುವುದಕ್ಕೆ ಸಾಹಿತಿಗಳೇ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದರು. ಸಮಯ ಬಂದಾಗ ರಾಜರ ಮತ್ತು ಜನಗಳ ತಪ್ಪು ನಡೆಗಳನ್ನು ತಿದ್ದುವ ಸಾಮರ್ಥ್ಯ ಯಾವ ರಾಜಾಸ್ಥಾನದ ಸಾಹಿತಿಗಳು ಹೊಂದಿದ್ದರೋ ಆ ರಾಜಾಡಳಿತ ಬಹು ವರ್ಷ ಬದುಕಿದ ಉದಾಹರಣೆಗಳಿವೆ. ಯಾವಾಗ ಸಾಹಿತಿಗಳು ಸ್ವಾರ್ಥಿಗಳಾಗಿ ಕೇವಲ ರಾಜರನ್ನು ಹೊಗಳುವ ಹೊಗಳು ಬಟ್ಟರಾದರೋ ಆಗ ಆ ರಾಜಾಡಳಿತಗಳು ಬೇಗನೆ ಪತನಗೊಂಡಿರುವ ಉದಾಹರಣೆಗಳೂ ಕೂಡ ಇವೆ.


ಇಂದಿನ ರಾಜಕೀಯ ನಾಯಕರ ಮತ್ತು  ಪ್ರಜೆಗಳ ನಡುವಿನ ಸಂಬಂಧವು ಮುಂದೆ ಯಾವ ರೀತಿಯ ಭವಿಷ್ಯ ಸೃಷ್ಟಿಗೆ ಕಾರಣವಾಗುವುದು ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಹಾಗಾದರೆ, ಇಂದಿನ ಸಾಹಿತ್ಯ ಸಮ್ಮೇಳನಗಳ ಮುಖ್ಯ ಉದ್ದೇಶ ನೆರವೇರುತ್ತಿದೆಯೇ ಎಂಬುದು ಮೂಲ ಪ್ರಶ್ನೆ.


ಇಂದಿನ ರಾಜಕೀಯ ನಾಯಕರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಏಕೈಕ ಉದ್ದೇಶದಿಂದ ದೂರದೃಷ್ಟಿಕೋನ ರಹಿತ ಯೋಜನೆಗಳ ಘೋಷಣೆ ಮಾಡುತ್ತಿರುವುದು ಹಾಗೂ ಒಂದು ಸಾವಿರ ಕೋಟಿಗಿಂತ ಅಧಿಕ ಹಣವನ್ನು ವಾಮಮಾರ್ಗದಲ್ಲಿ ಬಳಸಿ ಜನರ ಮತ ಕದಿಯಲು ಹೊಂಚು ಹಾಕಿ ಕುಳಿತಿರುವುದನ್ನು ನೋಡಿದರೆ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವಿಷಯದ ಕುರಿತು ಚರ್ಚೆ ಮಾಡಿವುದಕ್ಕೆ   ಸೂಕ್ತ ವೇದಿಕೆ ಯಾವುದು ಎಂಬುದನ್ನು ಎಲ್ಲ ಸಾಹಿತಿಗಳು ಯೋಚಿಸಬೇಕಾಗಿದೆ. ಹಣ, ಷರಾಯಿ ಮತ್ತು ಜಾತಿಯ ಪ್ರಾಬಲ್ಯದಿಂದ ಕೂಡಿದ ಚುನಾವಣೆಯು ನಮ್ಮ ಮಕ್ಕಳ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಸಾಹಿತಿಗಳು ಸಾಹಿತ್ಯ ಸಮ್ಮೇಳನದಲ್ಲಿ ತಿಳಿಸಬಹುದೆ? ಇಂದಿನ ರಾಜಕೀಯ ನಾಯಕರ ನಡೆ ನೇರವಾಗಿ ಪ್ರಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರಿ, ಮುಂದೆ ನಮ್ಮ ಮಕ್ಕಳು ಅದರ ದುಷ್ಪರಿಣಾಮ ಎದುರಿಸುವಂತೆ ಆಗುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 


ಇದೆಲ್ಲವನ್ನು ಅರಿತಿದ್ದ ಪೂಜ್ಯ ಸಿದ್ದೇಶ್ವರ ಅಪ್ಪಾಜಿಯವರು ಪ್ರಕೃತಿ ಉಳಿಸುವ ಕಾರ್ಯ ಮೊದಲಾಗಲಿ ಎಂಬ ಸ್ಪಷ್ಟ ಸಂದೇಶವನ್ನು "ನನ್ನನ್ನು ಪ್ರಕೃತಿಯಲ್ಲಿ ಕಾಣಿ" ಎಂಬ ಮಾತಿನ ಮೂಲಕ ತಿಳಿಸಿದ್ದಾರೆ.

ವಿಶ್ವ ಸಂಸ್ಥೆ, ವಿಜ್ಞಾನಿಗಳು ಮತ್ತು ಆಧ್ಯಾತ್ಮಿಕ ನಾಯಕರು ಪ್ರಕೃತಿ ವಿನಾಶದ ಕುರಿತು ಹೇಳಿದ ಮಾತುಗಳು ಇಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚೆ ಆದರೆ ಮಾತ್ರ ಸಮ್ಮೇಳನಗಳ ಉದ್ದೇಶ ಇಡೇರಿದಂತೆ ಆಗುತ್ತದೆ...ಯೋಚಿಸಿ!

...........................................

ಚುನಾವಣೆ ಸಂದರ್ಭದಲ್ಲಿ ಎಲ್ಲ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊರಬಹುದೇ? 


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಬುಧವಾರ, ಮಾರ್ಚ್ 22, 2023

ಇಂದಿನ ರಾಜಕೀಯ ವ್ಯವಸ್ಥೆಯಿಂದ ಯಾರಿಗೆ ಸುಖವಿದೆ?

 

ಯಾರಿಗೆ ಹಲವರನ್ನು ಮುನ್ನೆಡಿಸಿ ಉತ್ತಮ ಭವಿಷ್ಯ ರೂಪಿಸುವ ಸಾಮರ್ಥ್ಯವಿದೆಯೋ ಅಂತಹವರನ್ನು ಜನರೇ ಆಯ್ಕೆ ಮಾಡಿ ಅವರ ಮಾರ್ಗದರ್ಶನದಲ್ಲಿ ನಡೆಯವ ಪ್ರಕ್ರಿಯೆಗೆ ರಾಜಕೀಯ ಎಂದು ಹೆಸರು.


ರಾಜಕೀಯ ವ್ಯವಸ್ಥೆ ಎಷ್ಟು ಕಲುಷಿತಗೊಳ್ಳುವುದೋ ಅಷ್ಟು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗುತ್ತಾ ಸಾಗುವುದು. ಇದನ್ನು ನಾವು ಈಗಾಗಲೇ ಸಣ್ಣ ಮಕ್ಕಳು ಕೂಡ ಹಲವು ಚಟಗಳಿಗೆ ಬಲಿಯಾಗುತ್ತಿರುವ ರೂಪದಲ್ಲಿ ಕಾಣುತ್ತಿದ್ದೇವೆ. ಈಗಿನ ವ್ಯವಸ್ಥೆ ಹೀಗೆಯೇ ಮುಂದುವರೆದರೆ ಪ್ರಕೃತಿಯು ತೀವ್ರ ಹಾನಿಗೊಳಗಾಗಿ ಈ ಕೆಳಕಂಡ ನಾಲ್ಕು ಮನಸ್ಥಿತಿಯ ಜನರು ತೀವ್ರವಾದ ನೋವು ಅನುಭವಿಸಬೇಕಾಗುವುದು.


1. ಆಮಿಷಗಳಿಗೆ ಒಳಗಾಗಿ ಮತ ಮಾರಿಕೊಳ್ಳುವ ಪ್ರಜೆಗಳು:- ಇವರಿಗೆ ಚುನಾವಣೆಯಲ್ಲಿ ಆಯ್ಕೆ ಆಗಿ ಬಂದ ನಾಯಕನ ತಪ್ಪುಗಳನ್ನು ಪ್ರಶ್ನಿಸುವ ಯಾವ ಹಕ್ಕೂ ಕೂಡ ಉಳಿಯುವುದಿಲ್ಲ. ಆಗ ಎಲ್ಲ ದುರಾವಸ್ಥೆಯನ್ನೂ ಇವರು ಸಹಿಸಿಕೊಳ್ಳಬೇಕಾಗುವುದು. ಇದರಿಂದ ಇವರ‌ ಮಕ್ಕಳಲ್ಲಿ ಗುಲಾಮಗಿರಿಯ ಮತ್ತು ಹೇಡಿತನದ ಮನೋಭಾವನೆ ಜನ್ಮ ತಾಳುವುದು.


2. ಆಮಿಷಗಳಿಂದ ಗೆದ್ದು ಬಂದ ನಾಯಕರು:- ಇವರು ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಇರುವಾಗ ಹಲವು ರೈಡ್ ಗಳಿಂದ ತಪ್ಪಿಸಿಕೊಳ್ಳುವ ಭಯ ಇವರನ್ನು ಕಾಡುವುದು. ಪ್ರಕೃತಿ ವಿಕೋಪಗಳು ತೀವ್ರ ಸ್ವರೂಪ ತಾಳಿದರೆ, ಜನರು ಇವರನ್ನು ಕಂಡಲ್ಲಿ ತಡೆದು ಪ್ರಶ್ನಿಸುವರು, ಕೆಲವೊಮ್ಮೆ ಜನರ ದಾಳಿಗೊಳಗಾಗುವ ಸಾಧ್ಯತೆಯೂ ಕೂಡ ಇದೆ.


3. ಯಾವುದರಲ್ಲಿಯೂ ಪಾತ್ರ ವಹಿಸದೇ ಕೇವಲ ದೂಷಣೆ ಮಾಡುವ ಜನರು:- ಇವರು ಇನ್ನೊಬ್ಬರನ್ನು ದೂಷಿಸುತ್ತಾ ತಮ್ಮ ಚೈತನ್ಯ ಶಕ್ತಿಯನ್ನೇ ಕಳೆದುಕೊಳ್ಳುವರು. ಇವರು ಕೊನೆಗೆ ಅಸಹಾಯಕ ಸ್ಥಿತಿ ತಲುಪುವರು. ಇದು ಅವರ ಮಕ್ಕಳನ್ನು ಅಸಹಾಯಕರನ್ನಾಗಿ ಮಾಡುವುದು.


4. ತಮ್ಮ ಕೈಲಾದಷ್ಟು ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸುವ ಜನರು- ಈ ಜನರು ಒಗ್ಗಟ್ಟಾಗಿ ಎಲ್ಲರಿಗೂ ಅರಿವು ಮೂಡಿಸುವ ಪ್ರಯತ್ನ ಮಾಡದೇ ಇದ್ದರೆ ಮಿಂಚಿ ಹೋದ ಕಾಲದ ಕುರಿತು  ಶಪಿಸಬೇಕಾಗುವುದು.


ವಿಶ್ವ ಸಂಸ್ಥೆ, ವಿಜ್ಞಾನಿಗಳು ಹಾಗೂ ಕೆಲವು ಆಧ್ಯಾತ್ಮಿಕ ನಾಯಕರು ವಿವಿಧ ರೀತಿಯಲ್ಲಿ ಎಚ್ಚರಿಕೆ ನೀಡಿದ ಪ್ರಕಾರ  ಮೇಲಿನ‌‌ ಪರಿಸ್ಥಿತಿಯನ್ನು ಮುಂದಿನ ಕೆಲವು ವರ್ಷಗಳಲ್ಲಿ ಕಾಣುವ ಸಾಧ್ಯತೆಯಿದೆ. ಇದು ಮುಂದುವರೆದಂತೆ ವಿವಿಧ ಕ್ಷೇತ್ರದ ಜನರ ಮೇಲಾಗುವ ದುಷ್ಪಪರಿಣಾಮದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಲೇಖನ ಓದಿ. 

https://missionsavesoil.blogspot.com/2023/03/blog-post_27.html


ಎಲ್ಲರನ್ನೂ ನೋವಿಗೆ ಈಡು ಮಾಡುವ ಇಂದಿನ ರಾಜಕೀಯ ವ್ಯವಸ್ಥೆಯೊಂದಿಗೆ ಎಲ್ಲರೂ ಮುಂದು ವರೆಯುತ್ತಿರುವುದಕ್ಕೆ ಮುಖ್ಯ ಕಾರಣವೇ ಪ್ರಜ್ಞೆಯ ಕೊರತೆ. ಮುಂದೆ ತಾವು ಎದುರಿಸಬೇಕಾದ ಸಮಸ್ಯೆಯ ಅರಿವು ಇವರಿಗಿಲ್ಲ. ಅದರೆ, ಎಲ್ಲರಿಗೂ ತಿಳಿದಿರುವಂತೆ, ಇಂದು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಿಂತ ದೊಡ್ಡ ಸಮಸ್ಯೆಗೆ ಈಡಾಗುವವರು ಮುಂದೆ ಯಾರೂ ಕೂಡ ಇರುವುದಿಲ್ಲ. ಇಂದು ಹಣ ಬಲದಿಂದ ಚುನಾವಣೆಯಲ್ಲಿ ಆಯ್ಕೆಯಾಗಲು ಬಯಸುವ ವ್ಯಕ್ತಿ ಗೆದ್ದರೂ ಅಥವಾ ಸೋತರೂ ಸಮಸ್ಯೆಗೆ ತುತ್ತಾಗುವನು. ಗೆದ್ದರೆ ಹಲವು ಸಮಸ್ಯೆ ಎದುರಿಸಬೇಕಾಗುವುದು, ಸೋತರೆ ಹಣ ಕಳೆದುಕೊಂಡ ಒಂದೇ ಸಮಸ್ಯೆಯನ್ನು ಎದುರಿಸಬೇಕಾಗುವುದು. ಇದು ಹೇಗೆ ಎಂಬುದನ್ನು ಅವರ ಹಿಂಬಾಲಕರು ಆಳವಾಗಿ ಅರ್ಥಮಾಡಿಕೊಂಡು ತಾವು ತಿಳಿದುಕಡು ತಮ್ಮ ನಾಯಕರಿಗೂ ತಿಳಿಸುವ ಅವಶ್ಯಕತೆಯಿದೆ.


ಇಂದು ನಮಗುಳಿದಿರುವುದು ಒಂದೇ ಪರಿಹಾರ! ಎಲ್ಲರಿಗೂ ವಾಸ್ತವಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು. ವಿಜ್ಞಾನಿಗಳು ಹೇಳಿದ ವಾಸ್ತವಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸುವವರೇ ಮಾಡಬೇಕು. ಅದು ಅವರಿಗೆ ಮತ್ತು ತಮ್ಮ ಹಿಂಬಾಲಕರ ದೃಷ್ಟಿಕೋನದಿಂದ ಬಹಳ ಒಳಿತು.  ಇದರಿಂದ ನಾಯಕನಾಗಲು ಬಯಸುವವನು ಕಡಿಮೆ ಹಣ ಖರ್ಚು ಮಾಡಿ ಆಯ್ಕೆಯಾಗಿ ಮುಂದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು. ಈ ನಿಟ್ಟಿನಲ್ಲಿ ಯಾರಾದರೂ ಪ್ರಯತ್ನ ಮಾಡಿಯೂ ಕೂಡ ಸೋತರೆ ಅವರಿಗೆ ಮುಂದೆ ದೊಡ್ಡ ಬೆಲೆ ಇರುವುದು...ಯೋಚಿಸಿ!


ಯುಗಾದಿ ಹಬ್ಬದ ಮೊದಲ ದಿನವನ್ನು ಈ ಹೊಸ ಯೋಚನೆಯೊಂದಿಗೆ ಪ್ರಾರಂಭಿಸಬಹುದೇ?

...........................................

ಚುನಾವಣೆ ಸಂದರ್ಭದಲ್ಲಿ ಎಲ್ಲ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಓದುಗರು ಹತ್ತು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಜನರಿಗೆ ಅರಿವು ಮೂಡಿಸಿವ ಜವಾಬ್ದಾರಿ ಹೊರಬಹುದೇ?


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಮಂಗಳವಾರ, ಮಾರ್ಚ್ 21, 2023

ನಾವು ಬೆಲ್ಲ ತಿಂದು ನಮ್ಮ ಮಕ್ಕಳಿಗೆ ತಿನ್ನಲು ಕೇವಲ ಬೇವು ಉಳಿಸುತ್ತಿರುವುದು ನ್ಯಾಯವೇ?

 

ಯುಗಾದಿ ಹಬ್ಬವು ಬೇವು ಬೆಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ ಹೊಸ ವರ್ಷ ಸ್ವಾಗತಿಸುವ ಸಂದೇಶವನ್ನು ನೀಡುತ್ತದೆ. ಸಿಹಿ-ಕಹಿ ಯಾವುದು ಹೆಚ್ಚಾದರೂ ಸಹ ತೊಂದರೆಯುಂಟು ಮಾಡುವುದು.


ಇಂದು ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಬಳಸಿ ನಮ್ಮ ಮಕ್ಕಳಿಗೆ ಏನೂ ಉಳಿಯದಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದೇವೆ. ಪ್ರಕೃತಿಯನ್ನು ಮರಳಿ ಸರಿಪಡಿಸಲಾಗದಷ್ಟು ಹಾನಿಯುಂಟು ಮಾಡುತ್ತಿದ್ದೇವೆ ಎಂದು ವಿಶ್ವ ಸಂಸ್ಥೆ ಹೇಳುತ್ತಿದೆ. ಮುಂದಿನ 5 ವರ್ಷಗಳಲ್ಲಿ ಭೂಮಿಯ ಮೇಲಿನ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವುದು ಎಂದು ವಿಶ್ವ ಸಂಸ್ಥೆ ಸ್ಪಷ್ಟಪಡಿಸಿದೆ. ಇದೇ ವ್ಯವಸ್ಥೆ ಮುಂದಿನ 10  ವರ್ಷ ಮುಂದು ವರೆದದ್ದೇ ಆದರೆ ಎಲ್ಲ ಕ್ಷೇತ್ರದ ಜನರ ಮೇಲೆ  ಆಗುವ ದುಷ್ಪರಿಣಾಮದ ಅವಲೋಕನೆ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಲ್ಲರಿಗೂ ಇದೆ.


1. ರೈತರು ಮತ್ತು ಇತರ  ಉದ್ಯೋಗಿಗಳು ಸಾಲದ ಸುಳಿಯಲ್ಲಿ ಸಿಲುಕುವರು. ಇದರಿಂದ ಮಾನಸಿಕ ರೋಗಗಳಿಗೆ ತುತ್ತಾಗುವ ಜನಗಳ ಸಂಖ್ಯೆ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯೂ ಹೆಚ್ಚಾಗುವುದು. ಈಗಾಗಲೇ ಭಾರತ ದೇಶದಲ್ಲಿ ಪ್ರತಿ ದಿನ 15 ಜನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

2. ಸರ್ಕಾರಿ ನೌಕರರು ಈಗ ಪಡೆಯುತ್ತಿರುವ ಅರ್ಧದಷ್ಟು ಸಂಬಳವನ್ನು ಕೂಡ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುವುದು. ಏಕೆಂದರೆ ಹೆಚ್ಚು ಹಣವನ್ನು ಪ್ರಕೃತಿ ವಿಕೋಪಕ್ಕೆ ತುತ್ತಾದ ಜನರ ಯೋಗಕ್ಷೇಮಕ್ಕೆ ವಿನಿಯೋಗ ಮಾಡಬೇಕಾಗುವುದು. ಆಗ ಸರ್ಕಾರಿ ನೌಕರರು ಈಗಿನಂತೆ ತಮ್ಮ ಕುಟುಂಬ ನಿಭಾಯಿಸುವುದು ಬಹಳ ಕಷ್ಟವಾಗುವುದು. ಸ್ವತಃ ಅವರ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದು.

3. ರಾಜಕೀಯ ನಾಯಕರನ್ನು ಯಾರೂ ಕೂಡ ನಂಬದಂತಹ ವಾತಾವರಣ ಸೃಷ್ಟಿಯಾಗಿ ಅರಾಜಕತೆ ತಾಂಡವ ಆಡುವುದು. ಈಗಿನ ವ್ಯವಸ್ಥೆಯಿಂದ ದುಡ್ಡು ಸಂಪಾದಿಸಿದ ಅನೇಕ ರಾಜಕೀಯ ನಾಯಕರ ಮನೆಗೆ ಜನ ಮುತ್ತಿಗೆ ಹಾಕಿ ಹಣ ದೋಚುವ ಸ್ಥಿತಿ ನಿರ್ಮಾಣವಾಗುವುದು. ಇದರಿಂದ ಈಗಿನ ವ್ಯವಸ್ಥೆಯೊಂದಿಗೆ ಮುಂದುವರೆದ ನಾಯಕರ ಮಕ್ಕಳ ಭವಿಷ್ಯಕ್ಕೆ ಕತ್ತಲು ಕವಿಯುವುದು.

4. ಧಾರ್ಮಿಕ ನಾಯಕರನ್ನು ನಂಬದ ವಾತಾವರಣ ಸೃಷ್ಟಿಯಾಗಿ, ಧಾರ್ಮಿಕ ನಾಯಕರ ನಡೆಯನ್ನು ಜನ ತೀವ್ರವಾಗಿ ಪ್ರಶ್ನೆ ಮಾಡಲು ಪ್ರಾರಂಭಿಸುವರು. ಯಾವ ಧಾರ್ಮಿಕ ಮುಖ್ಯಸ್ಥರು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಕೆಲಸ ಮಾಡಿಲ್ಲವೋ ಅವರನ್ನು ಜನ ಸಂಪೂರ್ಣಾಗಿ ತಿರಸ್ಕರಿಸುವರು. ಇದರಿಂದ ಕೆಲವು ಧಾರ್ಮಿಕ ಸ್ಥಳಗಳು ಅವನತಿ‌ ಹೊಂದುವ ಸಾಧ್ಯತೆಯಿದೆ.


ಪ್ರಕೃತಿಯ ವಿನಾಶದಿಂದ ಮೇಲಿನ  ನಾಲ್ಕು ಕ್ಷೇತ್ರಗಳ‌ ಮೇಲೆ ಆಗುವ ದುಷ್ಪರಿಣಾಮವನ್ನು ಮೊದಲು ಸಣ್ಣ ಮಕ್ಕಳು ಅನುಭವಿಸಬೇಕಾಗುವುದು. ಇದರಿಂದಾಗಿ ಅನೇಕ ಮಕ್ಕಳು ಮತ್ತು ಹೆಣ್ಣುಮಕ್ಕಳು ಮಾನಸಿಕ ತೊಂದರೆಗಳಿಗೆ ಒಳಗಾಗುವರು.


ಈ ಮೇಲಿನ ಸ್ಥಿತಿಯನ್ನು ಮುಂದಿನ ಹತ್ತು ವರ್ಷಗಳಲ್ಲಿ ಕಾಣುವ ಸಾಧ್ಯತೆ ನಮ್ನ ಮುಂದಿದೆ. ಇದಕ್ಕೆಲ್ಲ ಮುಖ್ಯ ಕಾರಣವೇ ಇಂದು ನಾವು ಪ್ರಜ್ಞೆ ಇಲ್ಲದೇ ಯಥೇಚ್ಛವಾಗಿ ಬಳಸುತ್ತಿರುವ ಸಂಪನ್ಮೂಲಗಳು. ಮುಂಬರುವ ವಿಧಾನ ಸಭೆ ಚುನಾಣೆಯಲ್ಲ ಒಂದು ಸಾವಿರ ಕೋಟಿ ರೂಪಾಯಿ ದುರ್ಬಳಕೆ ಅಗುವುದೆಂದು  ಅಂದಾಜಿಸಲಾಗಿದೆ. ಇಂದಿನ ಪ್ರಜೆಗಳು ಮತ್ತು ರಾಜಕೀಯ ನಾಯಕರೇ ಈ ರೀತಿಯ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣೀಭೂತರು. ಇಂದು ರಾಜಕೀಯ ನಾಯಕರು ತಾವು ಕೇವಲ ಬೆಲ್ಲ ತಿನ್ನುವ ಅಸೆಯಿಂದ ಪ್ರಜೆಗಳೂ ಬೆಲ್ಲ ತಿನ್ನುವ ಚಟಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಅಂದರೆ, ಅರ್ಥವಿಲ್ಲದ ಜನಪ್ರೀಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಪ್ರಕೃತಿಯ ನಾಶಕ್ಕೆ ರಾಜಕಾರಣಿಳು ಮತ್ತು ಉಚಿತಗಳನ್ನೇ ಅವಲಂಬಿಸಿದ ಪ್ರಜೆಗಳು ಇಬ್ಬರೂ ಕೂಡ ಕಾರಣೀಭೂತರಾಗಿದ್ದಾರೆ.  ಕ್ಷಣಿಕ ಆಸೆಗಾಗಿ ಸ್ವತಃ ನಮ್ಮ ಮಕ್ಕಳನ್ನೇ ಬಲಿ ಕೊಡುತ್ತಿರುವುದು ಇಂದಿನ ವಿಪರ್ಯಾಸವಾಗಿದೆ. ಇಂದು ಪ್ರಜೆಗಳು ಮತ್ತು ರಾಜಕೀಯ ನಾಯಕರು ಸೇರಿ ಕೇವಲ ಬೆಲ್ಲವನ್ನು ಸವಿಯುತ್ತಿರುವುದರಿಂದ ಮುಂದೆ ಎಲ್ಲರ ಮಕ್ಕಳಿಗೂ ಬೇವು ಮಾತ್ರ ಉಳಿಯುವುದು. ಹಾಗಾಗಿ, ಮುಂಬರುವ ಚುನಾವಣೆಯ ಮುಖ್ಯ ಚರ್ಚಾ ವಿಷಯವೇ "ಪ್ರಕೃತಿ" ಆಗಬೇಕು, ಪ್ರಕೃತಿ ಉಳಿಸುವ ಯೋಜನೆಯೊಂದಿಗೆ ಮುಂದೆ ಬರುವ ನಾಯಕರು ಮಾತ್ರ ಆಯ್ಕೆ ಆಗಬೆಕು. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಎಲ್ಲ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುವ ಅವಶ್ಯಕತೆಯಿದೆ. ಈ ನಿರ್ಧಾರದೊಂದಿಗೆ ಯುಗಾದಿ ಎಂಬ ಹೊಸ ವರ್ಷ ಪ್ರಾರಂಭಿಸಿದರೆ ಬೇವು-ಬೆಲ್ಲ ಸಮ ಪ್ರಮಾಣದಲ್ಲಿ ಸವಿದಂತೆ ಆಗುವುದು. ಇದು ಸಕಲ ಜೀವರಾಶಿಗಳ ದೃಷ್ಟಿಯಿಂದಲೂ ಅತ್ಯಂತ ಒಳಿತು...ಯೋಚಿಸಿ!


ಚುನಾವಣೆ ಸಂದರ್ಭದಲ್ಲಿ ಎಲ್ಲ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ನಿಜವಾದ ಸಾಹಿತಿಗಳ ಪರಿಚಯ ಯಾವಾಗ ಆಗುವುದು?

 

ಅಂತರಂಗದ ಆಳದಲ್ಲಿ ಇಳಿದು ಶೋಧನೆ ಮಾಡದೇ ಶ್ರೇಷ್ಠ ಸಾಹಿತ್ಯವನ್ನು ಹೊರತರಲು ಸಾಧ್ಯವಿಲ್ಲ. "ಸಿಂಹವನ್ನು ಕೆಣಕಿದರೆ ಎದ್ದು ಘರ್ಜಿಸುವುದು, ನಾಗರ ಹಾವನ್ನು ಕೆಣಕಿದರೆ ಹೆಡೆ ಎತ್ತಿ ಬುಸುಗುಟ್ಟುವುದು, ಅದರೆ ಮನುಷ್ಯನ ಅಂತರಾಳವನ್ನು ಕೆಣಕಿದರೆ ಸತ್ಯದ ಪರಿಚಯವಾಗುವುದು" ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.


ವೈವಿಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿದಾಗ ಪರಿಹಾರವು ನಮ್ಮ ಅಂತರಾಳದಿಂದಲೇ ವಿವಿಧ ರೂಪದಲ್ಲಿ ವ್ಯಕ್ತವಾಗಲು ಪ್ರಾರಂಭಿಸುವುದು. ಅದುವೇ ಬಹುಜನರು ಇಷ್ಟಪಟ್ಟು ಆರಾಧಿಸುವ ಸಾಹಿತ್ಯವಾಗುವುದು. ಹಾಗಾಗಿ, ಭೂಮಿಯ ಮೇಲೆ ದೊಡ್ಡದಾದ ಸಮಸ್ಯೆ ತಲೆ ದೋರಿದ ಸಂದರ್ಭದಲ್ಲಿ ಶ್ರೆಷ್ಟವಾದ ಸಾಹಿತಿಗಳು ಜಗತ್ತಿಗೆ ಪರಿಚಯವಾಗಿದ್ದಾರೆ.


ಈಗಾಗಲೇ ಪ್ರಕೃತಿಯ ವಿನಾಶದ ದುಷ್ಪರಿಣಾಮವನ್ನು ವಿವಿಧ ರೂಪಗಳಲ್ಲಿ ಎದುರಿಸುತ್ತಿದ್ದೇವೆ, ದಿನ ಕಳೆದಂತೆ, ಇದು ತೀವ್ರಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಈ ಸಮಸ್ಯೆಗೆ ಮೂಲ ಕಾರಣಗಳು ಏನೆಂಬುದನ್ನು ಶೋಧಿಸಿ ವಿವಿಧ ರೂಪಗಳಲ್ಲಿ ಸಾಹಿತ್ಯವನ್ನು ಹೊರ ತರುವ ಸಾಹಿತಿಗಳ ಅವಶ್ಯಕತೆ ಬಹಳ ಇದೆ. ಇದನ್ನು ಅರಿತು ಸಾಹಿತಿಗಳು ಕಾರ್ಯ ಪ್ರರುತ್ತರಾಗುವ ಅವಶ್ಯಕತೆಯಿದೆ. ಅತೀ ಹೆಚ್ಚು ಜನರ ಮೇಲೆ ಪರಿಣಾಮ ಉಂಟುಮಾಡುವ ಸಾಹಿತ್ಯವೇ ಬೆಲೆ ಬಾಳುವ ಸಾಹಿತ್ಯ.‌ ಈ ನಿಟ್ಟಿನಲ್ಲಿ, ವಾಸ್ತವಿಕ ಸಮಸ್ಯೆಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಸಾಹಿತಿಗಳ ಅವಶ್ಯಕತೆಯಿದೆ. 


ಕೇವಲ ಪ್ರಶಸ್ತಿ ಪತ್ರಗಳಿಗಾಗಿ ಹೊರಬರುವ ಸಾಹಿತ್ಯಕ್ಕೂ, ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಕೋನದಿಂದ ಹೊರ ಬರುವ ಸಾಹಿತ್ಯಕ್ಕೂ ಬಹಳ ವ್ಯತ್ಯಾಸವಿದೆ. ಖಂಡಿತ, ಸಮಸ್ಯೆಗಳು ಉಲ್ಬಣವಾದಾಗಲೇ ನಿಜವಾದ ಸಾಹಿತಿಗಳ ಪರಿಚಯವಾಗಲು ಪ್ರಾರಂಭಿಸುವುದು. 


ಪ್ರಕೃತಿಯ‌ ನಾಶದಿಂದ ಮನುಕುಲವೇ ನಾಶವಾಗುವ ದಿನಗಳು ಹತ್ತಿರವಿವೆ ಎಂದು ವಿಜ್ಞಾನಿಗಳು ಮತ್ತು ಆಧ್ಯಾತ್ಮಿಕ ನಾಯಕರು ವಿವಿಧ ರೀತಿಯಲ್ಲಿ ಹೇಳುವ ಪ್ರಯತ್ನ ಈಗಾಗಲೇ ಮಾಡಿದ್ದಾರೆ. ಹಾಗಾಗಿ, ಸಾಹಿತಿಗಳು ತಮ್ಮ ಸಾಹಿತ್ಯಕ ಕೌಶಲ್ಯವನ್ನು ಬಳಸಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರಿಗೆ ನಡೆ ನಮನ ಸಲ್ಲಿಸಬಹುದಾಗಿದೆ. ಆಸಕ್ತರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ಧೇಶದಿಂದ ಸಾಹಿತಿಗಳ ನೇತೃತ್ವದಲ್ಲಿ ಮಕ್ಕಳನ್ನು ಉಳಿಸಿ ಅಭಿಯಾನ"* ಎಂಬ ವಾಟ್ಸಪ್ ಗೃಪ್ ಪ್ರಾರಂಭಿಸಲಾಗಿದೆ. ಸಾಹಿತ್ಯ ಆಸಕ್ತರು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಗೃಪ್ ಗೆ ಸೇರಿಕೊಂಡು ಹೆಚ್ಚಿನ ಮಾಹಿತಿ ಪಡೆಯಬಹುದು.


https://chat.whatsapp.com/KJ5D32fuCAVJqxuvmiLuqA


ಈಗಾಹಲೇ "ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನ"ದ ಮೂಲಕ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಅದರ ಪೂರ್ಣ ಮಾಹಿತಿಯನ್ನು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಡೆಯಬಹುದು.


https://missionsavesoil.blogspot.com/2023/03/blog-post_12.html

ಸೋಮವಾರ, ಮಾರ್ಚ್ 20, 2023

ಏಳಿ ಎದ್ದೇಳಿ! ನಡೆದಾಡುವ ದೇವರಿಗೆ ನಡೆ ನಮನ ಸಲ್ಲಿಸೋಣ

 

ನಮ್ಮ ಮಕ್ಕಳ ಮುಂದಿನ ಭವಿಷ್ಯ ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿದೆ.‌ ಪ್ರಕೃತಿಗೆ ಪೂರಕವಾಗಿ ನಡೆದರೆ ಮಾತ್ರ ಪ್ರಕೃತಿ ಮಾತೆ ನಮ್ಮ ಮಕ್ಕಳ ಪೋಷಣೆ ಮಾಡಬಲ್ಲಳು. ಇದರ ಅರಿವು ಮೂಡಿಸುವ ಪ್ರಯತ್ನವನ್ನು "ನಮ್ಮ ಮಕ್ಕಳನ್ನು ಉಳಿಸಿ" ಅಭಿಯಾನದ ಸ್ವಯಂ ಸೇವಕರಿಂದ ಹಲವು ಚಟುವಟಿಕೆಗಳ ಮೂಲಕ ಮಾಡಲಾಗುತ್ತಿದೆ. 


ಸದರಿ ಅಭಿಯಾನದ ಅಡಿಯಲ್ಲಿ ಶಾಲಾ ಮಕ್ಕಳಿಗೆ "ನಮ್ಮನ್ನಾಳುವ ನಾಯಕರು ಹೇಗಿರಬೇಕು" ಎಂಬ ವಿಷಯದ ಕುರಿತು ಯುಟುಬ್ ಮುಖಾಂತರ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಡೆಯಬಹುದು.


https://missionsavesoil.blogspot.com/2023/03/blog-post_12.html


ಜವಾಬ್ದಾರಿಯುತ ತಂದೆ ತಾಯಿಯಂದಿರು ಮಾತ್ರ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ‌ ಎಂತಹ ಸಾಮಾಜಿಕ ವ್ಯವಸ್ಥೆಯ ಅವಶ್ಯಕತೆಯಿದೆ ಎಂಬುದರ ಕುರಿತು ಚಿಂತನೆ ಮಾಡಬಲ್ಲರು.‌ ಹಾಗಾಗಿ, ಅಭಿಯಾನದ ಸಂದೇಶವನ್ನು ಮುಂದೆ ಕೊಂಡೊಯ್ಯಲು ಇಚ್ಚಿಸುವವರಿಗೆ ಇಲ್ಲೊಂದು ಸದಾವಕಾಶವಿದೆ. ಅಭಿಯಾನದ ಕರಪತ್ರವನ್ನು ಪ್ರಿಂಟ್ ಮಾಡಿಸಿ ತಮಗೆ ಸಾಧ್ಯವಿರುವಷ್ಟು ಜನರಿಗೆ ಸ್ವತಃ ಹಂಚಬಹುದು ಅಥವಾ ಇತರರ ಮೂಲಕ ಹಂಚುವ ವ್ಯವಸ್ಥೆ ಮಾಡಬಹುದು. ಈ ಕಾರ್ಯದಲ್ಲಿ ತಾವುಗಳು ಕೈ ಜೋಡಿಸಿದರೆ, ಅದು ಸಮಸ್ತ ಜೀವರಾಶಿಗಳ ಒಳಿತಿನ ಕಾರ್ಯದಲ್ಲಿ ಕೈ ಜೋಡಿಸಿದಂತೆ ಅಗುತ್ತದೆ. ಈ ಮೂಲಕ ನಡೆದಾಡುವ ದೇವರಿಗೆ ನಡೆ ನಮನ ಸಲ್ಲಿಸುವ ಅವಕಾಶದ ಸದುಪಯೋಗ ಮಾಡಿಕೊಳ್ಳಬಹುದು.


ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಸಬಹುದು.


https://drive.google.com/drive/folders/19QtaEe8-xjC-Wksk1zoTb6UQWKLFBoIC


ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಮಕ್ಕಳನ್ನು ಉಳಿಸಿ ವಾಟ್ಸಪ್ ಗೃಪ್ ನ ಸದಸ್ಯರಾಗಿ.


https://chat.whatsapp.com/HWWf3FT8BIM6nuCv0Ii4j3

ಶನಿವಾರ, ಮಾರ್ಚ್ 18, 2023

"ಉಸಿರು" ಪುಸ್ತಕಕ್ಕೆ ಕಪ್ಪತ್ತಗುಡ್ಡದ ಶ್ರೀಗಳಿಂದ ಶುಭ ಸಂದೇಶ.




ಶ್ರಿ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು, ಕಪ್ಪತ್ತಗುಡ್ಡ, ಶ್ರೀ ನಂದಿವೇರಿಮಠ, ಗದಗ ಇವರು ಕಳೆದ ಮೂರು ದಶಕಗಳಿಂದ, ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡವನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ.

ಕಪ್ಪತ್ತಗುಡ್ಡವು ಅತ್ಯಂತ ಜೀವ ವೈವಿದ್ಯತೆಯಿಂದ ಕೂಡಿದ ವನ್ಯ ಸಂಪತ್ತನ್ನು ಹೊಂದಿದೆ. ಈ ಗುಡ್ಡದ ರಕ್ಷಣೆ ಮಾಡುತ್ತಾ ಬಂದ ಶ್ರೀ ಶುವಕುಮಾರ ಸ್ವಾಮಿಜಿಯವರಿಗೆ ಅದು ಇಂದು ಅವರ ಆರಾಧ್ಯ ದೈವವಾಗಿಬಿಟ್ಟಿದೆ. ಫೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೆಮದ ಪ್ರತಿಯೊಂದು ನುಡಿಯನ್ನು ಶ್ರೀಗಳು ನಡೆಯಲ್ಲಿ ತಂದು ವಿಶಾಲವಾಗಿ ಹರಡಿರುವ ಕಪ್ಪತ್ತಗುಡ್ಡವನ್ನು ಗಣಿಗಾರಿಕೆಯಿಂದ ರಕ್ಷಣೆ ಮಾಡಿದ್ದಾರೆ. ಪ್ರಮುಖ ವನ್ಯಸಂಪತ್ತಿನಿಂದ ಕೂಡಿದ ಗುಡ್ಡಗಳ ರಕ್ಷಣೆ ಮಾಡುವುದು ಇಂದು ನಮ್ಮೆಲ್ಲರ ಹೊಣೆಯಾಗಿದೆ. ಈಗಾಗಲೇ 50 ಪ್ರತಿಶತ ಜೀವ ವೈವಿದ್ಯತೆ ನಶಿಸಿ ಹೋಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದಿನ ಪೀಳಿಗೆಯ ದೃಷ್ಟಿಕೋನದಿಂದ ಮಹತ್ತರ ಜವಾಬ್ದಾರಿ ಹೊತ್ತು ನಿಂತ ಶ್ರೀಗಳ ಜೊತೆ ನಾವೆಲ್ಲರು ಕೈ ಜೋಡಿಸಬೇಕಾಗಿದೆ. ಪ್ರಕೃತಿಯ ಆರಾಧಕರಾದ ಶ್ರೀ ಶಿವಕುಮಾರ ಸ್ವಾಮೀಜಿಯವರು "ಉಸಿರು" ಪುಸ್ತಕವನ್ನು ಓದಿ ಶುಭ ಸಂದೇಶ ನೀಡಿರುವುದು ಹರ್ಷವೆನಿಸುತ್ತದೆ.

ಶುಕ್ರವಾರ, ಮಾರ್ಚ್ 17, 2023

ವಿಜ್ಞಾನಿಗಳ ಮಾತನ್ನು ಉಪೇಕ್ಷಿಸುವ ರಾಜಕೀಯ ನಾಯಕರು ನಮಗೆ ಬೇಕೇ?

 

ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಕಂಡುಕೊಂಡ ಸತ್ಯವನ್ನು ಈಗಾಗಲೇ ಹಲವು ರೂಪಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದರೆ, ಇಂದು ನಮ್ಮನ್ನಾಳುವ ನಾಯಕರು ಅವರ ಮಾತುಗಳನ್ನು ಗಣನೆಗೆ ತೆಗೆದುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಸಿದ್ದಪಡಿಸುತ್ತಿದ್ದಾರೆಯೇ? ಎಂಬುದನ್ನು ಪ್ರಜ್ಞಾವಂತರು ಯೋಚಿಸಲೇಬೇಕಾದ ಸಂದರ್ಭ ಬಂದೊದಗಿದೆ. ಸಮಾಜದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯ ಸಮಯದಲ್ಕಿ ವಿಜ್ಞಾನಿಗಳ ಮಾತನ್ನು ಮುನ್ನೆಲೆಗೆ ತರದಿದ್ದರೆ. ಆ ಮಾತುಗಳಿಗೆ ಮುಂದೆ ಬೆಲೆ ಸಿಗಲು ಸಾಧ್ಯವೇ?


ಪ್ರಕೃತಿಯು ಹಲವು ರೂಪಗಳಲ್ಲಿ ಮಾನವನ ಉಪಟಳಕ್ಕೆ ಒಳಗಾಗಿ ತನ್ನ ಜೀವ ವೈವಿದ್ಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನಗಳ ಮೂಲಕ ವಿವಿಧ ರೀತಿಯಲ್ಲಿ ತಿಳಿಸಿದ್ದಾರೆ. ಆದರೂ ಕೂಡ, ಪ್ರಕೃತಿಯ ಮೇಲಾಗುವ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೇ ರೂಪಿಸುತ್ತಿರುವ ಮತ್ತು ಘೋಷಣೆ ಮಾಡುತ್ತಿರುವ ಹಲವು ಜನಪ್ರೀಯ ಯೋಜನೆಗಳನ್ನು ನೋಡಿದರೆ, ರಾಜಕೀಯ ನಾಯಕರು ವಿಜ್ಞಾನಿಗಳ ಮಾತನ್ನು ಸಂಪೂರ್ಣವಾಗಿ ಉಪೇಕ್ಷಿಸಿದ್ದಾರೆ ಎಂಬುದು ತಿಳಿಯುತ್ತದೆ.


ಕಳೆದ 20 ವರ್ಷಗಳಲ್ಲಿ ಬೇಳೆ ಕಾಳುಗಳಲ್ಲಿರುವ ಪ್ರೋಟಿನ್ ಅಂಶ 60 ಪ್ರತಿಶತ ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದು ನಾವಿಂದು ಸೇವಿಸುವ ಎಲ್ಲ ಆಹಾರಕ್ಕೂ ಅನ್ವಯಿಸುತ್ತದೆ. ಉಚಿತ ಆಹಾರ ಕೊಡುವುದು ಸರಳ, ಆದರೆ ತಮ್ಮ ಸ್ವಂತ ಬಲದ ಮೇಲೆ ಆಹಾರ ಸಂಪಾದನೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಜನರಲ್ಲಿ ತುಂಬುವುದು ಬಹಳ ಕಠಿಣ. ಇಂದು ನಮ್ಮನ್ನಾಳುವ ನಾಯಕರು ಕೇವಲ ತಮ್ಮ ಅಧಿಕಾರದ ಆಸೆಗಾಗಿ ವಿಜ್ಞಾನಿಗಳ ಮಾತನ್ನು ಉಪೇಕ್ಷಿಸಿ ಪ್ರಕೃತಿಯ ನಾಶಕ್ಕೆ ಕಾರಣರಾಗುತ್ತಿರಿವುದು ಮೇಲ್ನೋಟದಲ್ಲಿಯೇ ಕಾಣುತ್ತದೆ.


ಇಂದು ಗ್ರಾಮಗಳಲ್ಲಿ ರೈತರು ಪ್ರತಿ ದಿನಕ್ಕೆ ರೂ. 500 ರಿಂದ 600 ಕೊಡುತ್ತೇನೆ ಎಂದರೂ ಕೂಡ ಜಮೀನಿನಲ್ಲಿ ಕೆಲಸ ಮಾಡುವವರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ಉಚಿತಗಳನ್ನು ಘೋಷಣೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತದ ಮೇಲೆ ಉಂಟಾಗುವ ದುಷ್ಪರಿಣಾಮ ಏನೆಂಬುದು ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಕಂಡುಕೊಂಡಿದ್ದಾರೆ. ಹಾಗಾದರೆ, ಉಚಿತ ಮತ್ರು ಜನಪ್ರೀಯ ಯೋಜನೆಗಳಿಂದ ಒಟ್ಟಾರೆ ಪ್ರಕೃತಿಯ ಮೇಲಾಗುವ ಪರಿಣಾಮ ಏನೆಂಬುದನ್ನು ವಿಜ್ಞಾನಿಗಳು ಮುನ್ನೆಲೆಗೆ ಬಂದು ಹೇಳಬಹುದೆ? ವಿಜ್ಞಾನಿಗಳು ತಮ್ಮ ಸಂಶೋಧನಾ ಫಲಿತಾಂಶಗಳನ್ನು ಪ್ರಜ್ಞಾವಂತರ ಮುಂದಿಟ್ಟು ಚರ್ಚೆಗೆ ಆಸ್ಪದ ನೀಡುವ ಸೂಕ್ತ ಸಮಯವೇ ಚುನಾವಣೆಯ ಸಮಯ.


ಚುನಾವಣೆಯ ಸಮಯವೆಂದರೆ ನಮ್ಮ ಮಕ್ಕಳ ಭವಿಷ್ಯದ ಕುರಿತು ಆಳವಾಗಿ ಚಿಂತನೆ ಮಾಡುವ ಸಮಯ ಎಂದರ್ಥ. ಇಂದು ಎಷ್ಟು ಜನ ಪ್ರಜ್ಞಾವಂತರಿಗೆ ಮುಂದಿನ ಪೀಳಿಗೆಯ ಒಳ್ಳೆಯ ಭವಿಷ್ಯದ ಕುರಿತು ಭರವಸೆ ಇದೆ ಹೇಳಿ? ನಮ್ಮ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ನಮಗಿಂತ ಬಲಿಷ್ಠರಾಗಬೇಕೆ ಹೊರತು ದುರ್ಬಲರಾಗಬಾರದು. ಬಲಿಷ್ಠ ರಾಷ್ಟ್ರದ ನಿರ್ಮಾಣ ಬಲಿಷ್ಠ ಜನರಿಂದ ಮಾತ್ರ ಸಾಧ್ಯ.‌ ಅದರೆ, ಇಂದು ಭಾರತ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ಯುವಕ ಆತ್ಮಯತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹಾಗಾದರೆ, ಮಾನಸಿಕ ತೊಂದರೆಯುಳ್ಳ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಎರ್ಥ. ಯಾವಾಗ ಭೂಮಿಯ ಮೇಲೆ ಶ್ರಮ ಸಂಸ್ಕೃತಿ ನಾಶವಾಗುವುದೋ ಆಗ ದೈಹಿಕ ಮತ್ತು ಮಾನಸಿಕ ರೋಗಗಳು ಹೆಚ್ಚಾಗುವವು. ಇದೇ ಕಾರಣಕ್ಕೆ ಬಸವಣ್ಣನವರು "ಕಾಯಕವೇ ಕೈಲಾಸ" ಎಂಬ ಮಾತನ್ನು ಹೇಳಿದ್ದಾರೆ. ಹಾಗಾದರೆ, ಇಂದಿನ ರಾಜಕೀಯ ನಾಯಕರು ಬಸವಣ್ಣನವರ ಮಾತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆಯೇ? ಈ ಪ್ರಶ್ನೆಗೆ ವಿಜ್ಞಾನಿಗಳೇ ಉತ್ತರಿಸಬೇಕಾಗಿದೆ.


ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರು ರೂಪಿಸುವ ಮತ್ತು ಘೋಷಿಸುವ ಪ್ರತಿಯೊಂದು ಯೋಜನೆಗಳು ಪ್ರಕೃತಿಗೆ ಎಷ್ಟು ಪೂರಕ ಮತ್ತು ಅಪೂರಕ ಎಂಬುದನ್ನು ವಿಜ್ಞಾನಿಗಳು ಮುನ್ನೆಲೆಗೆ ಬಂದು ಹೇಳುವ ಅವಶ್ಯಕತೆಯಿದೆ. ಇದೇ ವ್ಯವಸ್ಥೆಯೊಂದಿಗೆ ಮುಂದುವರೆದದ್ದೇ ಆದರೆ, ವಿವಿಧ ಸಂಶೋಧನಾ ಸಂಸ್ಥೆಗಳ ಅವಶ್ಯಕತೆ ಏನಿದೆ ಎಂದು ಜನರೇ ಪ್ರಶ್ನೆ ಮಾಡುವ ದಿನಗಳು ಬಹಳ ದೂರ ಉಳಿದಿಲ್ಲ. ಹಾಗಾಗಿ ವಿಜ್ಞಾನಿಗಳು ತಮ್ಮ ಮಕ್ಕಳು ಹಾಗೂ ಒಟ್ಟಾರೆ ಸಮಾಜದ ಒಳ್ಳೆಯ ಭವಿಷ್ದದ ದೃಷ್ಟಿಕೋನದಿಂದ ಜನರಿಗೆ ವಾಸ್ತವಿಕ ಸತ್ಯಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಅದಕ್ಕೆ ಸೂಕ್ತ ಸಮಯವೇ ಚುನಾವಣೆಯ ಸಮಯ...ಯೋಚಿಸಿ!


ಚುನಾವಣೆ ಸಂದರ್ಭದಲ್ಲಿ ಜನರಿಗೆ 'ನಮ್ಮ‌ ನಾಯಕರ ಮೊದಲ‌ ಜವಾಬ್ದಾರಿ' ಏನೆಂಬುದರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಮಾರ್ಚ್ 16, 2023

ಸಂದರ್ಶನ ದಿನ ಪತ್ರಿಕೆಯಲ್ಲಿ ಬಸವರಾಜ ಬಿರಾದಾರ (ಅಭೀಃ) ಅವರ‌ ಲೇಖನ

 


ನಮ್ಮ ಮಕ್ಕಳ ಉತ್ತಮ ಭವಿಷ್ಯದ ಜವಾಬ್ದಾರಿ ಹೊರುವ ನಾಯಕರು ಎಲ್ಲಿದ್ದಾರೆ?


ಜವಾಬ್ದಾರಿಯುತ ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಮಣ್ಣಿನ ನಾಶದಿಂದ ಆಹಾರದ ಕೊರತೆ, ನೀರಿನ ಕೊರತೆ ಮತ್ತು ಶುದ್ಧ ಗಾಳಿಯ ಕೊರತೆ ಉಂಟಾಗುವುದೆಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಹಾಗಾದರೆ, ಈ ಮೂಲಭೂತ ಅವಶ್ಯಕತೆಗಳ ಕೊರತೆಯನ್ನು ಖಂಡಿತ ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುವುದು. ಈ ನಿಟ್ಟಿನಲ್ಲೀ ಸೂಕ್ತ ಯೋಜನೆಗಳನ್ನು ತರುವ ಮೂಲಕ ಹೇಗೆ ನಮ್ಮ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳು ಕೊರತೆಯಾಗದಂತೆ ಮಾಡುವರು ಎಂಬುದನ್ನು ರಾಜಕೀಯ ನಾಯಕರು ಚುನಾವಣೆಯ ಸಂದರ್ಭದಲ್ಲಿಯೇ ಸ್ಪಷ್ಟಪಡಿಸುವ ಅವಶ್ಯಕತೆಯಿದೆ.


ಪ್ರಕೃತಿಯನ್ನು ಉಳಿಸುವ ಸೂಕ್ತ ಯೋಜನೆಗಳ ಕುರಿತು ಚುನಾವಣೆ ಸಂದರ್ಭದಲ್ಲಿ ಚರ್ಚೆ ಆದಾಗ ಮಾತ್ರ ಮುಂದಿನ ದಿನಗಳಲ್ಲಿ ಆ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ನಮ್ಮ ನಾಯಕರು ಹೊರಲು ಸಾಧ್ಯ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಮ್ಮ ಮಕ್ಕಳಿಗೆ ಉತ್ತಮ‌ ಭವಿಷ್ಯ ನಿರ್ಮಿಸುವ ಪ್ರಜ್ಞಾವಂತ ನಾಯಕರನ್ನು ಆಯ್ಕೆ ಮಾಡುವುದಕ್ಕಾಗಿ ನಡೆಯುತ್ತವೆ. ಈ ನಿಟ್ಟಿನಲ್ಲಿ, ಚುನಾವಣೆಗಳ ಮೂಲ ಉದ್ದೇಶ ಇಡೇರುತ್ತಿದೆಯೇ ಎಂಬುದನ್ನು ಇಂದು ಪ್ರಜ್ಣಾವಂತ ಜನರು ಯೋಚನೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಜನರು ತಮ್ಮ ಜವಾಬ್ದಾರಿ ಅರಿತು ನಡೆದರೆ ಮಾತ್ರ ಅವರ ಮಕ್ಕಳಿಗೆ ಒಳ್ಳೆಯ ಭವಿಷ್ಯ ಸೃಷ್ಟಿಯಾಗಲು ಸಾಧ್ಯ. ಜವಾಬ್ದಾರಿಯುತ ಪ್ರಜೆಗಳಿಂದ ಮಾತ್ರ ಜವಾಬ್ದಾರಿಯುತ ನಾಯಕರು ಆಯ್ಕೆಯಾಗಲು ಸಾಧ್ಯ. 


ಚುನಾವಣೆ ಸಂದರ್ಭದಲ್ಲಿ ಜನರ ಜವಾಬ್ದಾರಿ ಏನೆಂಬುದರ ಕುರಿತು ಅರಿವು ಮೂಡಿಸಲು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಬುಧವಾರ, ಮಾರ್ಚ್ 15, 2023

ಇತರರಿಗೆ ಸ್ಪೂರ್ತಿಯಾಗಬಲ್ಲ ರಾಜಕೀಯ ನಾಯಕರು ಎಲ್ಲಿದ್ದಾರೆ?

 

ಯಾರು ಪ್ರಕೃತಿಯ ಮಹತ್ವವನ್ನು ಅರಿತು ಇತರರಿಗೂ ಅದರ ಅರಿವು ಮೂಡಿಸುತ್ತಾ   ಮುನ್ನಡೆಯುವರೋ ಅವರೇ ಇತರರಿಗೆ ಸ್ಪೂರ್ತಿಯಾಗಬಲ್ಲ ರಾಜಕೀಯ ನಾಯಕರು. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿಯವರು ನಡೆದ ಹಾದಿ ಜಗತ್ತಿನ ಅದೆಷ್ಟೋ‌ ಜನರ ಬದುಕಿಗೆ ಇಂದಿಗೂ ಕೂಡ ಸ್ಪೂರ್ತಿಯಾಗಿದೆ.


ಯಾವ ನಾಯಕರಿಗೆ ಅಧಿಕಾರ ಇದ್ದರೂ ಅಥವಾ ಇಲ್ಲದಿದ್ದರೂ ಅವರು ಅನುಸರಿಸಿದ ಜೀವನವನ್ನು ಇತರರು ಅನುಸರಿಸಬೇಕು ಎಂದು ಅವರು ಗತಿಸಿಹೋದ ಮೇಲೂ  ಅನಿಸುವುದೋ ಅವರೇ ಸ್ಪೂರ್ತಿದಾಯಕ ನಾಯಕರು.


ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇತರರಿಗೆ ಸ್ಪೂರ್ತಿಯಾಗಬಲ್ಲ ನಾಯಕರನ್ನು ಬೆರಳನಿಕೆಯಷ್ಟು ಕಾಣುವುದೂ ಕೂಡ ವಿರಳ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹುಡುಕಿದರೆ  ಅಂತಹ ಮಹಾನ್ ಸ್ಪೂರ್ತಿದಾಯಕ ನಾಯಕರು ಈಗಲೂ ಕೂಡ ಕೆಲವರು ಸಿಗುತ್ತಾರೆ. ಕಮಲದ ಹೂವು ಕೆಸರಿನಲ್ಲಿ ಬೆಳೆದರೂ ಸಹ ಕೆಸರನ್ನು ಅಂಟಿಸಿಕೊಳ್ಳದೇ ಹೇಗೆ ಬೆಳೆಯುವುದೋ, ಅದೇ ರೀತಿ ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಇದ್ದೂ ಕೂಡ ಕಲ್ಮಷವನ್ನು ಅಂಟಿಸಿಕೊಳ್ಳದೇ ಪ್ರಕೃತಿ ಪ್ರೇಮಿಯಾಗಿ ಹೆಸರುವಾಸಿಯಾದ ನಾಯಕರೆಂದರೆ *ಶಾಸಕರಾದ ಬಸವರಾಜ ಪಾಟೀಲ, ಸೇಡಂ* ಅವರು. ನಾನು ಅವರ ಧೀಮಂತಿಕೆಯ ಕುರಿತು ಹಲವು ಬಾರಿ ಕೇಳಿದ್ದೆ, ಅದರೆ ದಿನಾಂಕ: 14-03-23 ರಂದು ಯಾದಗಿರಿ ಜಿಲ್ಲೆಯಲ್ಲಿ ಅವರ ಜೊತೆ ಸೇರಿ ಸ್ವಾವಲಂಬಿ ಗ್ರಾಮದ ಕುರಿತು ಉಪನ್ಯಾಸ ನೀಡುವ ಸುಸಂದರ್ಭ ದೊರೆತಿತ್ತು. ಆ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟ ಖಂಡಿತ ನನ್ನಲ್ಲಿ ಧನ್ಯತಾ ಭಾವ ಜನ್ಮ ತಾಳುವಂತೆ ಮಾಡಿತು.


ಪ್ರಕೃತಿಯು ನಾಶವಾಗಿ ಮಾನವ ಕುಲವೇ ನಾಶವಾಗುವ ದಿನಗಳು ಹತ್ತಿರವಿರುವಾಗ, ಯಾರು ಪ್ರಕೃತಿಯ ಸೇವೆಯೇ ತಮ್ಮ ಮೊದಲ ಧ್ಯೇಯವನ್ನಾಗಿಸಿಕೊಂಡು ಕೆಲವು ಉನ್ನತ ಪದವಿಯಿಂದಲೂ ವಂಚಿತರಾಗಿದ್ದಾರೋ ಅವರೇ ಮುಂದಿನ ಪೀಳಿಗೆಯ ರಾಜಕೀಯ ನಾಯಕರಿಗೆ ಮಹಾನ್ ಗುರುವಾಗಿ ನಿಲ್ಲುತ್ತಾರೆ. ಅವರೇ ಪ್ರಕೃತಿಯನ್ನು ಪ್ರೀತಿಸುವ ಇತರ ರಾಜಕೀಯ ನಾಯಕರಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ. 


ಯಾವ ರಾಜಕೀಯ ನಾಯಕರು ಪ್ರಕೃತಿಗೆ ಪೂರಕವಾಗಿ ಬದುಕಿ ಇತರರಿಗೆ ಆ ರೀತಿಯ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುತ್ತಾರೋ ಅವರು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುತ್ತಾರೆ. ಪ್ರಕೃತಿಯನ್ನು ಕಡೆಗಣಿಸಿ ಕೇವಲ ಅಧಿಕಾರಕ್ಕಾಗಿ ಜನರು ಹಲವು ಆಮಿಷಗಳಿಗೆ ಬಲಿಯಾಗುವಂತೆ ಮಾಡುತ್ತಾರೋ ಅವರು ಇರುವ ಸಂಸ್ಕೃತಿಯನ್ನು ನಾಶ ಮಾಡಿ ಜನರಲ್ಲಿ ವಿಕೃತ ಮನೋಭಾವನೆ ಜನ್ಮ ತಾಳುವಂತೆ ಮಾಡುತ್ತಿರುತ್ತಾರೆ.


ನಮ್ಮ ಸಂಸ್ಕೃತಿ ಉಳಿದು ಬೆಳೆದು ಭಾರತ ದೇಶ ಜಗತ್ತಿನಲ್ಲಿ ವಿಶ್ವ ಗುರುವಿನ ಸ್ಥಾನ ಅಲಂಕರಿಸಬೇಕಾದರೆ, ದೂರದೃಷ್ಟಿಕೋನವುಳ್ಳ ಮತ್ತು ಇತರರಿಗೆ ಸ್ಪೂರ್ತಿಯಾಗಿ ನಿಲ್ಲಬಲ್ಲ ರಾಜಕೀಯ ನಾಯಕರ ಅವಶ್ಯಕತೆಯಿದೆ. ಈಗಾಗಲೇ ಯಾರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವರೋ ಅವರನ್ನು ಇತರರು ಗುರುವಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು.‌ ಇದು ಇಂದಿನ ಅವಶ್ಯಕತೆಯಾಗಿದೆ.


ಈಗಾಗಲೇ ಪ್ರಕೃತಿ ನಾಶದ ಪರಿಣಾಮವನ್ನು ಹಲವು ರೂಪಗಳಲ್ಲಿ ನೋಡುತ್ತಿದ್ದೇವೆ. ಆ ಸಮಸ್ಯೆಗಳಿಗೆ ಪರಿಹಾರ ನೀಡಲು ಎಂತಹ ನಾಯಕರ ಅವಶ್ಯಕತೆಯಿದೆ ಎಂಬುದರ ಕುರಿತು ಯುಟುಬ್ ಮುಖಾಂತರ ಮಕ್ಕಳಿಗಾಗಿ  ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು. ಆದ ಕಾರಣ, ಈ ಲೇಖನ ಓದುಗರು ಈ ಮಾಹಿತಿಯು ಅಧಿಕ ಜನರಿಗೆ ಮುಟ್ಟುವಂತೆ ಮಾಡಿ ತಾವೂ ಕೂಡ *ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನ* ದ ಸ್ವಯಂ ಸೇವಕರಾಗಿ ಕೆಲಸ ಮಾಡಲು ಇಂದೇ ಪ್ರಾರಂಭಿಸಬಹುದು. ಇದು ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾಡಬೇಕಾದ ಮೊದಲ ಕೆಲಸ ಎಂಬುದು ನಮ್ಮ ಅಭಿಪ್ರಾಯ.


 *ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.* 


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಮಂಗಳವಾರ, ಮಾರ್ಚ್ 14, 2023

ಶಾಸಕರಾದ ಬಸವರಾಜ ಪಾಟೀಲ, ಸೇಡಂ ಇವರ ನೇತೃತ್ವದಲ್ಲಿ ಮಣ್ಣು ಉಳಿಸಿ ಅಭಿಯಾನ

 ಯಾದಗಿರ ಜಿಲ್ಲೆಯಲ್ಲಿ ನಡೆದ ಸ್ವಾವಲಂಬಿ ಗ್ರಾಮ ಸಮೃದ್ಧಿ ಸಂಕಲ್ಪ ಕಾರ್ಯಾಗಾರದಲ್ಲಿ ಬಸವರಾಜ ಬಿರಾದಾರ ಇವರು "ಮಣ್ಣು ಉಳಿಸುವ ಮೂಲಕ ಸ್ವಾವಲಂಬಿ ಗ್ರಾಮ‌ ಕಟ್ಟುವ  ಕುರಿತು ಉಪನ್ಯಾಸ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಬಗವಂತ್ ಖುಬಾ ಮತ್ತು ಶಾಸಕರಾದ ಬಸವರಾಜ ಪಾಟೀಲ, ಸೇಡಂ ಇವರು ಉಪಸ್ಥಿತರಿದ್ದರು. ಶಾಸಕರಾದ ಬಸವರಾಜ ಪಾಟೀಲ, ಸೇಡಂ ಇವರು ಮಾತನಾಡಿ ಜನರು ಸರ್ಕಾರದ ಮುಂದೆ ಕೈ ಚಾಚುವ ಬದಲು, ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಚುನಾವಣೆ ಸಂದರ್ಭದಲ್ಲಿ ಯಾವುದೇ ಅಮಿಷಗಳಿಗೆ ಒಳಗಾಗದೆ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ನೀಡುವವರನ್ನು ಆಯ್ಕೆ ಮಾಡಬೇಕು, ಅಂದಾಗ ಮಾತ್ರ ಸ್ವಾವಲಂಬಿ ಗ್ರಾಮ‌ ಕಟ್ಟಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮವು ದಿ: 14-03-2023ರಂದು ಜರುಗಿತು.











ನಮ್ಮನ್ನಾಳುವ ನಾಯಕರಿಗೆ ದೂರದೃಷ್ಟಿಕೋನ ಇರುವ ಅವಶ್ಯಕತೆ ಇದೆಯೇ?

 

ಯಾವ ನಾಯಕನಿಗೆ ಮುಂದಿನ ದಾರಿ ಎಷ್ಟು ದೂರದವರೆಗೆ ಕಾಣುವುದೋ ಅಷ್ಟು ಸ್ಪಷ್ಟತೆಯನ್ನು ತನ್ನ ಹಿಂಬಾಲಕರಿಗೆ ನೀಡಬಲ್ಲ. ಈ ಕಾರಣಕ್ಕಾಗಿ ಒಬ್ಬ ನಾಯಕನಿಗಿರಬೇಕಾದ ಮೊದಲ ಗುಣವೇ ದೂರದೃಷ್ಟಿಕೋನ.


ದೂರದೃಷ್ಟಿಕೋನ ಇರುವ ನಾಯಕ ಮಾತ್ರ ತನ್ನ ಹಿಂಬಾಲಿಸುವ ಜನರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂಬುದನ್ನು ತಿಳಿದಿರಬಲ್ಲ. ಮುಂದಿನ ದಿನಗಳಲ್ಲಿ ಪ್ರಕೃತಿ ನಾಶವಾಗುವುದರಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುವವು ಎಂದು ಜಗತ್ತಿನ ಎಲ್ಲ ಜವಾಬ್ದಾರಿಯುತ ವಿಜ್ಞಾನಿಗಳು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದರೂ ಸಹ ಇಂದಿನ ರಾಜಕೀಯ ನಾಯಕರು ಚುನಾವಣೆಯ ಸಂದರ್ಭದಲ್ಲಿ ಈ ಮೂಲ ಸಮಸ್ಯೆಗೆ ಪರಿಹಾರ ನೀಡುವ ಯಾವ ಆಶ್ವಾಸನೆಯನ್ನೂ ಕೂಡ ನೀಡದಿರುವುದಕ್ಕೆ ಕಾರಣವೇನು? ಆ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡದಿರುವುದಕ್ಕೆ ಮುಖ್ಯ ಕಾರಣವೇನು? ನಮ್ಮ ನಾಯಕರಿಗೆ ಚುನಾವಣೆಯ ಸಂದರ್ಭದಲ್ಲಿಯೇ ಈ ಮೂಲ ಸಮಸ್ಯೆಯ ಕುರಿತು ಅರಿವು  ಇಲ್ಲ ಎಂದರೆ, ಮುಂದೆ ಆ ಸಮಸ್ಯೆಗೆ ಪರಿಹಾರ ನೀಡಬಲ್ಲರೆ? ಪ್ರಜ್ಞಾವಂತರು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುವ ಅವಶ್ಯಕತೆಯಿದೆ.


ಇಂದು ಅನೇಕ ನಾಯಕರಿಗೆ ದೂರದೃಷ್ಟಿಕೋನ ಇರದೇ ಇರುವ ಕಾರಣದಿಂದ, ಹಲವು ಕ್ಷಣಿಕ ಆಮಿಷಗಳಿಗೆ ಜನರನ್ನು ಬಲಿಯಾಗಿಸಿ ಅಧಿಕಾರದ ಗದ್ದುಗೆ ಏರುವ ಏಕೈಕ ಗುರಿ ಹೊಂದಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿ ವಿನಾಶದ ಪರಿಣಾಮವನ್ನು ಮೊದಲು ಎದುರಿಸುವವರೇ ನಮ್ಮ ಮಕ್ಕಳು. ಇಂದು ನಾವು ಈ ಮುಖ್ಯ ವಿಷಯವನ್ನು ಮುನ್ನೆಲೆಗೆ ತರದೇ ಇದ್ದರೆ  ನಮ್ಮ ಮಕ್ಕಳನ್ನು ಸ್ವತಃ ನಾವುಗಳೇ ಸಮಸ್ಯೆಗೆ ಈಡು ಮಾಡುತ್ತಿದ್ದೇವೆ ಎಂದು ಅರ್ಥ.


ಈಗಾಗಲೇ ಪ್ರಕೃತಿ ವಿನಾಶದ ಪರಿಣಾಮವನ್ನು ಹಲವು ರೂಪಗಳಲ್ಲಿ ಎದುರಿಸುತ್ತಿದ್ದೇವೆ. ಆ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಯುಟುಬ್ ಮುಖಾಂತರ ಮಕ್ಕಳಿಗಾಗಿ  ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು. ಆದ ಕಾರಣ, ಈ ಲೇಖನ ಓದುಗರು ಈ ಮಾಹಿತಿಯು ಅಧಿಕ ಜನರಿಗೆ ಮುಟ್ಟುವಂತೆ ಮಾಡಿ ತಾವೂ ಕೂಡ *ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನ* ದ ಸ್ವಯಂ ಸೇವಕರಾಗಿ ಕೆಲಸ ಮಾಡಲು ಇಂದೇ ಪ್ರಾರಂಭಿಸಬಹುದು. ಇದು ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾಡಬೇಕಾದ ಮೊದಲ ಕೆಲಸ ಎಂಬುದು ನಮ್ಮ ಅಭಿಪ್ರಾಯ.


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.html.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಸೋಮವಾರ, ಮಾರ್ಚ್ 13, 2023

ನಮ್ಮನ್ನಾಳುವ ನಾಯಕರು ಹೇಗಿರಬೇಕು?


ನಮ್ಮನ್ನಾಳುವ ನಾಯಕರು ವಾಸ್ತವಿಕ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಜವಾಬ್ದಾರಿ ಹೊರುವವರಿರಬೇಕು.


ವಾಸ್ತವಿಕ ಸಮಸ್ಯೆ ಯಾವುದು?

ಪ್ರಕೃತಿಯ ವಿನಾಶದಿಂದ ಮಾನವ ಕುಲವೇ ನಾಶವಾಗುವ ದಿನಗಳು ಹತ್ತಿರವಿವೆ ಎಂದು ಜಗತ್ತಿನ ಜವಾಬ್ದಾರಿಯುತ ವಿಜ್ಞಾನಿಗಳು ಹೇಳುತ್ತಿದ್ದಾರೆ ಹಾಗೂ ವಿಶ್ವ ಸಂಸ್ಥೆ ಹೇಳುತ್ತಿದೆ. ಪ್ರಕೃತಿಯ ನಾಶವೇ ವಾಸ್ತವಿಕ ಮೂಲ  ಸಮಸ್ಯೆಯಾಗಿದೆ.


ಈಗಾಗಲೇ ವಾಸ್ತವಿಕ ಸಮಸ್ಯೆಯ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಯಾರು ಮಾಡಿದ್ದಾರೆ?


1. ನಡೆದಾಡುವ ದೇವರಾದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು "ನನ್ನನ್ನು ಪ್ರಕೃತಿಯಲ್ಲಿ ಕಾಣಿ" ಎಂದು ಏಕೆ ಹೇಳಿ ಲಿಂಗೈಕ್ಯರಾದರು? ಈ ಮೂಲಕ "ಪ್ರಕೃತಿ ಉಳಿದರೆ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ" ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಹೆಚ್ಚಿನ ವಿವರ ಪಡೆಯಲು ಆನ್ಲೈನ್ ನಲ್ಲಿ ಉಚಿತವಾಗಿ ದೊರೆಯುವ "ಉಸಿರು" ಎಂಬ ಪುಸ್ತಕ  ಓದಿ.


2. ಸದ್ಗುರು ಅವರು ತಮ್ಮ 65ನೇ ವಯಸ್ಸಿನಲ್ಲಿ ಜಾಗತಿಕ ಮಟ್ಟದಲ್ಲಿ ಮಣ್ಣು ಉಳಿಸಿ ಅಭಿಯಾನ ಪ್ರಾರಂಭಿಸಿ 100 ದಿನಗಳಲ್ಲಿ 30 ಸಾವಿರ ಕಿಲೋಮೀಟರ್ ಬೈಕ್ ಮೇಲೆ ಪ್ರಯಾಣಿಸಿ ಜಗತ್ತಿಗೆ ಪ್ರಕೃತಿಯ ಮೂಲವಾದ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಈ ಅತಿಮಾನುಷ  ಪ್ರಯತ್ನವನ್ನು ಸದ್ಗುರು ಅವರು ಏಕೆ ಮಾಡಿದರು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು savesoil.org ವೆಬ್ಸೈಟ್ ಗೆ ಭೇಟಿ ನೀಡಿ.


ಈ ಮೇಲಿನ ಇಬ್ಬರು ಆಧ್ಯಾತ್ಮಿಕ ನಾಯಕರು ತಮ್ಮದೇ ಆದ ರೀತಿಯಲ್ಲಿ ಪ್ರಕೃತಿಯ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವುದಕ್ಕೆ ಕಾರಣವೇನು? ಈ ಪ್ರಶ್ನೆಗೆ  ಉತ್ತರಿಸುವುದು ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಇಂದು ನಮ್ಮನ್ನಾಳುವ ನಾಯಕರ ಮೊದಲ ಜವಾಬ್ದಾರಿಯಾಗಿದೆ.


ಇಂದು ನಮ್ಮನ್ನಾಳುವ  ನಾಯಕರ ಮೊದಲ ಜವಾಬ್ದಾರಿ  ಏನು ಎಂಬುದರ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ *ನಮ್ಮನ್ನಾಳುವ ನಾಯಕರು ಹೇಗಿರಬೇಕು* ಎಂಬ ವಿಷಯದ ಕುರಿತು ಮಕ್ಕಳಿಗಾಗಿ ಯುಟುಬ್ ಮುಖಾಂತರ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ತೃತಿಯ ಬಹುಮಾನವೇ 25 ಸಾವಿರ ರೂಪಾಯಿ ಇರುವುದು. ಈ ಮೇಲಿನ‌ ವಿಷಯದ ಕುರಿತು 5 ರಿಂದ 10 ನಿಮಿಷ ಭಾಷಣ ಮಾಡಿದ ವಿಡಿಯೋ ಮಾತ್ರ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 


ಭಾಷಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ‌ ಕ್ಲಿಕ್ ಮಾಡಿ.


https://missionsavesoil.blogspot.com/2023/03/blog-post_12.

...........................................

🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಭಾನುವಾರ, ಮಾರ್ಚ್ 12, 2023

"ಉಸಿರು" ಪುಸ್ತಕಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಂದ ಶುಭ ಸಂದೇಶ


 

ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ವಿರಕ್ತ ಮಠ, ಬಸವನ ಬಾಗೇವಾಡಿ ಇವರಿಂದ "ಉಸಿರು" ಪುಸ್ತಕದ ಮೂಲಕ ಪ್ರಾರಂಭಿಸಿದ ಅಭಿಯಾನಕ್ಕೆ ಶುಭ ಸಂದೇಶ.


Virakta Math, Basavana Bagewadi

ಭಾಷಣದ ವಿಡಿಯೊ ಕಳುಹಿಸಿ ರೂ. 1 ಲಕ್ಷ ಬಹುಮಾನ ಗೆಲ್ಲಿ


-: ಭಾಷಣ ಸ್ಪರ್ಧೆಯ ರೂಪರೇಷೆಗಳು :-

ಭಾಷಣದ ವಿಷಯ: ಪರಿಸರ ಉಳಿಸುವಲ್ಲಿ ನಮ್ಮನ್ನಾಳುವ ನಾಯಕರ ಜವಾಬ್ದಾರಿ ( ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗಿ 200 ಕೋಟಿ ಜನಸಂಖ್ಯೆ ಸಾವಿಗೀಡಾಗುವ ಸಂದರ್ಭ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತು ಉಳಿದ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಸೂಕ್ತ ಪ್ರಜ್ಞಾವಂತ ನಾಯಕರಿಗಿರಬೇಕಾದ ಗುಣಲಕ್ಷಣಗಳ ಕುರಿತ ಭಾಷಣ ಸ್ಪರ್ಧೆ ಇದಾಗಿದೆ)

ಬಹುಮಾನ:

1. ಮೊದಲ ಬಹುಮಾನ ರೂ. 1 ಲಕ್ಷ. 

2. ಎರಡನೇ ಬಹುಮಾನ ರೂ. 50 ಸಾವಿರ 

3. ಮೂರನೇ ಬಹುಮಾನ ರೂ. 25 ಸಾವಿರ 

4. ಸಮಾಧಾನಕರ ಬಹುಮಾನ ರೂ. 5 ಸಾವಿರದಂತೆ 10 ವಿದ್ಯಾರ್ಥಿಗಳಿಗೆ  ನೀಡಲಾಗುವುದು.

ಕೃಷಿ ಮಹಾವಿದ್ಯಾಲಯ, ವಿಜಯಪುರದ ಪ್ರಜ್ಞಾವಂತ ಕೃಷಿ ಪದವೀಧರರು ಬಹುಮಾನ ನೀಡುತ್ತಿದ್ದಾರೆ. 

(ಇತರರು ವೈಯಕ್ತಿಕವಾಗಿ ಅಥವಾ ಸಂಘ-ಸಂಸ್ಥೆಗಳ ಮೂಲಕ ಬಹುಮಾನ ನೀಡಲು ಮುಂದೆ ಬಂದರೆ ಆಯಾ ಬಹುಮಾನಗಳ ಸಂಖ್ಯೆ ಹೆಚ್ಚಾಗುವವು)

ಭಾಷಣ ಅವಧಿ: 

2 ರಿಂದ 10 ನಿಮಿಷ (ನಾವು ನೀಡಿದ ಅವಧಿಯಲ್ಲಿ ಇರುವ ಭಾಷಣಗಳನ್ನು ಮಾತ್ರ ಸ್ವೀಕರಿಸಲಾಗುವುದು)

ಭಾಷಣ ಕಳುಹಿಸಿ ಕೊಡುವ ಕೊನೆಯ ದಿನ: 01-07--2023

ವಿಜೇತರನ್ನು ಆಯ್ಕೆ ಮಾಡುವ ವಿಧಾನ

ಯುಟುಬ್ ವೀಕ್ಷಕರ ಸಂಖ್ಯೆ, ಸರಾಸರಿ ವೀಕ್ಣಣೆಯ ಸಮಯ, ಲೈಕ್ ಗಳು ಮತ್ತು ಕಮೆಂಟ್ ಗಳ ಆಧಾರದ ಮೇಲೆ ಬಹುಮಾನ ನೀಡಲಾಗುವುದು.

ತಾವು ವಿಡಿಯೋ ಕಳುಹಿಸಿದ ಮೂರು ದಿನಗಳಲ್ಲಿ ಯುಟುಬ್ ಗೆ ಅಪ್ಲೋಡ್ ಮಾಡಲಾಗುವುದು.

ದಿನಾಂಕ 15-07-2023 ರ ವರೆಗೆ ವೀಕ್ಷಿಸಿದ ವೀಕ್ಷಕರ ಆಧಾರದ ಮೇಲೆ ಬಹುಮಾನವನ್ನು ಘೋಷಿಸಲಾಗುವುದು(ಅಂದಿನ ದಿನ ಸಾಯಂಕಾಲ 6 ಗಂಟೆಗೆ). 

 ವಯೋಮಿತಿ: 

18 ವರ್ಷ ಮೀರಿರಬಾರದು (ದಿನಾಂಕ: 18-02-2023 ಕ್ಕೆ 18 ವರ್ಷ ಆಗಿರಬಾರದು)

 ಬದಲಾವಣೆ: ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ಬಹುಮಾನ ಘೋಷಣಾ ದಿನಾಂಕವನ್ನು ಹಲವು ಶಿಕ್ಷಕರ ಕೋರಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಭಾಷಣ ಸ್ಪರ್ಧೆಯಲ್ಲಿ ಭಾಗವಗಿಸುವ ಕೊನೆಯ ದಿನಾಂಕ : 15-05-2023 ರ ಬದಲು 01-07-2023 ಎಂದಾಗಿದೆ ಹಾಗೂ ಭಾಷಣ ಸ್ಪರ್ಧೆಯ ಬಹುಮಾನ ಘೋಷಣಾ ದಿನಾಂಕ: 15-06-23 ರ ಬದಲು 15-07-2023 ಎಂದಾಗಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಶಾಲಾ ಪರೀಕ್ಷೆಗಳು ಮತ್ತು ರಜಾ ದಿನಗಳು ಸ್ಪರ್ಧಾ ಸಮಯದಲ್ಲಿ ಇದ್ದ ಕಾರಣ ಸಿಕ್ಷಕರು ಮಕ್ಕಳನ್ನು ಭಾಷಣ ಸ್ಪರ್ಧೆಯಲ್ಲಿ ತೊಡಗಿಸಲು ಸಾಧ್ಯವಾಗಿಲ್ಲ.‌ ಹಾಗಾಗಿ ಶಾಲಾ ಶಿಕ್ಷಕರ ಕೋರಿಕೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

 ವಿಶೇಷ ಸೂಚನೆಗಳು : 

 1. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ  ಕೃಪೆಯಿಂದ ಬರೆದ "ಉಸಿರು" ಕಿರು ಪುಸ್ತಕವು  ಆನ್ಲೈನ್ ನಲ್ಲಿ ಲಭ್ವವಿದೆ, ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿರಿ.  ಮಣ್ಣು ಉಳಿಸಿ ಅಭಿಯಾನದ ಕುರಿತ ರೇಡಿಯೋ ಸಂದರ್ಶನದ ಆಡಿಯೋ ಯುಟುಬ್ ನಲ್ಲಿ ಲಭ್ಯವಿದೆ, ಅದನ್ನೂ ಕೂಡ ಕೇಳಿದ ನಂತರ ಭಾಷಣ ತಯಾರಿ ಮಾಡುವುದು.

2. ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನದ ಮಾತುಗಳು, ಗತಿಸಿಹೋದ ಹಲವು ಮಹಾನ್ ನಾಯಕರ ಮಾತುಗಳು ಹಾಗೂ ಕೆಲವು ಘಟನೆಗಳನ್ನು ಉಲ್ಲೇಖಿಸಿ ಭಾಷಣ ಮಾಡಬೇಕು.

3.ಮಣ್ಣು ಉಳಿಸಿ ಅಭಿಯಾನದ ವೆಬ್ಸೈಟ್ savesoil.org ನಲ್ಲಿಯ ಮಾಹಿತಿಯನ್ನು ಭಾಷಣದಲ್ಲಿ ಉಪಯಲಯೋಗಿಸಿ. ವಾಸ್ತವಿಕವಾಗಿ ರೈತರ ಹಾಗೂ ಇತರ ಸಾಮಾಜಿಕ ಸಮಸ್ಯೆಗಳ ಉಲ್ಲೇಖಿತ ಭಾಷಣ ಇರಬೇಕು.

4. ಭಾಷಣದಲ್ಲಿ ಯಾವುದೇ ವ್ಯಕ್ತಿಯ ತೇಜೊವಧೆ ಮಾಡಿರಬಾರದು ಹಾಗೂ ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಅಥವಾ ಪಕ್ಷದ ಹೆಸರನ್ನು ಬಳಕೆ ಮಾಡಬಾರದು. ಅಂತಹ ಭಾಷಣಗಳನ್ನು ಸ್ವೀಕರಿಸುವುದಿಲ್ಲ.

5. ಮುಂಬರುವ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಹೇಗಿರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಭಾಷಣ ಇರಬೇಕು.

6. ಭಾಷಣದಲ್ಲಿ ತಾವು ಭಾಗವಹಿಸುವುದು ಬಹಳ ಮುಖ್ಯ, ಆದ ಕಾರಣ ಭಾಷಣವನ್ನು ಜನರಿಗೆ ಮನಮುಟ್ಟುವಂತೆ ಓದಲೂ ಬಹುದು. ವಾಸ್ತವಿಕ‌‌ ಸಮಸ್ಯೆಗಳನ್ನು ಹೆಚ್ಚು ಜನರಿಗೆ ಮನಮುಟ್ಟುವಂತೆ ತಿಳಿಸುವಿರಿ ಎಂಬುದಕ್ಕೆ ಆದ್ಯತೆ ಇರುವುದು.

ಅತೀ ಹೆಚ್ಚು ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲು ಪ್ರಜ್ಞಾವಂತ ಶಿಕ್ಷಕರು ಮತ್ತು ಪಾಲಕರಲ್ಲಿ ಕಳಕಳಿಯ ವಿನಂತಿ.

ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ವಿಶೇಷ ಅವಕಾಶ.

ಇಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.

ಈ ಕೆಳಕಂಡ ಸಂಪನ್ಮೂಲಗಳನ್ನು ಉಪಯೋಗಿಸಿ ಭಾಷಣ ಸಿದ್ದಪಡಿಸಿ.

1. ಪೂಜ್ಯ ಶ್ರಿ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪೆಯಿಂದ ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ಬರೆದ ಪುಸ್ತಕವು ಉಚಿತವಾಗಿ PDF ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು ಓದಿ

2. ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ರೇಡಿಯೋ ಸಂದರ್ಶನದಲ್ಲಿ ಮಣ್ಣು ಉಳಿಸಿ ಅಭಿಯಾನದ‌ ಕುರಿತು ಮಾತನಾಡಿದ ಅಡಿಯೋ ಅಲಿಸಿ

3. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಸದ್ಗುರು ಅವರು ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ತಿಲಿದುಕೊಳ್ಳಿ ಮತ್ತು ಹೆಚ್ಚಿನ ‌ಮಾಹಿತಿಗಾಗಿ savesoil.org ವೆಬ್ಸೈಟ್ ಗೆ ಭೇಟಿ ನೀಡಿ.

4. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ವಿಡಿಯೋಗಳನ್ನು ಆಲಿಸಿ

ಗೂಗಲ್ ಮೀಟ್ ಮುಖಾಂತರ ಜನರಿಗೆ ಭಾಷಣ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ವಿಡಿಯೋ ವೀಕ್ಷಿಸಿ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9110885321 / 9113811569 

ಅಭೀಃ ಫೌಂಡೇಶನ್, ವಿಜಯಪುರ

  • ಈಗಾಗಲೇ ಭಾಷಣದ ವಿಡಿಯೋ ಕಳುಹಿಸಿದ ವಿದ್ಯಾರ್ಥಿಗಳ ಭಾಷಣ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
            https://youtube.com/playlist?list=PL8k_q2UXZgollJ0b9J7AAZfQtsJzlToB6

ಶನಿವಾರ, ಮಾರ್ಚ್ 11, 2023

ಮುಂದಿನ ಪೀಳಿಗೆಯನ್ನು ಉಳಿಸಿ ಬೆಳೆಸುವ ಸಾಧ್ಯತೆ ಎಲ್ಲಿದೆ?


ವಾಸ್ತವಿಕ ಸಮಸ್ಯೆಗಳನ್ನು ಎಲ್ಲ ಪ್ರಜೆಗಳು ಅರಿತು ಆ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯೇ ಚುನಾವಣೆ. ಶಾಂತಿ ಮತ್ತು ನೆಮ್ಮದಿಯಿಂದ ಜನರು ಜೀವನ ಸಾಗಿಸುವ ಸುಂದರ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ನಡೆಸಲಾಗುತ್ತದೆ. ಹಾಗಾದರೆ, ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳ ಉದ್ದೇಶ ನೆರವೇರುತ್ತಿದೆಯೇ ಎಂಬುದು ಮೂಲ ಪ್ರಶ್ನೆ.


ಇಂದು‌ ಜನರು ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಬೇಕಾದ ಪ್ರಮುಖ 5 ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನೆ ಮಾಡುವ ಅವಶ್ಯಕತೆಯಿದೆ.


1. ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗುವುದರಿಂದ 200 ಕೋಟಿ ಜನಸಂಖ್ಯೆ ಹಸಿವಿನಿಂದ ಬಳಲಿ ಸಾಯುವ ಪರಿಸ್ಥಿತಿ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಇದರ ಪರಿಣಾಮ ಈಗಾಗಲೇ ಕೆಲವು ದೇಶಗಳಲ್ಲಿ ಹಲವು ರೂಪಗಳಲ್ಲಿ ವ್ಯಕ್ತವಾಗುತ್ತಿದೆ. 


2. ಮಾನಸಿಕ ರೋಗ ಸಾಂಕ್ರಾಮಿಕವಾಗಿ ಹರಡುತ್ತಿದೆ, ಇದು ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಮಸ್ಯೆಯನ್ನೂ ಕೂಡ ಹಲವು ರೂಪಗಳಲ್ಲಿ ಸಮಾಜದಲ್ಲಿ ಈಗಾಗಲೇ‌ ಕಾಣುತ್ತಿದ್ದೇವೆ. 


3. ರೈತರು ಕೃಷಿಯಲ್ಲಿ ಭರವಸೆ ಕಳೆದುಕೊಂಡು ಕೃಷಿ ವೃತ್ತಿಯನ್ನು ತ್ಯಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ದೇಶದಲ್ಲಿ 2 ಪ್ರತಿಶತ ರೈತರ ಮಕ್ಕಳೂ ಕೂಡ ಕೃಷಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.


4. ಭಾರತ ದೇಶದಲ್ಲಿ 90 ಪ್ರತಿಶತ ಯುವಕರು ಯಾವುದಾದರೂ ಚಟಕ್ಕೆ ಒಳಗಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸ್ವತಃ ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದಕ್ಕೆ ಮೂಲ ಕಾರಣವನ್ನು ಶೋಧಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ.


5. ಮುಂದಿನ 5 ವರ್ಷಗಳಲ್ಲಿ ಇಂದು ಜನರಿಗೆ ದೊರೆಯುತ್ತಿರುವ ಅರ್ಧದಷ್ಟು ನೀರು ಕೂಡ ದೊರೆಯದೇ ಜನರು ತೀವ್ರವಾದ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ವಿಜ್ಣಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ನಿದರ್ಶನವೆಂದರೆ, ಗ್ರಾಮಗಳಲ್ಲಿರುವ ಹಳ್ಳಗಳು ಬಹು ಬೇಗನೆ ಬತ್ತಿ ಹೋಗುತ್ತಿವೆ.


ಈ ಮೇಲಿನ ಸಮಸ್ಯೆಗಳೊಂದಿಗೆ ಇನ್ನೂ ಹಲವು ವಾಸ್ತವಿಕ ಸಮಸ್ಯೆಗಳನ್ನು ಪಟ್ಟಿ‌ ಮಾಡಬಹುದು.


ಇಂದು ಪ್ರಜೆಗಳು ವಾಸ್ತವಿಕ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬುದು ಮೂಲ ಪ್ರಶ್ನೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿಯವರೆಗೆ ಜನರಿಗೆ ವಾಸ್ತವಿಕ ಸಮಸ್ಯೆಗಳ ಅರಿವು ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.


ಹಾಗಾದರೆ, ಸಾಮಾಜಿಕ ಸಮಸ್ಯೆಗಳ ಕುರಿತು ಆಳವಾಗಿ ಚಿಂತನೆ ನಡೆಸಿ ಜನಸಾಮಾನ್ಯರಿಗೂ ತಿಳಿಸುವ ಕೆಲಸವನ್ನು ಯಾರು ಮಾಡಬೇಕು? ಖಂಡಿತ, ಪ್ರಜ್ಞಾವಂತರು ಇಂದಿನ‌ ವಾಸ್ತವಿಕ ಸಮಸ್ಯೆಗಳ ಕುರಿತು ಆಳವಾಗಿ ಚಿಂತನೆ ನಡೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಈ ಮೂಲಕ ನಾಯಕರಾಗಲು ಬಯಸುವವರೂ ಕೂಡ ವಾಸ್ತವಿಕ ಸಮಸ್ಯೆಗಳ ಕುರಿತು ಮಾತನಾಡಿ ಜನರ ಮತ ಪಡೆಯುವ ವಾತಾವರಣ ನಿರ್ಮಾಣ ಮಾಡಬೇಕು. 


ವೈಯಕ್ತಿಕ, ಸಾಮಾಜಿಕ ಮತ್ತು ಪ್ರಕೃತಿಯ ಕುರಿತು ಆಳವಾದ ಅರಿವು ಮೂಡಿಸಿಕೊಳ್ಳುವುದೇ ಆಧ್ಯಾತ್ಮ. ಹಾಗಾದರೆ, ಆಧ್ಯಾತ್ಮಿಕ ನಾಯಕರು ವಾಸ್ತವಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಿಕೊಂಡು, ಆ ಸಮಸ್ಯೆಗಳ ಕುರಿತು ಚಿಂತನೆ ನಡೆಸಲು ಸೂಕ್ತ ವೇದಿಕೆಗಳನ್ನು ನಿರ್ಮಿಸುವ ಮತ್ತು ಆ ನಿಟ್ಟಿನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ. ಸ್ವಾಮಿ ವಿವೇಕಾನಂದರು ಸ್ವಂತ ಮುಕ್ತಿಗಾಗಿ ಹಂಬಲಿಸಿದಾಗ, ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು, "ಸ್ವಂತ ಮುಕ್ತಿಗಿಂತ‌ ಹಲವು ಸಮಸ್ಯೆಗಳಿಂದ‌ ತೊಳಲಾಡುತ್ತಿರುವ ಸಮಾಜವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವುದೇ‌ ಶ್ರೇಷ್ಠ" ಎಂಬ ಮಾತು ಹೇಳಿರುವುದನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ.


ಸಮಾಜದಲ್ಲಿ ಶಾಂತವಾದ ವಾತಾವರಣ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಇಡೇರಲು ಸಾಧ್ಯ.‌ ಅಂದರೆ, ಶಾಂತಿ‌ ಮಾರ್ಗದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಂದಿನ ಕೆಲವೇ ವರ್ಷಗಳಲ್ಲಿ ಸಮಸ್ಯೆಗಳು ತೀವ್ರವಾಗಿ ಉಲ್ಭಣಗೊಳ್ಳುವ ಸಾಧ್ಯತೆಯಿದೆ. ಅಂತಹ ಅಶಾಂತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಇಡೇರಲು ಸಾಧ್ಯವಿಲ್ಲ. 


ಇಂದು ಸಮಾಜದಲ್ಲಿ ವಾಸ್ತವಿಕ ಸಮಸ್ಯೆಗಳ ಕುರಿತು ಚಿಂತನೆ ನಡೆಸಲು ಹಲವು ವೇದಿಕೆಗಳನ್ನು ನಿರ್ಮಿಸುವುದಕ್ಕೆ ಸುಕಾಲ. ಈ ನಿಟ್ಟಿನಲ್ಲಿ‌ ಆಧ್ಯಾತ್ಮಿಕ ನಾಯಕರು ಮತ್ತು ಪ್ರಜ್ಞಾವಂತರು ಮುಂದಿನ ಪೀಳಿಗೆಯ ಉಳಿವಿಗಾಗಿ ತಮ್ಮ ಪ್ರಯತ್ನವನ್ನು ಮಾಡಲೇಬೇಕಾಗಿದೆ. ಇದು ಇಂದಿನ ಅವಶ್ಯಕತೆಯಾಗಿದೆ...ಯೋಚಿಸಿ!

...........................................

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...

  https://missionsavesoil.blogspot.com/2023/02/blog-post_23.html


🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ಏಕೆ ನಡೆಸಲಾಗುತ್ತದೆ?

 

ವಾಸ್ತವಿಕ ಸಮಸ್ಯೆಗಳನ್ನು ಎಲ್ಲ ಪ್ರಜೆಗಳು ಅರಿತು ಆ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯೇ ಚುನಾವಣೆ. ಶಾಂತಿ ಮತ್ತು ನೆಮ್ಮದಿಯಿಂದ ಜನರು ಜೀವನ ಸಾಗಿಸುವ ಸುಂದರ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ನಡೆಸಲಾಗುತ್ತದೆ. ಹಾಗಾದರೆ, ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳ ಉದ್ದೇಶ ನೆರವೇರುತ್ತಿದೆಯೇ ಎಂಬುದು ಮೂಲ ಪ್ರಶ್ನೆ.


ಇಂದು‌ ಜನರು ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಬೇಕಾದ ಪ್ರಮುಖ 5 ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನೆ ಮಾಡುವ ಅವಶ್ಯಕತೆಯಿದೆ.


1. ಮುಂದಿನ 20-30 ವರ್ಷಗಳಲ್ಲಿ ಮಣ್ಣು ನಾಶವಾಗುವುದರಿಂದ 200 ಕೋಟಿ ಜನಸಂಖ್ಯೆ ಹಸಿವಿನಿಂದ ಬಳಲಿ ಸಾಯುವ ಪರಿಸ್ಥಿತಿ ಬರುವುದೆಂದು ವಿಶ್ವ ಸಂಸ್ಥೆ ಹೇಳಿದೆ. ಇದರ ಪರಿಣಾಮ ಈಗಾಗಲೇ ಕೆಲವು ದೇಶಗಳಲ್ಲಿ ಹಲವು ರೂಪಗಳಲ್ಲಿ ವ್ಯಕ್ತವಾಗುತ್ತಿದೆ. 


2. ಮಾನಸಿಕ ರೋಗ ಸಾಂಕ್ರಾಮಿಕವಾಗಿ ಹರಡುತ್ತಿದೆ, ಇದು ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಈ ಸಮಸ್ಯೆಯನ್ನೂ ಕೂಡ ಹಲವು ರೂಪಗಳಲ್ಲಿ ಸಮಾಜದಲ್ಲಿ ಈಗಾಗಲೇ‌ ಕಾಣುತ್ತಿದ್ದೇವೆ. 


3. ರೈತರು ಕೃಷಿಯಲ್ಲಿ ಭರವಸೆ ಕಳೆದುಕೊಂಡು ಕೃಷಿ ವೃತ್ತಿಯನ್ನು ತ್ಯಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ದೇಶದಲ್ಲಿ 2 ಪ್ರತಿಶತ ರೈತರ ಮಕ್ಕಳೂ ಕೂಡ ಕೃಷಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.


4. ಭಾರತ ದೇಶದಲ್ಲಿ 90 ಪ್ರತಿಶತ ಯುವಕರು ಯಾವುದಾದರೂ ಚಟಕ್ಕೆ ಒಳಗಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸ್ವತಃ ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದಕ್ಕೆ ಮೂಲ ಕಾರಣವನ್ನು ಶೋಧಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ.


5. ಮುಂದಿನ 5 ವರ್ಷಗಳಲ್ಲಿ ಇಂದು ಜನರಿಗೆ ದೊರೆಯುತ್ತಿರುವ ಅರ್ಧದಷ್ಟು ನೀರು ಕೂಡ ದೊರೆಯದೇ ಜನರು ತೀವ್ರವಾದ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ವಿಜ್ಣಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ನಿದರ್ಶನವೆಂದರೆ, ಗ್ರಾಮಗಳಲ್ಲಿರುವ ಹಳ್ಳಗಳು ಬಹು ಬೇಗನೆ ಬತ್ತಿ ಹೋಗುತ್ತಿವೆ.


ಈ ಮೇಲಿನ ಸಮಸ್ಯೆಗಳೊಂದಿಗೆ ಇನ್ನೂ ಹಲವು ವಾಸ್ತವಿಕ ಸಮಸ್ಯೆಗಳನ್ನು ಪಟ್ಟಿ‌ ಮಾಡಬಹುದು.


ಇಂದು ಪ್ರಜೆಗಳು ವಾಸ್ತವಿಕ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬುದು ಮೂಲ ಪ್ರಶ್ನೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿಯವರೆಗೆ ಜನರಿಗೆ ವಾಸ್ತವಿಕ ಸಮಸ್ಯೆಗಳ ಅರಿವು ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.


ಹಾಗಾದರೆ, ಸಾಮಾಜಿಕ ಸಮಸ್ಯೆಗಳ ಕುರಿತು ಆಳವಾಗಿ ಚಿಂತನೆ ನಡೆಸಿ ಜನಸಾಮಾನ್ಯರಿಗೂ ತಿಳಿಸುವ ಕೆಲಸವನ್ನು ಯಾರು ಮಾಡಬೇಕು? ಖಂಡಿತ, ಪ್ರಜ್ಞಾವಂತರು ಇಂದಿನ‌ ವಾಸ್ತವಿಕ ಸಮಸ್ಯೆಗಳ ಕುರಿತು ಆಳವಾಗಿ ಚಿಂತನೆ ನಡೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಈ ಮೂಲಕ ನಾಯಕರಾಗಲು ಬಯಸುವವರೂ ಕೂಡ ವಾಸ್ತವಿಕ ಸಮಸ್ಯೆಗಳ ಕುರಿತು ಮಾತನಾಡಿ ಜನರ ಮತ ಪಡೆಯುವ ವಾತಾವರಣ ನಿರ್ಮಾಣ ಮಾಡಬೇಕು. 


ವೈಯಕ್ತಿಕ, ಸಾಮಾಜಿಕ ಮತ್ತು ಪ್ರಕೃತಿಯ ಕುರಿತು ಆಳವಾದ ಅರಿವು ಮೂಡಿಸಿಕೊಳ್ಳುವುದೇ ಆಧ್ಯಾತ್ಮ. ಹಾಗಾದರೆ, ಆಧ್ಯಾತ್ಮಿಕ ನಾಯಕರು ವಾಸ್ತವಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಿಕೊಂಡು, ಆ ಸಮಸ್ಯೆಗಳ ಕುರಿತು ಚಿಂತನೆ ನಡೆಸಲು ಸೂಕ್ತ ವೇದಿಕೆಗಳನ್ನು ನಿರ್ಮಿಸುವ ಮತ್ತು ಆ ನಿಟ್ಟಿನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ. ಸ್ವಾಮಿ ವಿವೇಕಾನಂದರು ಸ್ವಂತ ಮುಕ್ತಿಗಾಗಿ ಹಂಬಲಿಸಿದಾಗ, ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು, "ಸ್ವಂತ ಮುಕ್ತಿಗಿಂತ‌ ಹಲವು ಸಮಸ್ಯೆಗಳಿಂದ‌ ತೊಳಲಾಡುತ್ತಿರುವ ಸಮಾಜವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವುದೇ‌ ಶ್ರೇಷ್ಠ" ಎಂಬ ಮಾತು ಹೇಳಿರುವುದನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ.


ಸಮಾಜದಲ್ಲಿ ಶಾಂತವಾದ ವಾತಾವರಣ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಇಡೇರಲು ಸಾಧ್ಯ.‌ ಅಂದರೆ, ಶಾಂತಿ‌ ಮಾರ್ಗದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಂದಿನ ಕೆಲವೇ ವರ್ಷಗಳಲ್ಲಿ ಸಮಸ್ಯೆಗಳು ತೀವ್ರವಾಗಿ ಉಲ್ಭಣಗೊಳ್ಳುವ ಸಾಧ್ಯತೆಯಿದೆ. ಅಂತಹ ಅಶಾಂತಿಯ ಸಂದರ್ಭಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಇಡೇರಲು ಸಾಧ್ಯವಿಲ್ಲ. 


ಇಂದು ಸಮಾಜದಲ್ಲಿ ವಾಸ್ತವಿಕ ಸಮಸ್ಯೆಗಳ ಕುರಿತು ಚಿಂತನೆ ನಡೆಸಲು ಹಲವು ವೇದಿಕೆಗಳನ್ನು ನಿರ್ಮಿಸುವುದಕ್ಕೆ ಸುಕಾಲ. ಈ ನಿಟ್ಟಿನಲ್ಲಿ‌ ಆಧ್ಯಾತ್ಮಿಕ ನಾಯಕರು ಮತ್ತು ಪ್ರಜ್ಞಾವಂತರು ಮುಂದಿನ ಪೀಳಿಗೆಯ ಉಳಿವಿಗಾಗಿ ತಮ್ಮ ಪ್ರಯತ್ನವನ್ನು ಮಾಡಲೇಬೇಕಾದೆ. ಇದು ಇಂದಿನ ಅವಶ್ಯಕತೆಯಾಗಿದೆ...ಯೋಚಿಸಿ!

...........................................

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...

  https://missionsavesoil.blogspot.com/2023/02/blog-post_23.html


🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶುಕ್ರವಾರ, ಮಾರ್ಚ್ 10, 2023

.

ಈ ಕೆಳಕಂಡ ಸಂಪನ್ಮೂಲಗಳನ್ನು ಉಪಯೋಗೊಸಿ ಭಾಷಣ ಸಿದ್ದಪಡಿಸಿ.

1. ಪೂಜ್ಯ ಶ್ರಿ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪೆಯಿಂದ ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ಬರೆದ ಪುಸ್ತಕವು ಉಚಿತವಾಗಿ PDF ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು ಓದಿ.
https://drive.google.com/uc?export=download&id=1VVOHZ5lgyY0B_lEXig1k1JmWVb4lNV3R
https://drive.google.com/file/d/1tXWS9wf4nhqJc3XIqE1lAYTZJbmSBCgu/view?usp=sharing 
2. ಶ್ರೀ ಬಸವರಾಜ ಬಿರಾದಾರ (ಅಭೀಃ) ಅವರು ರೇಡಿಯೋ ಸಂದರ್ಶನದಲ್ಲಿ ಮಣ್ಣು ಉಳಿಸಿ ಅಭಿಯಾನದ‌ ಕುರಿತು ಮಾತನಾಡಿದ ಅಡಿಯೋ ಅಲಿಸಿ
https://missionsavesoil.blogspot.com/2023/02/blog-post_23.html


3. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ವಿಡಿಯೋಗಳನ್ನು ಆಲಿಸಿ

Registration Form

 




British Crisis

 

ರೈತರ ಸಾಲ ಮನ್ನಾ ತಾತ್ಕಾಲಿಕ ಪರಿಹಾರ ಮಾತ್ರ ನೀಡುವುದು. ಹಾಗಾದರೆ...

 ರೈತರ ಸಾಲ ಮನ್ನಾ ತಾತ್ಕಾಲಿಕ ಪರಿಹಾರ ಮಾತ್ರ ನೀಡುವುದು. ಹಾಗಾದರೆ, ದೀರ್ಘ ಕಾಲದ ಪರಿಹಾರ ಯಾವುದು?


ರೈತರ ಸಾಲ ಮನ್ನಾ ಮಾಡಿದರೆ ಸಾಲ ಮಾಡಿದ ರೈತರಿಗೆ ಮತ್ತು ಸಾಲ ಮನ್ನಾ ಮಾಡುವ ಭರವಸೆ ನೀಡಿ ರೈತರ ಮತ ಪಡೆದ ನಾಯಕರಿಗೆ ಮಾತ್ರ ಲಾಭ. ಹಾಗಾದರೆ, ಸಾಲ ಮಾಡದ ರೈತರಿಗೆ ಖಂಡಿತ ಇದರಿಂದ ಲಾಭವಿಲ್ಲ. ಸಾಲ ಮಾಡದಿದ್ದರೆ ಲಾಭವಿಲ್ಲ ಎಂದು ತಿಳಿದ ಅನೇಕ ರೈತರು ಮುಂದಿನ ದಿನಗಳಲ್ಲಿ ಸಾಲ ಮನ್ನಾ ಲಾಭ ಪಡೆಯಲು ಸಾಲಗಾರರಾಗುವ ಸಾಧ್ಯತೆ ಖಂಡಿತ ಇದೆ. ಸಾಲ ಮನ್ನಾ ಮಾಡುವುದಕ್ಕೆ ಸರ್ಕಾರಗಳು ಆದ್ಯತೆ ನೀಡಿದಂತೆ, ಸಾಲಗಾರರು ಸಾಲ ಮರುಪಾವತಿ ಮಾಡಲು ಮನಸ್ಸು ಮಾಡದಿರುವುದು ಸಾಮಾನ್ಯ. ಒಟ್ಟಾರೆಯಾಗಿ ಸಾಲ ಮನ್ನಾ  ಯೋಜನೆಯು ದಿನ ಕಳೆದಂತೆ ರೈತರನ್ನು ಹೆಚ್ಚಿಗೆ ಸಾಲಗಾರರನ್ನಾಗಿ ಮಾಡುವ ಸಾಧ್ಯತೆಗಳೇ ಹೆಚ್ಚಾಗಿವೆ ಹೊರತು, ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾರವು.


ಸಾಮಾನ್ಯವಾಗಿ ರೈತರ ಸಾಲ ಎಷ್ಟು ಹೆಚ್ಚಾಗುವುದೋ ಅಷ್ಟು ಅವರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕುಂದುತ್ತಾ ಹೋಗುವುದು. ಈಗಾಗಲೇ ಇದು ಹಲವು ರೂಪಗಳಲ್ಲಿ ರೈತಾಪಿ ವರ್ಗದಲ್ಲಿ ವ್ಯಕ್ತವಾಗುತ್ತಿದೆ. ಇದೇ ರೀತಿ ಬೇಜವಾಬ್ದಾರಿ ನಾಯಕರಿಂದ ಬೇಜವಾಬ್ದಾರಿ ಯೋಜನೆಗಳು ಜಾರಿಯಾದದ್ದೇ ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಭಾರತ ದೇಶ ತೀವ್ರತರವಾದ ಆಹಾರದ ಕೊರತೆಯನ್ನು ಅನುಭವಿಸುವ ಸಾಧ್ಯತೆಯಿದೆ. 


ಆಹಾರದ ಕೊರತೆ ಸಮಸ್ಯೆಯು ಆಫ್ರಿಕಾ, ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರಾರಂಭವಾಗಿದೆ ಎಂದು ಕೇಳುತ್ತಿದ್ದೇವು. ಅದರೆ, ಆ ದೇಶಗಳೊಂದಿಗೆ ಹೊಸದಾಗಿ ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದಾದ ಬ್ರಿಟನ್ ದೇಶ ಸೆರ್ಪಡೆಯಾಗಿರುವುದು ಜಗತ್ತಿನ ಎಲ್ಲ ದೇಶಗಳಿಗೂ ಎಚ್ಚರಿಕೆಯ ಕರೆ ಘಂಟೆಯಾಗಿದೆ. ಬ್ರಿಟನ್ ದೇಶದಲ್ಲಿ ಒಂದು ಕೋಟಿಗಿಂತ ಅಧಿಕ ಜನರು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಸುಮಾರು 40 ಲಕ್ಷ ಮಕ್ಕಳಿಗೆ ದಿನದ ಮೂರು ಹೊತ್ತಿನ ಊಟ ದೊರೆಯುತ್ತಿಲ್ಲ. ಬ್ರಿಟನ್ ದೇಶದ ಹತ್ತು ಜನರಲ್ಲಿ ಒಬ್ಬರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳು ಉದ್ಭವವಾಗಲು ಮೂಲ‌ ಕಾರಣವೇ ಪ್ರಜ್ಞೆ ಇಲ್ಲದೇ ಆಡಳಿತ ನಡೆಸಿದ ಮತ್ತು ನಡೆಸುತ್ತಿರುವ ನಾಯಕರು.


ರೈತರ ಸಾಲ ಮನ್ನಾ ಯೋಜನೆಯು ತಾತ್ಕಾಲಿಕ ಪರಿಹಾರ ನೀಡಿ ದೀರ್ಘ ಕಾಲದವರೆಗೆ ಎಲ್ಲರೂ ಸಮಸ್ಯೆ ಎದುರಿಸುವಂತೆ ಮಾಡುತ್ತದೆ. ಇದೇ ಕಾರಣಕ್ಕೆ  ಸದ್ಗುರು ಅವರು *ಮಣ್ಣು ಉಳಿಸಿ* ಅಭಿಯಾನ ಪ್ರಾರಂಭಿಸುವ ಮೂಲಕ ಸರ್ಕಾರಗಳಿಗೆ "ಮಣ್ಣು ಪುನಶ್ಚೇತನ ಕಾನೂನನ್ನು ನೀಡಿದ್ದಾರೆ".  ಈ ಕಾನೂನನ್ನು ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸಿದ್ದೇ ಆದರೆ,  ಅದು ದೀರ್ಘ ಕಾಲದವರೆಗೆ ರೈತರಿಗೆ ಲಾಭ ನೀಡಿ, ಮುಂದಿನ ಪೀಳಿಗೆಗೂ ಆಹಾರದ ಕೊರತೆ ಆಗದಂತೆ ಮಾಡಿ ಎಲ್ಲರನ್ನೂ ರಕ್ಷಿಸುತ್ತದೆ. ಆದರೆ, ರೈತರಿಗೆ ಲಾಭ ನೀಡುವ ಈ ಕಾನೂನಿನ‌ ಕುರಿತು ಯಾವ ನಾಯಕರೂ ಕೂಡ ಚುನಾವಣೆ ಸಂದರ್ಭದಲ್ಲಿ ಮಾತನಾಡದೇ ಇರುವುದು ಇಂದಿನ ವಿಪರ್ಯಾಸ. ಯಾವ ಯೋಜನೆಗಳು ಕೃಷಿ ಸಂಸ್ಕೃತಿಯನ್ನು ನಾಶ ಮಾಡಿ ಮಾನವ ಕುಲಕ್ಕೆ ಕಂಟಕವಾಗುವವೋ ಅವುಗಳ ಕುರಿತು ಮಾತನಾಡುತ್ತಿರುವುದು ಅವರ ಪ್ರಜ್ಞಾವಂತಿಕೆಯ ಕೊರತೆಯನ್ನು ಎದ್ದು ತೋರಿಸುತ್ತಿದೆ.


ಮಣ್ಣು ಪುನಶ್ಚೇತನ ಕಾನೂನಿನ ಕುರಿತು ಪೂರ್ಣ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ... http://missionsavesoil.blogspot.com/2023/03/blog-post_1.html


ಇಂದು ಪ್ರಜ್ಞಾವಂತರು ಮುಂದಿನ ಪೀಳಿಗೆಯ ದೃಷ್ಟಿಕೋನದಿಂದ ವಾಸ್ತವಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಎಂತಹ ನಾಯಕರು ಸೂಕ್ತ ಪರಿಹಾರ ನೀಡಬಲ್ಲರು ಎಂಬುದನ್ನು ಜನಸಾಮಾನ್ಯರಿಗೆ ತಿಳಿಸುವ ಅವಶ್ಯಕತೆಯಿದೆ.

...........................................

ಪ್ರಜ್ಞಾವಂತರು ತಾವು ವಾಸ್ತವಿಕ ಸಮಸ್ಯೆಗಳನ್ನು ಅರಿತು ಇತರರಿಗೆ ಅರಿವು ಮೂಡಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...

  https://missionsavesoil.blogspot.com/2023/02/blog-post_23.html


🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಮಾರ್ಚ್ 9, 2023

ಸಂದರ್ಶನ ದಿನ ಪತ್ರಿಕೆ


 ಸಂದರ್ಶನ ದಿನ ಪತ್ರಿಕೆ

9-Marcg-2023